ಭುವನೇಶ್ವರ: ಪಂಚಾಯಿತಿ ಚುನಾವಣೆಯಲ್ಲಿ ಸರ್‌ಪಂಚ್ ಸ್ಥಾನಕ್ಕೆ ಸ್ಪರ್ಧಿಸಿರುವ ಮಹಿಳೆಗೆ ಮೀನಿನ ಚಿಹ್ನೆ ನೀಡಿರುವ ಹಿನ್ನೆಲೆಯಲ್ಲಿ ಜೀವಂತ ಮೀನಿನೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ.
ಭುವನೇಶ್ವರದ ಪಾಪದಹಂಡಿ ಬ್ಲಾಕ್‌ನ ಪತ್ರಿ ಪಂಚಾಯಿತಿಯ ವ್ಯಾಪ್ತಿಯಲ್ಲಿ ಮತದಾರರ ಆಗಮನ ಸೆಳೆಯಲು ಅಭ್ಯರ್ಥಿ ಜೀವಂತ ಮೀನನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ತೆರಳಿ ತಮಗೆ ಮತ ನೀಡುವಂತೆ ಕೇಳುತ್ತಿದ್ದಾರೆ. ನಬರಂಗಪುರ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಭಗಬತಿ ಭಟ್ರಾ ಅವರೇ ಈ ರೀತಿ ಕ್ಯಾಂಪೇನ್‌ಗೆ ಮುಂದಾಗಿರುವವರು. ಸರಪಂಚ್ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಅದೇ ರೀತಿ ಬಾಲಸೋರ್ ಜಿಲ್ಲೆಯ ಕುಸುದಾ ಪಂಚಾಯತ್‌ನಿಂದ ಸಮಿತಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ದುರ್ಗಾಮಣಿ ಜೆನಾ ಕೈಯಲ್ಲಿ ಕಡಾಯಿ ಹಿಡಿದು ಮತದಾರರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದಾರೆ.
ಕೋರಾಪುಟ್ ಜಿಲ್ಲೆಯ ಮಠಲ್‌ಪುಟ್ ಬ್ಲಾಕ್‌ನಿಂದ ಜಿಲ್ಲಾ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಸಸ್ಮಿತಾ ಖಾರ ಅವರು ಕೈಯಲ್ಲಿ ಟಿವಿ ಹಿಡಿದು ಮತ ಕೇಳುತ್ತಿದ್ದಾರೆ. ಒಡಿಶಾದಲ್ಲಿ ಫೆ.16ರಂದು ಮೂರು ಹಂತಗಳಲ್ಲಿ ಪಂಚಾಯಿತಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:9.2 ಡಿಗ್ರಿ ಸೆಂಟಿಗ್ರೇಡ್ ನೀರಿನಲ್ಲಿ ಕುಳಿತು ವ್ಯಕ್ತಿ ಸಾಹಸ.. ಪತ್ನಿಯೂ ಸಾಹಸಿಯೇ..