ಪಣಜಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಗೋವಾಗೆ ಬಂದಿದ್ದು, ಇಲ್ಲಿ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪೋಂಡಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದ್ದು, ಬಿಜೆಪಿಗೆ ಗೋವಾ ಎಂದರೆ ಗೋಲ್ಡನ್ ಗೋವಾ. ಆದರೆ ಕಾಂಗ್ರೆಸ್‌ಗೆ ಗೋವಾ ಎಂದರೇ, ‘ಗಾಂಧಿ ಪರಿವಾರ ಕಾ ಗೋವಾ’ ಎಂದರ್ಥ. ಅವರಿಗೆ ರಜೆಯನ್ನು ಕಳೆಯಲು ಒಂದು ತಾಣವಾಗಿ ಗೋವಾ ಬೇಕು ಅಷ್ಟೇ ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಶೇ.75ರಷ್ಟು ವಯಸ್ಕರರಿಗೆ ಸಂಪೂರ್ಣ ಲಸಿಕೆ ನೀಡಲಾಗಿದೆ : ಮನ್ಸುಖ್ ಮಾಂಡವಿಯಾ
ಗೋವಾದಲ್ಲಿ ಬಿಜೆಪಿ ಅಭಿವೃದ್ಧಿ ಮಾಡಿದೆ. ಗಾಂಧಿ ಕುಟುಂಬಕ್ಕೆ ಗೋವಾ ಕೇವಲ ವಿಹಾರ ತಾಣವಾಗಿದೆ. ನಾವು ರಾಜ್ಯದ ಬಜೆಟ್ನನ್ನು 432 ಕೋಟಿಯಿಂದ (2013-14) 2,567 ಕೋಟಿಗಳಿಗೆ (ವರ್ಷ 2021) ಹೆಚ್ಚಿಸಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿ ಮಾಡಲು ಮಾಜಿ ಸಿಎಂ ದಿಗಂಬರ್ ಕಾಮತ್ ಏನೂ ಮಾಡಿಲ್ಲ. ನಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಪೋಂಡಾದಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ