ETV Bharat / bharat

ಭಾರತದೊಳಗೆ ಪಾಕಿಸ್ತಾನದ ಡ್ರೋನ್​ನಿಂದ ಶಸ್ತ್ರಗಳು, ರಾಸಾಯನಿಕಗಳ ರವಾನೆ : ಪೊಲೀಸರ ತನಿಖೆ - ಡ್ರೋನ್ ಮೂಲಕ ರಾಸಾಯನಿಕಗಳ ರವಾನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನ ಹಲವು ರೀತಿಯ ತಂತ್ರಗಳನ್ನು ಹೂಡುತ್ತಿದ್ದು, ಡ್ರೋನ್​ನಲ್ಲಿ ರಾಸಾಯನಿಕ ವಸ್ತುವೊಂದನ್ನು ಭಾರತದ ಗಡಿಯೊಳಗೆ ಬೀಳಿಸಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ..

Pakistani drone dropped ammunition, IEDs in J-K; first time chemical in liquid form sent with consignment:
ಭಾರತದೊಳಗೆ ಪಾಕಿಸ್ತಾನದ ಡ್ರೋನ್​ನಿಂದ ಶಸ್ತ್ರಗಳು, ರಾಸಾಯನಿಕಗಳ ರವಾನೆ: ಪೊಲೀಸರ ತನಿಖೆ
author img

By

Published : Feb 26, 2022, 12:58 PM IST

ಉಧಾಂಪುರ, ಜಮ್ಮು-ಕಾಶ್ಮೀರ : ಭಯೋತ್ಪಾದಕ ಚಟುವಟಿಕೆಗಳ ತಾಣವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನ ಹಲವು ರೀತಿಯ ತಂತ್ರಗಳನ್ನು ಹೂಡುತ್ತಿದೆ ಎಂದು ಗುರುವಾರ ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದು, ಡ್ರೋನ್ ಮೂಲಕ ಕುಕೃತ್ಯಗಳನ್ನು ಜರುಗಿಸುತ್ತಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪಾಕಿಸ್ತಾನದ ಡ್ರೋನ್ ಬುಧವಾರ ಜಮ್ಮು ಕಾಶ್ಮೀರದಲ್ಲಿ ಪ್ರದೇಶದಲ್ಲಿ ಗ್ರೆನೇಡ್‌ಗಳು, ಐಇಡಿ, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಎಸೆದಿದೆ. ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ದ್ರವರೂಪದಲ್ಲಿ ರಾಸಾಯನಿಕವನ್ನು ಡ್ರೋನ್​ ಮೂಲಕ ಭಾರತದ ಭೂಮಿಯೊಳಗೆ ಬೀಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್​,ಪಾಕಿಸ್ತಾನದ ಡ್ರೋನ್ ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೆನೇಡ್, ಐಇಡಿ, ಪಿಸ್ತೂಲ್, ಮದ್ದುಗುಂಡುಗಳನ್ನು ಬೀಳಿಸಿದೆ. ದ್ರವರೂಪದ ರಾಸಾಯನಿಕ ಕೂಡ ಕಂಡು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ದೀರ್ಘಕಾಲದಿಂದ ಇಲ್ಲಿ ಕಾಪಾಡಿಕೊಂಡಿರುವ ಶಾಂತಿಯನ್ನು ಕದಡಲು ಬಯಸುತ್ತಿದೆ. ಭಾರತದ ಭೂಮಿಯೊಳಗೆ ಬೀಳಿಸಲಾಗಿರುವ ರಾಸಾಯನಿಕದ ಯಾವುದು?, ಅದರ ಉಪಯೋಗಗಳೇನು?, ಆ ರಾಸಾಯನಿಕದ ಮೂಲಕ ಯಾವ ರೀತಿ ಹಾನಿ ಮಾಡಬಹುದು? ಎಂಬ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತಿದೆ ಎಂದು ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ ತರಬೇತಿ ವಿಮಾನ ಪತನ: ಪೈಲಟ್, ಟ್ರೈನಿ ಪೈಲಟ್ ದುರ್ಮರಣ

ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಈ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟದಿಂದ ಬಂದ ಹಣವನ್ನು ಭಯೋತ್ಪಾದನೆಗೆ ಬಳಸಲಾಗುತ್ತದೆ ಎಂದು ದಿಲ್ಬಾಗ್ ಸಿಂಗ್ ತಿಳಿಸಿದ್ದು, ಮಾದಕ ದ್ರವ್ಯಗಳ ಸಾಗಾಟ ನಮಗೆ ಹೊಸ ಸವಾಲಾಗಿದ್ದು, ಇದನ್ನು ನಿಯಂತ್ರಿಸಲು ಹೊಸ ಪ್ರತಿತಂತ್ರಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.