ETV Bharat / bharat

ಕಾಶ್ಮೀರ: ಬಾರ್ಡರ್​​​ ಪೋಸ್ಟ್‌, ಗ್ರಾಮ ಗುರಿಯಾಗಿಸಿ ಪಾಕ್​ನಿಂದ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಬಾರ್ಡರ್​​​ ಪೋಸ್ಟ್‌ಗಳು ಮತ್ತು ಹಳ್ಳಿಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ರೇಂಜರ್ಸ್ ಗುಂಡು ಹಾರಿಸಿದ್ದಾರೆ. ಶನಿವಾರ ರಾತ್ರಿ 10.25ರ ಸುಮಾರಿಗೆ ಗುಂಡಿನ ದಾಳಿ ನಡೆಸಲಾಗಿದೆ.

IB in JK's Kathua
ಪಾಕ್​ನಿಂದ ಗುಂಡಿನ ದಾಳಿ
author img

By

Published : Feb 21, 2021, 3:33 PM IST

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (ಐಬಿ) ಬಳಿ ಇರುವ ಬಾರ್ಡರ್​​​ ಪೋಸ್ಟ್‌ಗಳು ಮತ್ತು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಸೇನೆ ಗುಂಡಿನ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಹಿರಾನಗರ ಸೆಕ್ಟರ್‌ನ ಬಾರ್ಡರ್ ಪೋಸ್ಟ್ ಬೊಬಿಯಾ ಪ್ರದೇಶವನ್ನು ಗುರಿಯಾಗಿಸಿಕೊಂಡು ಗಡಿಯುದ್ದಕ್ಕೂ ಶನಿವಾರ ರಾತ್ರಿ 10.25ರ ಸುಮಾರಿಗೆ ಗುಂಡಿನ ದಾಳಿ ನಡೆಸಲಾಗಿದೆ. ಇದಕ್ಕೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯಿಂದಲೂ ಕೂಡ ತಕ್ಕ ಉತ್ತರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ:ಮತ್ತೆ ಐವರ ಮೃತದೇಹ ಪತ್ತೆ.. ಚಮೋಲಿ ದುರಂತದಲ್ಲಿ ಪ್ರಾಣತೆತ್ತವರ ಸಂಖ್ಯೆ 67ಕ್ಕೆ ಏರಿಕೆ

ಮುಂಜಾನೆ 4:30 ರವರೆಗೆ ಎರಡೂ ಕಡೆಯ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಯಾವುದೇ ಪ್ರಾಣ ಮತ್ತು ಆಸ್ತಿ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ಈ ಕದನ ವಿರಾಮ ಉಲ್ಲಂಘನೆಯು ಈ ವಲಯದಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಯ ಹಲವಾರು ದಿನಗಳ ವಿರಾಮವನ್ನು ಮುರಿದಿದ್ದು, ಗಡಿಯ ನಿವಾಸಿಗಳು ಸುರಂಗದ ಬಂಕರ್‌ಗಳಲ್ಲಿ ರಾತ್ರಿ ಕಳೆಯುವಂತಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.