ETV Bharat / state

ಮಲೆನಾಡ ಕರಕುಶುಲ ಹಾಗೂ ಪುಷ್ಪಸಿರಿ ಮೇಳ : ಹೂವಿನಲ್ಲೇ ಅರಳಿದ ಕುಪ್ಪಳ್ಳಿ ಮನೆ, ಸೊರಬ ಚಂದ್ರಗುತ್ತಿ ಗುಡಿ - HANDICRAFT AND FLOWER SHOW

ಶಿವಮೊಗ್ಗದಲ್ಲಿ ಕರಶುಲ ಹಾಗೂ ಪುಷ್ಪಸಿರಿ ಮೇಳ ನಡೆಯುತ್ತಿದ್ದು, ಹೂವುಗಳಿಂದ ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿಯ ಮನೆಯ ಪ್ರತಿಕೃತಿ, ಸೊರಬ ಭಾಗದ ಚಂದ್ರ ಗುತ್ತಿಯ ರೇಣುಕಾಂಬ ದೇವಿಯ ದೇವಾಲಯವನ್ನು ಮಾಡಲಾಗಿದೆ.

FLOWER SHOW 2025  SHIVAMOGGA  KUPPALLI HOUSE  ಪುಷ್ಪಸಿರಿ ಮೇಳ
ಪುಷ್ಪದಲ್ಲಿ ಅರಳಿದ ಕುಪ್ಪಳ್ಳಿ ಮನೆ (ETV Bharat)
author img

By ETV Bharat Karnataka Team

Published : Jan 25, 2025, 3:09 PM IST

ಶಿವಮೊಗ್ಗ: ನಗರದ ಅಲ್ಲಮಪ್ರಭು ಮೈದಾನದಲ್ಲಿ ಮೂರು ದಿನಗಳಕಾಲ ಮಲೆನಾಡ ಕರಕುಶುಲ ಹಾಗೂ ಪುಷ್ಪಸಿರಿ ಮೇಳ ಮಲೆನಾಡಿಗರ ಗಮನ ಸೆಳೆದಿದೆ. ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ಮಲೆನಾಡಿಗರ ಅಭಿರುಚಿಗೆ ತಕ್ಕಂತೆ ವಿವಿಧ ಹೂವುಗಳಿಂದ ನಿರ್ಮಾಣ ಮಾಡಿರುವ ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿಯ ಮನೆಯ ಪ್ರತಿಕೃತಿ, ಸೊರಬ ಭಾಗದ ಚಂದ್ರ ಗುತ್ತಿಯ ರೇಣುಕಾಂಬ ದೇವಿಯ ದೇವಾಲಯ, ಗರಿಬಿಚ್ಚಿ ಕುಣಿಯುತ್ತಿರುವ ನವಿಲು, ಪ್ರವೇಶ ದ್ವಾರದಲ್ಲಿಯೇ ಇರುವ ಐ-ಲವ್ -​ಯು ಶಿವಮೊಗ್ಗದ ಸೆಲ್ಫಿ ಬೂತ್​ ಸೇರಿದಂತೆ ವಿವಿಧ ಕರಕುಶಲ ಕರ್ಮಿಗಳಿಂದ ವಿವಿಧ ಸ್ಟಾಲ್​ಗಳನ್ನು ತೆರೆಯಲಾಗಿದೆ.

ಮಿಂಚಿದ ರೇಣುಕಾಂಬ ಗುಡಿ: ಕುಪ್ಪಳ್ಳಿಯ ಮನೆ, ನವಿಲು, ರೇಣುಕಾಂಬ ದೇವಿಯ ಗುಡಿ ಹಾಗು ಐ ಲವ್​ಯು ಶಿವಮೊಗ್ಗ ಎಲ್ಲವು ಸೇರಿ ಒಟ್ಟು‌ 4.87 ಲಕ್ಷದ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ. ಇವುಗಳು ಆಕರ್ಷಣೆಯ ಕೇಂದ್ರವಾಗಿವೆ. ಪುಷ್ಪ ಸಿರಿಯ ವಿವಿಧ ಪ್ರತಿಕೃತಿಯ ಸುತ್ತ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿವೆ. ಇದನ್ನೂ ಈ ಜರ್ಮನ್​ ಟೆಂಟ್​ ಹೊರ ಭಾಗದಲ್ಲಿ ವಿವಿಧ ಕರ್ಮಷಿಯಲ್​ಗೆ ಅವಕಾಶ ಮಾಡಿಕೊಡಲಾಗಿದೆ.

ಮಲೆನಾಡ ಕರಕುಶುಲ ಹಾಗೂ ಪುಷ್ಪಸಿರಿ ಮೇಳ : ಪುಷ್ಪದಲ್ಲಿ ಅರಳಿದ ಕುಪ್ಪಳ್ಳಿ ಮನೆ, ಸೊರಬ ಚಂದ್ರಗುತ್ತಿ ಗುಡಿ (ETV Bharat)

ಜಿಲ್ಲೆಯ ಎಲ್ಲ ತಾಲೂಕುಗಳಿಂದ ರೈತರು ಬೆಳೆದ ವಿವಿಧ ಹಣ್ಣುಗಳ ಹಾಗೂ ತರಕಾರಿಗಳ ಪ್ರದರ್ಶನ ನಡೆಸಲಾಗುತ್ತಿದೆ. ಇದರ ಜೊತೆಗೆ ಮಲೆನಾಡಿನ ಕರಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ. ಇದರ ಸದುಪಯೋಗವನ್ನು ಜಿಲ್ಲೆಯ ಜನತೆ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಉಪ‌ನಿರ್ದೆಶಕರಾದ ಸವಿತ ಅವರು ಮನವಿ ಮಾಡಿದ್ದಾರೆ.

FLOWER SHOW 2025  SHIVAMOGGA  KUPPALLI HOUSE  ಪುಷ್ಪಸಿರಿ ಮೇಳ
ಮಲೆನಾಡ ಕರಕುಶುಲ ಹಾಗೂ ಪುಷ್ಪಸಿರಿ ಮೇಳ (ETV Bharat)

ಹಳ್ಳಿ ಸೊಗಡು ಹೆಚ್ಚಿಸಿದ ಈಚಲ:

ಪುಷ್ಪ ಸಿರಿ ಮೇಳದ ಈಚಲ ಸ್ಟಾಲ್​ನ ಸಂಧ್ಯಾ ಅವರು ಮಾತನಾಡಿ, "ಈಚಲ ಹಸೆಯನ್ನು ನಾನು ತಂದಿದ್ದೇನೆ. ಈಗಿನ ಕಾಲದಲ್ಲಿ ಈಚಲು ಚಾಪೆ, ಈಚಲ ಹಸೆ ಅಂದ್ರೆ ಯಾರಿಗೂ ಗೂತ್ತಿಲ್ಲ. ಇದು ಪರಿಸರ ಸ್ನೇಹಿಯಾಗಿದೆ. ಇದನ್ನು ಸ್ಥಳೀಯ ಅಜ್ಜಿರವರು ಮಾಡುತ್ತಿದ್ದಾರೆ. ಈಚಲು ಸಾಗರದ ತುಮರಿ ಭಾಗದಲ್ಲಿ ಹೆಚ್ಚಾಗಿ ಲಭ್ಯವಿದೆ. ಇದರಿಂದ ಈಚಲಿನ ವಸ್ತುಗಳು ನಶಿಸಿ ಹೋಗಬಾರದು ಎಂದು ಇದನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ಇದಕ್ಕೆ ಬೇಡಿಕೆ ಇದೆ. ಆದರೆ ಈಚಲು ಮರ, ಗಿಡಗಳು ನಶಿಸಿ ಹೋಗುತ್ತಿವೆ. ಇದನ್ನು ಬಳಸಿ ಬಿಸಾಡಿದರು ಸಹ ಇದು ಗೊಬ್ಬರವಾಗುತ್ತದೆ. ಇದರ ಬಳಕೆ‌ ಕಡಿಮೆ ಆಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.

ಪ್ರೇಕ್ಷಕರು ಹೇಳಿದ್ದು ಹೀಗೆ: "ಶಿವಮೊಗ್ಗದಲ್ಲಿ ನಡೆಯುತ್ತಿರುವ ಪುಷ್ಪ ಸಿರಿ ಮೇಳ ಚೆನ್ನಾಗಿ ನಡೆಯುತ್ತಿದೆ. ಇಲ್ಲಿ ಆರಂಭದಿಂದಲೂ ಕೊನೆ ತನಕ ಎಲ್ಲವು ಚೆನ್ನಾಗಿದೆ. ಇಲ್ಲಿ ನಮ್ಮನ್ನು ಸೆಳೆದಿದ್ದು ಕುವೆಂಪು ಅವರ ಕುಪ್ಪಳಿಯ ಮನೆ, ಚಂದ್ರಗುತ್ತಿ ದೇವಾಲಯ ಐ ಲವ್​ಯು ಶಿವಮೊಗ್ಗ ತುಂಬಾ ಇಷ್ಟವಾಯಿತು. ಅಲ್ಲದೇ ವಿವಿಧ ಹಣ್ಣುಗಳು - ತರಕಾರಿಗಳನ್ನು ಒಂದೇ ಕಡೆ ನೋಡುವುದು ಸಂತಸ ತಂದಿದೆ. ನಾನು ಇದನ್ನೆಲ್ಲಾ ನೋಡಿ ಎಂಜಾಯ್ ಮಾಡಿದ್ದೇನೆ. ಬಂಜಾರ್​ ಅವರ ವಸ್ತ್ರ, ಪೇಟಿಂಗ್ಸ್, ಕಲರ್ ಕಲರ್ ಹೂವಿನಲ್ಲಿ ಕುಪ್ಪಳ್ಳಿಯ ಮನೆ ನಿಜಕ್ಕೂ ಚೆನ್ನಾಗಿದೆ ಎಂದು ನೋಡುಗರಾದ" ಸವಿತಾ ಶರ್ವಿ ತಿಳಿಸಿದ್ದಾರೆ.

ಗಮನ ಸೆಳೆದ ಕುಪ್ಪಳ್ಳಿ ಮನೆ: ಭದ್ರಾವತಿಯ ನಾಗವೇಣಿ ಅವರು ಮಾತನಾಡಿ, "ನಾನು ಷುಪ್ಪ ಸಿರಿ ಮೇಳಕ್ಕೆ ಇದೇ ಮೊದಲ ಭಾರಿ ಆಗಮಿಸಿದ್ದು, ಇಲ್ಲಿ ಎಲ್ಲಾವು ಸಹ ನೋಡಲು ಸುಂದರವಾಗಿದೆ. ಮಣ್ಣಿನಿಂದ ಮಾಡಿದ ಕರಕುಶಲ ವಸ್ತುಗಳು, ಅನೇಕ ಸ್ಟಾಲ್​ಗಳಿವೆ. ಅಲ್ಲದೆ ಚಾಟ್ಸ್ ಸ್ಟಾಲ್ ಸಹ ಇದೆ. ಕುವೆಂಪು ಅವರ ಮನೆ ಫ್ಲವರ್ ನಲ್ಲಿ ನಿರ್ಮಾಣ ಮಾಡಿದ್ದು ನೋಡಿ‌ ಖುಷಿ ಆಯಿತು" ಎಂದರು.‌

ಇದನ್ನೂ ಓದಿ: 2 ಲಕ್ಷ ಹೂವುಗಳಲ್ಲಿ ಐಫೆಲ್​ ಟವರ್​, ಎಲೆಗಳಿಂದ ಕಂಬಳ ಕೋಣ: ಗಮನ ಸೆಳೆದ ಮಂಗಳೂರು ಫಲಪುಷ್ಪ ಪ್ರದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.