ETV Bharat / state

ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ತಪ್ಪಿಸಿ : ವಾಟಾಳ್ ನಾಗರಾಜ್ ಆಗ್ರಹ - MICROFINANCE TORTURE

ಮೈಕ್ರೋ ಫೈನಾನ್ಸ್​ಗಳ ಹಾವಳಿ ತಪ್ಪಿಸಿ ರಾಜ್ಯ ಸರ್ಕಾರ ಬಡವರಿಗೆ ರಕ್ಷಣೆ ಕೊಡಬೇಕು ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದರು.

vatal-nagaraj-protest-against-microfinance-torture
ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ (ETV Bharat)
author img

By ETV Bharat Karnataka Team

Published : Jan 26, 2025, 8:05 PM IST

ಮೈಸೂರು : ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ತಪ್ಪಿಸಬೇಕು ಹಾಗೂ ಸರ್ಕಾರಿ ಬ್ಯಾಂಕ್‌ಗಳು ಬಡವರ ಪರವಾಗಿ ಕೆಲಸ ಮಾಡುವಂತಾಗಬೇಕು. ರಾಜ್ಯದ ಹಲವು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹಾರ್ಡಿಂಗ್ ವೃತ್ತದ ಬಳಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಮೈಕ್ರೋ ಫೈನಾನ್ಸ್​ ಕಂಪನಿಗಳ ಹಾವಳಿ ತಪ್ಪಿಸಿ, ಬಡವರಿಗೆ ಸರ್ಕಾರ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.

ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿದರು (ETV Bharat)

ಈ ದೇಶಕ್ಕೆ ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ಬಂದು ಇಷ್ಟು ವರ್ಷಗಳಾಗಿವೆ. ಆದರೂ ಬಡವರು, ಸಾಮಾನ್ಯ ಜನರು ಬಡವರಾಗಿ, ಸಾಮಾನ್ಯ ಜನರಾಗಿಯೇ ಉಳಿದಿದ್ದಾರೆ. ಬಡವರ ಪರಿಸ್ಥಿತಿಯನ್ನು ಸರ್ಕಾರಗಳು ನೋಡುತ್ತಿಲ್ಲ. ಹೀಗಾದರೆ ಬಡವರು ಬೆಲೆ ಏರಿಕೆ ನಡುವೆ ಹೇಗೆ ಜೀವನ ಮಾಡುವುದು? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆ ಹಾಗೂ ರೌಡಿಗಳ ದರ್ಬಾರ್ ನಿಲ್ಲಬೇಕು. ಮೀಟರ್ ಹಣಕಾಸು ದಂಧೆಯಿಂದ ಪ್ರಾಣ ಯಾರು ಕಳೆದುಕೊಂಡಿದ್ದಾರೋ ಅವರ ಕುಟುಂಬದವರಿಗೆ ನ್ಯಾಯ ಸಿಗಬೇಕು, ಅದಕ್ಕೆ ಕಾರಣರಾದವರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಬೇಕು. ಯಾರನ್ನೂ ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡದಂತೆ ಕಾನೂನು ಬಿಗಿಗೊಳಿಸಬೇಕು ಎಂದರು.

ಸರ್ಕಾರಿ ಬ್ಯಾಂಕುಗಳು ಶ್ರೀಮಂತರ ಪರ ಇರಬಾರದು. ಬಡವರ ಪರ ಆಗಬೇಕು. ಬ್ಯಾಂಕುಗಳ ಕಾನೂನು ಸರಳೀಕರಣವಾಗಬೇಕು. ಸರ್ಕಾರಿ ಬ್ಯಾಂಕುಗಳ ಕಠಿಣ ನಿರ್ಧಾರದಿಂದ ಈ ರೀತಿ ಮೈಕ್ರೋ ಫೈನಾನ್ಸ್ ಗಳು ತಲೆ ಎತ್ತಿವೆ ಎಂದು ವಾಟಾಳ್​ ಆರೋಪಿಸಿದರು.

ಇಡೀ ದೇಶ ಶ್ರೀಮಂತರ ಪರ ವಾಲುತ್ತಿದೆ. ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ. ಚುನಾವಣೆ ವ್ಯವಸ್ಥೆ ಸಮಗ್ರ ಬದಲಾವಣೆ ಆಗಬೇಕು. ಇಡೀ ರಾಜ್ಯದಲ್ಲಿ ಬಡವರನ್ನು ನಾಶ ಮಾಡುತ್ತಿರುವ ಮೈಕ್ರೋ ಸಾಲ ಕಂಪನಿಗಳಿಗೆ ಸರ್ಕಾರ ಮೂಗುದಾರ ಹಾಕಬೇಕು ಎಂದು ಒತ್ತಾಯಿಸಿದರು.

ರಾಜ್ಯ ಬಂದ್ ಮಾಡಬೇಕಾಗುತ್ತದೆ : ಸರ್ಕಾರ ಮೈಕ್ರೋ ಫೈನಾನ್ಸ್ ಮತ್ತು ಮೀಟರ್ ಬಡ್ಡಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಕರ್ನಾಟಕ ಬಂದ್​ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೈಸೂರಿನ ಜಯಚಾಮರಾಜೇಂದ್ರ ವೃತ್ತದಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ರಾಜ್ಯದಲ್ಲಿ ಕೆಲವರು ಸಾವಿಗೆ ಶರಣಾಗಿದ್ದಾರೆ. ಹಲವಾರು ಜನ ಊರುಗಳನ್ನ ತೊರೆದಿದ್ದಾರೆ. ಬ್ಯಾಂಕ್​ಗಳನ್ನ ಇಂದಿರಾಗಾಂಧಿ ರಾಷ್ಟ್ರೀಕರಣ ಮಾಡಿದ್ದರು. ಆದರೂ ಮೀಟರ್ ಬಡ್ಡಿಗೆ ಕಡಿವಾಣ ಬಿದ್ದಿಲ್ಲ. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ 5 ಸಾವಿರದಿಂದ 5 ಲಕ್ಷದವರೆಗೆ ಸಾಲ ನೀಡಬೇಕು. ಆಗ ಈ ಮೈಕ್ರೋ ಫೈನಾನ್ಸ್ ಹಾವಳಿ, ಮೀಟರ್ ಬಡ್ಡಿ ಸಮಸ್ಯೆ ಬಗೆಹರಿಯುತ್ತದೆ ಎಂದು ವಾಟಾಳ್​ ಹೇಳಿದರು.

ಚುನಾವಣೆಗಳು ಪ್ರಾಮಾಣಿಕವಾಗಿ ನಡೆಯಬೇಕು. ಶಾಸನ ಸಭೆ ಮತ್ತು ಲೋಕಸಭೆ ದೇವಸ್ಥಾನ ಇದ್ದಂತೆ. ಅನೇಕ ಮಹನೀಯರು ದೇಶದ ಸಂವಿಧಾನವನ್ನ ಅದ್ಭುತವಾಗಿ ಪಾಲಿಸಿಕೊಂಡು ಬಂದಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಚುನಾವಣೆ ಪ್ರಾಮಾಣಿಕವಾಗಿ ನಡೆಯಬೇಕು. ಇವತ್ತು ಸಿಎಂ, ಡಿಸಿಎಂ, ಸಚಿವರು ಎಲ್ಲರೂ ಸಂವಿಧಾನ ಪೂಜೆ ಮಾಡುತ್ತಿದ್ದಾರೆ. ಆದ್ರೆ ಇವರು ಯಾರೂ ಕೂಡಾ ಸಂವಿಧಾನಕ್ಕೆ ಗೌರವ ಕೊಡುತ್ತಿಲ್ಲ ಎಂದು ವಾಟಾಳ್​ ನಾಗರಾಜ್​ ಆರೋಪಿಸಿದರು.

ಇದನ್ನೂ ಓದಿ : ಮೈಕ್ರೋ ಫೈನಾನ್ಸ್​ನವರಿಂದ​​ ಬಡವರಿಗೆ ಕಿರುಕುಳ ತಡೆಗಟ್ಟಲು ಪೊಲೀಸರಿಗೆ ವಿಶೇಷ ಅಧಿಕಾರ : ಗೃಹ ಸಚಿವ ಜಿ ಪರಮೇಶ್ವರ್ - MICROFINANCE TORTURE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.