IND vs ENG 2nd T20I: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ T20I ಸರಣಿಯು ಜನವರಿ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ ಸರಣಿಯ ಮೊದಲ ಪಂದ್ಯದೊಂದಿಗೆ ಪ್ರಾರಂಭಗಿವಾಗಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಮೊದಲ ಪಂದ್ಯದಲ್ಲಿ ಆಂಗ್ಲರ ವಿರುದ್ಧ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಸರಣಿಯಲ್ಲಿ 1–0 ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇದೀಗ ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಪಂದ್ಯ ಶನಿವಾರ (ಇಂದು) ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳು ಸಿದ್ಧತೆ ನಡೆಸಿವೆ. ಮೊದಲ ಪಂದ್ಯದಲ್ಲಿ ಸೋಲನುಭವಿಸಿರುವ ಇಂಗ್ಲೆಂಡ್ ಈ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಸಾಧಿಸುವ ಗುರಿ ಹೊಂದಿದೆ.
Kolkata ✈️ Chennai#TeamIndia have arrived for the 2nd #INDvENG T20I 😎
— BCCI (@BCCI) January 24, 2025
@IDFCFIRSTBank pic.twitter.com/mlSXuJeVfh
ಎಂಎ ಚಿದಂಬರಂ ವರದಿ: ಚೆಪಾಕ್ ಮೈದಾನವೂ ಬೌಲರ್ ಸ್ನೇಹಿಯಾಗಿದ್ದು ಇಲ್ಲಿ ಸ್ಪಿನ್ನರ್ಗಳು ಹೆಚ್ಚಿನ ಲಾಭ ಪಡೆಯುತ್ತಾರೆ. ಈ ಮೈದಾನದಲ್ಲಿ ಮೊದಲ ಇನಿಂಗ್ಸ್ನ ಸರಾಸರಿ ಸ್ಕೋರ್ 150 ಆಗಿದ್ದು, ಎರಡನೇ ಇನಿಂಗ್ಸ್ನ ಸ್ಕೋರ್ 122 ಆಗಿದೆ. ಇಲ್ಲಿ ಒಟ್ಟು 9 ಟಿ20 ಪಂದ್ಯಗಳು ನಡೆದಿದ್ದು ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 6 ಬಾರಿ ಗೆಲುವು ಸಾಧಿಸಿದ್ದರೇ, ಚೇಸಿಂಗ್ ತಂಡಗಳು ಕೇವಲ ಎರಡು ಮಾಡಿ ಮಾತ್ರ ಪಂದ್ಯದಲ್ಲಿ ಗೆಲುವು ಸಾಧಿಸಿವೆ. ಹಾಗಾಗಿ ಇಂದಿನ ಮ್ಯಾಚ್ನಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ. ಚೆಪಾಕ್ ಮೈದಾನದಲ್ಲಿ ದಾಖಲಾದ ಹೈಸ್ಕೋರ್ 189 ಆಗಿದ್ದು ಲೋ ಸ್ಕೋರ್ 80 ಆಗಿದೆ.
ಭಾರತ-ಇಂಗ್ಲೆಂಡ್ ಹೆಡ್ ಟು ಹೆಡ್ ದಾಖಲೆ: ಭಾರತ ಮತ್ತು ಇಂಗ್ಲೆಂಡ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 25 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಹೆಚ್ಚು ಪಂದ್ಯ ಗೆದ್ದುಪ್ರಾಬಲ್ಯ ಸಾಧಿಸಿದೆ. ಟೀಂ ಇಂಡಿಯಾ 14 ಪಂದ್ಯಗಳನ್ನು ಗೆದ್ದುಕೊಂಡರೇ, ಇಂಗ್ಲೆಂಡ್ 11 ಪಂದ್ಯಗಳಲ್ಲಿ ಗೆಲ್ಲವು ಸಾಧಿಸಿದೆ.
ಉಚಿತ ವೀಕ್ಷಣೆ ಎಲ್ಲಿ?: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯು Star Sports Networkನ ವಿವಿಧ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ. Disney+ Hotstar ಅಪ್ಲಿಕೇಶನ್ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ. DD ಸ್ಪೋರ್ಟ್ಸ್ ಭಾರತ vs ಇಂಗ್ಲೆಂಡ್ T20 ಸರಣಿಯ ಪ್ರಸಾರ ಹಕ್ಕುಗಳನ್ನು ಸಹ ಪಡೆದುಕೊಂಡಿದೆ, DD ಚಾನೆಲ್ನಲ್ಲಿ ನೇರ ಪ್ರಸಾರವಾಗಲಿದ್ದು ಉಚಿತವಾಗಿ ವೀಕ್ಷಿಸಬಹುದು.
An all-time record and a maiden POTM award followed by a memory test! 🧠
— BCCI (@BCCI) January 23, 2025
Presenting the bowlers game ft. Varun Chakaravarthy and Arshdeep Singh 😎
WATCH 🎥 🔽 #TeamIndia | #INDvENG | @IDFCFIRSTBank | @chakaravarthy29 | @arshdeepsinghh
ಸಂಭಾವ್ಯ ತಂಡಗಳು - ಭಾರತ: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಇಂಗ್ಲೆಂಡ್: ಬೆನ್ ಡಕೆಟ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಜಾಕೋಬ್ ಬೆಥೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಮೀ ಓವರ್‌ಟನ್, ಬ್ರೈಡನ್ ಕಾರ್ಸ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್.
ಇದನ್ನೂ ಓದಿ: ICC ವರ್ಷದ ಅತ್ಯುತ್ತಮ ಟೆಸ್ಟ್ - ODI ತಂಡ ಪ್ರಕಟ: ಮೂವರು ಭಾರತೀಯರಿಗೆ ಸ್ಥಾನ!