ETV Bharat / bharat

ಗಿಲ್ಗಿಟ್, ಬಾಲ್ಟಿಸ್ತಾನ್ ನಮಗೆ ಸೇರಿದಾಗಲೇ ಸಮಗ್ರ ಅಭಿವೃದ್ಧಿ: ಪಿಓಕೆ ಮರುವಶದ ಸುಳಿವು ನೀಡಿದ ರಾಜನಾಥ್

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ನಾವು ಅಭಿವೃದ್ಧಿ ಪರ್ವವನ್ನು ಆರಂಭಿಸಿದ್ದೇವೆ. ಆಕ್ರಮಿತ ಪ್ರದೇಶದ ಭಾಗವಾದ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ನಮಗೆ ಸೇರಿದಾಗಲೇ ಸಮಗ್ರ ಅಭಿವೃದ್ಧಿ ಪೂರ್ಣವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ತಿಳಿಸಿದರು.

pak-committing-atrocities-against-people-in-pok-rajnath-singh
ಗಿಲ್ಗಿಟ್, ಬಾಲ್ಟಿಸ್ತಾನ್ ನಮಗೆ ಸೇರಿದಾಗಲೇ ಸಮಗ್ರ ಅಭಿವೃದ್ಧಿ ಪೂರ್ಣ: ಪಿಓಕೆ ಮರು ವಶದ ಸುಳಿವು ನೀಡಿದ ರಾಜನಾಥ್
author img

By

Published : Oct 27, 2022, 5:32 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಪಾಕಿಸ್ತಾನವು ಆಕ್ರಮಿತ ಕಾಶ್ಮೀರದ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಇದರ ಪರಿಣಾಮಗಳನ್ನು ನೆರೆಯ ರಾಷ್ಟ್ರ ಅನುಭವಿಸಬೇಕಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

1947ರಲ್ಲಿ ಶ್ರೀನಗರಕ್ಕೆ ಭಾರತೀಯ ವಾಯುಪಡೆಯು ಬಂದಿಳಿದ ದಿನದ ಅಂಗವಾಗಿ ಇಂದು ಆಯೋಜಿಸಿದ್ದ ಶೌರ್ಯ ದಿವಸ್​ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಅವಳಿ ಕೇಂದ್ರಾಡಳಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ಸರ್ಕಾರ ಪ್ರಮುಖ ಗುರಿ ಎಂದು ಹೇಳಿದರು.

ಇದೇ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಓಕೆ)ವನ್ನು ಮರು ವಶಕ್ಕೆ ಪಡೆಯುವ ಸುಳಿವು ನೀಡಿದ ರಾಜನಾಥ್​, ಈಗ ನಾವು ಅಭಿವೃದ್ಧಿ ಪರ್ವವನ್ನು ಆರಂಭಿಸಿದ್ದೇವೆ. ಆಕ್ರಮಿತ ಪ್ರದೇಶದ ಭಾಗವಾದ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ನಮಗೆ ಸೇರಿದಾಗಲೇ ಸಮಗ್ರ ಅಭಿವೃದ್ಧಿ ಪೂರ್ಣವಾಗಲಿದೆ ಎಂದು ತಿಳಿಸಿದರು.

ಜೊತೆಗೆ, ಆಕ್ರಮಿತ ಕಾಶ್ಮೀರದ ಜನರ ಮೇಲೆ ದೌರ್ಜನ್ಯ ಕುರಿತು ಉಲ್ಲೇಖಿಸುತ್ತಾ, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಆದರೆ, ಭಯೋತ್ಪಾದಕರಿಗೆ ಭಾರತವನ್ನು ಗುರಿಯಾಗಿಸುವುದೇ ಮುಖ್ಯ ಉದ್ದೇಶವಾಗಿದೆ. ಕಾಶ್ಮೀರದ ವಿಷಯದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ತಥಾಕಥಿತ (ಸೋಕಾಲ್ಡ್) ಬುದ್ಧಿಜೀವಿಗಳು ಭಯೋತ್ಪಾದಕರ ವಿರುದ್ಧದ ಕ್ರಮಗಳ ಬಗ್ಗೆ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕರೆಯುತ್ತಿದ್ದರು ಎಂದೂ ಕಿಡಿಕಾರಿದರು.

ಅಲ್ಲದೇ, ಸಂವಿಧಾನದ 370 ವಿಶೇಷ ಕಲಂ ರದ್ಧತಿ ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ಜಮ್ಮು ಮತ್ತು ಕಾಶ್ಮೀರದ ಜನರ ವಿರುದ್ಧದ ತಾರತಮ್ಯ ನೀತಿಯು ಪ್ರಧಾನಿ ಮೋದಿ ನಾಯಕತ್ವದಲ್ಲಿ 2019ರ ಆಗಸ್ಟ್​​ 5ರಂದೇ ಕೊನೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಡೋದರಾದಲ್ಲಿ ಏರ್​ಬಸ್ ವಿಮಾನ ಕಾರ್ಖಾನೆ: ಅ.30ರಂದು ಮೋದಿ ಉಪಸ್ಥಿತಿಯಲ್ಲಿ ಅಡಿಗಲ್ಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.