ETV Bharat / bharat

ಪದ್ಮಶ್ರೀ ಪುರಸ್ಕೃತ ಚಿತ್ರಕಲಾವಿದ ಮನೋಹರ್ ದೇವದಾಸ್ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಚಿತ್ರ ಕಲಾವಿದ ಮನೋಹರ್ ದೇವದಾಸ್ ಚೆನ್ನೈನಲ್ಲಿ ನಿಧನರಾಗಿದ್ದಾರೆ.

author img

By

Published : Dec 7, 2022, 8:21 PM IST

Updated : Dec 7, 2022, 8:30 PM IST

Artist Manohar Devadoss Passes Away
ಚಿತ್ರಕಲಾವಿದ ಮನೋಹರ್ ದೇವದಾಸ್ ನಿಧನ

ಚೆನೈ: ಖ್ಯಾತ ಲೇಖಕ, ಚಿತ್ರ ಕಲಾವಿದ, ಸಂಗೀತಗಾರ ಮತ್ತು ಬರಹಗಾರರಾಗಿದ್ದ ಮನೋಹರ್ ದೇವದಾಸ್ ಅವರಿಂದು ಚೆನ್ನೈನಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಇವರು 1936 ರ ಸೆಪ್ಟೆಂಬರ್ 10 ರಂದು ಮಧುರೈನಲ್ಲಿ ಜನಿಸಿದ್ದು, ವೈದ್ಯ ಹರಿ ಜೇಸುದಾಸನ್ ಮತ್ತು ಮಾಸಿಲಾಮಣಿ ದಂಪತಿಯ ಪುತ್ರ.

6ನೇ ತರಗತಿಯಲ್ಲಿದ್ದಾಗ ಚಿತ್ರಕಲೆಯಲ್ಲಿ ಅಭಿರುಚಿ ಬೆಳೆಸಿಕೊಂಡಿದ್ದರು. 1953 ರಲ್ಲಿ ಕಲೆ ಮತ್ತು ರಸಾಯನಶಾಸ್ತ್ರದಲ್ಲಿ ಚೆನ್ನೈನ ಸೇತುಪಟ್ಟು ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ್ದರು. 1957 ರಲ್ಲಿ ಮಧುರೈನ ಅಮೆರಿಕನ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಬಿಎ ಮಾಡಿದ್ದಾರೆ. ತಂದೆ ಹೃದಯಾಘಾತದಿಂದ ತೀರಿಕೊಂಡ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದರು. ಚೆನ್ನೈನಲ್ಲಿ ಬ್ಯಾಟರಿ ತಯಾರಿಕಾ ಕಾರ್ಖಾನೆಯಲ್ಲಿಯೂ ಇವರು ಕೆಲಸ ಮಾಡಿದ್ದಾರೆ.

ಮನೋಹರ್ ದೇವದಾಸ್ ಅವರು ತಮ್ಮ ಕಲೆಗಳಿಂದ ಭಾರತದಾದ್ಯಂತ ಗುರುತಿಸಲ್ಪಟ್ಟವರು. ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ 1972ರಲ್ಲಿ ಭಾರತಕ್ಕೆ ಮರಳಿದ್ದರು. ಇವರ ವಿಶೇಷ ಕೊಡುಗೆಗಳನ್ನು ಗುರುತಿಸಿದ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.

ಇದನ್ನೂ ಓದಿ:ಕೆಜಿಎಫ್ ತಾತ ಖ್ಯಾತಿಯ ನಟ ಕೃಷ್ಣ ಜಿ ರಾವ್ ಇನ್ನಿಲ್ಲ

Last Updated : Dec 7, 2022, 8:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.