ETV Bharat / bharat

ಸಂಸತ್‌ ಬಜೆಟ್​ ಅಧಿವೇಶನದಲ್ಲಿ ಪ್ರತಿಪಕ್ಷಗಳ ಗದ್ದಲ; 2 ಗಂಟೆಗೆ ಉಭಯ ಸದನ ಮುಂದೂಡಿಕೆ - Budget session

2ನೇ ಹಂತದ ಬಜೆಟ್​ ಅಧಿವೇಶನ ಆರಂಭದಲ್ಲೇ ಪ್ರತಿಭಟನೆಗೆ ಸಾಕ್ಷಿಯಾಯಿತು. ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಬಜೆಟ್​ ಅಧಿವೇಶನ
ಬಜೆಟ್​ ಅಧಿವೇಶನ
author img

By

Published : Mar 13, 2023, 12:49 PM IST

Updated : Mar 13, 2023, 3:22 PM IST

ಸಂಸತ್‌ ಬಜೆಟ್​ ಅಧಿವೇಶನದಲ್ಲಿ ಪ್ರತಿಪಕ್ಷಗಳ ಗದ್ದಲ

ನವದೆಹಲಿ: ಬಜೆಟ್​ ಅಧಿವೇಶನದ 2ನೇ ಚರಣ ಇಂದಿನಿಂದ ಆರಂಭವಾಯಿತು. ತನಿಖಾ ಸಂಸ್ಥೆಗಳ ದುರ್ಬಳಕೆ, ಹಿಂಡನ್​ಬರ್ಗ್​ ವರದಿ, ಅದಾನಿ ಕುರಿತು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದರೆ, ಇದೇ ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಲಂಡನ್​ನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದ್ದಕ್ಕೆ ಆಡಳಿತಾರೂಢ ಬಿಜೆಪಿ ಮುಗಿಬಿದ್ದಿತು. ತೀವ್ರ ಗಲಾಟೆ ಸೃಷ್ಟಿಯಾದ ಕಾರಣ ಸಭಾಧ್ಯಕ್ಷರು ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಬೆಳಗ್ಗೆ ಲೋಕಸಭೆ ಆರಂಭವಾದ ಸ್ವಲ್ಪ ಸಮಯದ ನಂತರ ಪ್ರತಿಪಕ್ಷ ನಾಯಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಈ ಮಧ್ಯೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಲಂಡನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಇದರಿಂದ ಕೆರಳಿದ ಪ್ರತಿಪಕ್ಷಗಳ ನಾಯಕರು ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದರು. ಗದ್ದಲ ತೀವ್ರವಾದ ಕಾರಣ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ರಾಜ್ಯಸಭೆಯಲ್ಲೂ ಗದ್ದಲ: ಇನ್ನೊಂದೆಡೆ ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳ ಸಂಸದರ ಪ್ರತಿಭಟನೆ ನಡೆಸಿದರು. ಸದನ ಆರಂಭವಾದ ತಕ್ಷಣವೇ ನಾಯಕರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದರು. ಅದಾನಿ ವಿಚಾರದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಗದ್ದಲ ತೀವ್ರವಾದ ಕಾರಣ ಸ್ಪೀಕರ್ ಜಗದೀಪ್ ಧನಕರ್ ಅವರು ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಬಜೆಟ್​ ಮಂಡನೆ ಬಳಿಕ ಒಂದು ತಿಂಗಳ ವಿರಾಮದ ನಂತರ ದ್ವಿತೀಯಾರ್ಧದ ಬಜೆಟ್ ಅಧಿವೇಶನ ಪ್ರತಿಪಕ್ಷಗಳ ಪ್ರತಿಭಟನೆಯ ಮೂಲಕ ಪುನರಾರಂಭ ಕಂಡಿದೆ. ಬಜೆಟ್ ಅಧಿವೇಶನದ ಮೊದಲಾರ್ಧವು ಕೂಡ ಇದೇ ವಿಷಯಗಳಿಗಾಗಿ ಗದ್ದಲ, ಪ್ರತಿಭಟನೆಯಿಂದಾಗಿ ಹಲವು ಬಾರಿ ಮುಂದೂಡಿಕೆಯಾಗಿತ್ತು.

ಮೋದಿ ಸರ್ವಾಧಿಕಾರಿ: ಇನ್ನು ಸಂಸತ್ತಿನ ಹೊರಗೆ ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯಸಭೆ ಪ್ರತಿಪಕ್ಷಗಳ ನಾಯಕ ಮಲ್ಲಿಕಾರ್ಜುನ್​ ಖರ್ಗೆ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವ ಇಲ್ಲವಾಗಿದೆ. ಅವರು ಸರ್ವಾಧಿಕಾರದ ರೀತಿಯಲ್ಲಿ ದೇಶವನ್ನು ನಡೆಸುತ್ತಿದ್ದಾರೆ. ನಂತರ ಅವರೇ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ರಾಹುಲ್​ ವಿರುದ್ಧ ಟೀಕೆ: ಸದನದ ಸದಸ್ಯರಾಗಿರುವ ರಾಹುಲ್ ಗಾಂಧಿ ಅವರು ಲಂಡನ್​ನಲ್ಲಿ ಭಾರತವನ್ನು ಅವಮಾನಿಸಿದ್ದಾರೆ. ಅವರ ಹೇಳಿಕೆಯನ್ನು ಸದನದ ಎಲ್ಲ ಸದಸ್ಯರು ಖಂಡಿಸಬೇಕು. ರಾಹುಲ್​ ಗಾಂಧಿ ಸದನದ ಮುಂದೆ ಕ್ಷಮೆಯಾಚಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭೆಯಲ್ಲಿ ಒತ್ತಾಯಿಸಿದರು.

ರಾಹುಲ್ ಗಾಂಧಿ ಸಂಸತ್ತಿಗೆ ಬಂದು ದೇಶದ ಜನತೆ ಮತ್ತು ಸದನದಲ್ಲಿ ಕ್ಷಮೆಯಾಚಿಸಬೇಕು. ವಿರೋಧ ಪಕ್ಷದ ಸದಸ್ಯ ವಿದೇಶಕ್ಕೆ ತೆರಳಿ ದೇಶದ ಪ್ರಜಾಪ್ರಭುತ್ವವನ್ನೇ ಟೀಕಿಸುತ್ತಾರೆ. ಈ ಮೂಲಕ ಅವರು ದೇಶದ ಜನರು ಮತ್ತು ಸಂಸತ್ತನ್ನು ಅವಮಾನಿಸಿದ್ದಾರೆ. ಇಲ್ಲಿ ವಾಕ್ ಸ್ವಾತಂತ್ರ್ಯವಿದೆ. ಸಂಸದರು ಸಂಸತ್ತಿನಲ್ಲಿ ಮಾತನಾಡುವ ಹಕ್ಕಿದೆ. ಈ ಬಗ್ಗೆ ಸುಳ್ಳು ಹೇಳಿದ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಆಗ್ರಹಿಸಿದರು.

ಇಂದಿನಿಂದ ಆರಂಭವಾಗಿರುವ 2ನೇ ಹಂತದ ಬಜೆಟ್​ ಅಧಿವೇಶನ ಏಪ್ರಿಲ್ 6 ರವರೆಗೆ ನಡೆಯಲಿದೆ. ಹಣಕಾಸು ಮಸೂದೆಯ ಅಂಗೀಕಾರ ಸೇರಿದಂತೆ ರಾಜ್ಯಸಭೆಯಲ್ಲಿ 26 ಮತ್ತು ಲೋಕಸಭೆಯಲ್ಲಿ 9 ಮಸೂದೆಗಳು ಅಂಗೀಕಾರಕ್ಕಾಗಿ ಬಾಕಿ ಉಳಿದಿವೆ. ಅಧಿವೇಶನ ಆರಂಭಕ್ಕೂ ಮೊದಲು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್​ಅವರು ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಒಂಬತ್ತು ಪಕ್ಷಗಳ ಸಂಸದರು ಇದರಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್​ ಪ್ರತ್ಯೇಕ ಸಭೆ: ಅಧಿವೇಶನ ಆರಂಭಕ್ಕೂ ಮೊದಲು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್​ ಇಂದು ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತು. ಸಭೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಯೋಗ ದಿನಾಚರಣೆಗೆ 100 ದಿನಗಳ ಕೌಂಟ್​ಡೌನ್: 3 ದಿನಗಳ ಯೋಗ ಮಹೋತ್ಸವಕ್ಕೆ ಪ್ರಧಾನಿ ಕರೆ

Last Updated : Mar 13, 2023, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.