ETV Bharat / bharat

ಗಣರಾಜ್ಯೋತ್ಸವ ಪರೇಡ್​ನಲ್ಲಿ ಕೇವಲ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಮೂಲಕ ಸೇನಾ ಶಕ್ತಿ ಪ್ರದರ್ಶನ

ಜನವರಿ 26ರಂದು ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್​ನಲ್ಲಿ ಕೇವಲ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಪ್ರದರ್ಶನ ನೀಡಲು ಭಾರತೀಯ ಸೇನೆ ನಿರ್ಧರಿಸಿದೆ.

only-made-in-india-weapon-systems-to-be-showcased-by-indian-army-this-republic-day
ಈ ಗಣರಾಜ್ಯೋತ್ಸವ ಪರೇಡ್​ನಲ್ಲಿ ಕೇವಲ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಮೂಲಕ ಸೇನೆಯ ಶಕ್ತಿ ಪ್ರದರ್ಶನ
author img

By

Published : Jan 24, 2023, 5:27 PM IST

ನವದೆಹಲಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಭಾರತೀಯ ಸೇನೆಯು ಮಹತ್ವದ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದೆ. ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಮೇಡ್ ಇನ್ ಇಂಡಿಯಾ ಅರ್ಥಾತ್​ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಮಾತ್ರ ಪ್ರದರ್ಶನ ಮಾಡಲಾಗುವುದು. ಭಾರತೀಯ ಫೀಲ್ಡ್ ಗನ್‌ಗಳಿಂದ 21 ಗನ್ ಸೆಲ್ಯೂಟ್ ಸೇರಿದಂತೆ ಯುದ್ಧಸಾಮಗ್ರಿ ಮತ್ತು ಉಪಕರಣಗಳ ಮೂಲಕ ಭಾರತದ ಸ್ವದೇಶೀಕರಣದ ಶಕ್ತಿ ಪ್ರದರ್ಶನ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳಿಗೆ ಪ್ರಮುಖ ಆದ್ಯತೆ: ದೇಶದ ಗಣರಾಜ್ಯೋತ್ಸವ ಪರೇಡ್ ಅನ್ನು ಪ್ರತಿಷ್ಠಿತ ಆಚರಣೆ ಎಂದು ಪರಿಗಣಿಸಲಾಗಿದೆ. ರಾಷ್ಟ್ರದ ಸೇನೆಯ ಸಾಮರ್ಥ್ಯ ಮತ್ತು ವೈವಿಧ್ಯತೆಯ ಶಕ್ತಿಯ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತದೆ. ಈ ವರ್ಷ ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್​​ನಲ್ಲಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳಿಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ. ಕಳೆದ ಅಗಸ್ಟ್​ 15ರಂದು ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಕೆಂಪು ಕೋಟೆಯಲ್ಲಿ ಮೊದಲ ಬಾರಿಗೆ ಸ್ವದೇಶಿಸಿ ನಿರ್ಮಿತ ಗನ್​ ಮೂಲಕ ಗನ್​ ಸೆಲ್ಯೂಟ್​ ನೀಡಲಾಗಿತ್ತು.

ಇದನ್ನೂ ಓದಿ: ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ ದೇಶಿ ಗನ್​ ಸೆಲ್ಯೂಟ್‌, ವಿಡಿಯೋ ನೋಡಿ

ಕೆ-9 ವಜ್ರ ಹೊವಿಟ್ಜರ್‌ಗಳು, ಎಂಬಿಟಿ ಅರ್ಜುನ್, ನಾಗ್ ಆಂಟಿ ಟ್ಯಾಂಕ್ ಗೈಡೆಡ್​ ಮಿಸೈಲ್​ಗಳು, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು, ಆಕಾಶ್ ಏರ್ ಡಿಫೆನ್ಸ್ ಕ್ಷಿಪಣಿಗಳು ಮತ್ತು ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ಗಳು ಸೇರಿ ದೇಶಿ ಶಸ್ತ್ರಾಸ್ತ್ರಗಳಿಗೆ ಮಹತ್ವ ನೀಡಲು ಸೇನೆ ಮುಂದಾಗಿದೆ. ಈ ಬಾರಿ 105 ಎಂಎಂ ಭಾರತೀಯ ಫೀಲ್ಡ್ ಗನ್‌ಗಳ ಮೂಲಕ 21 ಗನ್ ಸೆಲ್ಯೂಟ್​ ನೀಡಲಾಗುತ್ತದೆ.

ಆತ್ಮನಿರ್ಭರ್ ಭಾರತ್ ಪರಿಕಲ್ಪನೆ: ಗಣರಾಜ್ಯೋತ್ಸವ ಪರೇಡ್​ನಲ್ಲಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಪ್ರದರ್ಶನ ಮಾಹಿತಿ ನೀಡಿರುವ ಮೇಜರ್​ ಜನರಲ್​ ಭವನೀಶ್ ಕುಮಾರ್, ಈ ವರ್ಷದ ಗಣರಾಜ್ಯೋತ್ಸವದಲ್ಲಿ ಹೆಚ್ಚಿನ ಸ್ವದೇಶಿ ನಿರ್ಮಿತ ಸೇನೆ ಉಪಕರಣಗಳನ್ನು ಕಾಣಬಹುದು. ಸೇನೆಯು ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಡಿ ಸ್ವದೇಶಿ ಉಪಕರಣಗಳನ್ನು ಬಳಸಲು ಮುಂದಾಗಿದೆ. 105 ಎಂಎಂ ಇಂಡಿಯನ್ ಫೀಲ್ಡ್ ಗನ್ 21 ಗನ್ ಸೆಲ್ಯೂಟ್ ನೀಡುತ್ತದೆ ಎಂದು ಹೇಳಿದರು.

ಅಲ್ಲದೇ, ಆರ್ಮರ್ ಕೋರ್ ಎಂಬಿಟಿ ಅರ್ಜುನ್, ಬಿಎಂಪಿ 2 ಮತ್ತು ನಾಗ್ ಕ್ಷಿಪಣಿ ವ್ಯವಸ್ಥೆಯು ತಮ್ಮ ಶಕ್ತಿಯನ್ನು ತೋರಿಸುತ್ತವೆ. ಆರ್ಟಿಲರಿ ರೆಜಿಮೆಂಟ್‌ನ ಕೆ9 ವಜ್ರ ಮತ್ತು ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ ಸ್ವಯಂಚಾಲಿತ ಲಾಂಚರ್, ಆರ್ಮಿ ಏರ್ ಡಿಫೆನ್ಸ್​ ಆಕಾಶ್ ವೆಪನ್ ಸಿಸ್ಟಮ್​ ಬಗ್ಗೆ ಹಚ್ಚಿನ ಕೇಂದ್ರೀಕರಿಸಿದ ಅವರು, ಆರ್ಮಿ ಕೋರ್ ಇಂಜಿನಿಯರ್‌ಗಳ 10 ಎಂ ಶಾರ್ಟ್ ಪ್ಯಾನ್ ಬ್ರಿಡ್ಜ್ ಮತ್ತು ಕೋರ್ ಆಫ್ ಸಿಗ್ನಲ್‌ಗಳ ಮೊಬೈಲ್ ಮೈಕ್ರೋವೇವ್ ನೋಡ್ ಮತ್ತು ಮೊಬೈಲ್ ನೆಟ್‌ವರ್ಕ್ ಸೆಂಟರ್ ಸಹ ಗಣರಾಜ್ಯೋತ್ಸವದಲ್ಲಿ ನೋಡಬಹುವುದಾಗಿ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ನಾರಿಶಕ್ತಿ.. ನೌಕಾದಳವನ್ನು ಲೀಡ್ ಮಾಡಲಿದ್ದಾರೆ ಮಂಗಳೂರಿನ ದಿಶಾ

ಅಲ್ಲದೇ, ಎಎಲ್‌ಎಚ್ ಧ್ರುವ್ ಮತ್ತು ಎಎಲ್‌ಹೆಚ್ ರುದ್ರ ಶಸ್ತ್ರಾಸ್ತ್ರವನ್ನೂ ಗಣರಾಜ್ಯೋತ್ಸವ ಪರೇಡ್​ನಲ್ಲಿ ನೋಡಬಹುದಾಗಿದೆ. ಇತ್ತೀಚೆಗೆ ಪರಿಚಯಿಸಿದ ಪ್ರಚಂದ್ ಹೆಲಿಕಾಪ್ಟರ್​​ ಸಹ ಪರೇಡ್​ನಲ್ಲಿ ಭಾಗವಹಿಸಲಿದೆ. 21 ಗನ್​ ಸೆಲ್ಯೂಟ್ ಅನ್ನು ಸ್ಥಳೀಯವಾಗಿ ತಯಾರಿಸಿದ 105 ಎಂಎಂ ಇಂಡಿಯನ್ ಫೀಲ್ಡ್ ಗನ್ಸ್ (ಐಎಫ್‌ಜಿ) ಮೂಲಕ ನೀಡಲಾಗುತ್ತದೆ. ಇದರ ಮದ್ದುಗುಂಡುಗಳನ್ನು ಸಹ ಸ್ಥಳೀಯವಾಗಿ ಉತ್ಪಾದಿಸಲಾಗಿದೆ. ಈ ವರ್ಷ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲಾದ ಎಲ್ಲ ಭಾರತೀಯ ಸೇನೆಯ ಉಪಕರಣಗಳು ಮೇಡ್ ಇನ್ ಇಂಡಿಯಾ ಆಗಿರಲಿವೆ ಎಂದು ಹೇಳಿದರು.

ಮೊದಲ ಬಾರಿಗೆ ಮಹಿಳೆಯರ ಒಂಟೆ ತುಕಡಿ: ಈ ವರ್ಷದ ಗಣರಾಜ್ಯೋತ್ಸವವು ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಲಿದೆ. ಪರೇಡ್‌ನಲ್ಲಿ ಕಾರ್ಪ್ಸ್ ಆಫ್ ಸಿಗ್ನಲ್ಸ್‌ನ ಡೇರ್‌ಡೆವಿಲ್ಸ್ ಮೋಟಾರ್ ಸೈಕಲ್ ರೈಡರ್ಸ್ ತಂಡವ ನೇತೃತ್ವವನ್ನು ಮಹಿಳಾ ಅಧಿಕಾರಿಯೊಬ್ಬರು ವಹಿಸಲಿದ್ದಾರೆ. ಜೊತೆಗೆ ಮೊದಲ ಬಾರಿಗೆ ಮಹಿಳೆಯರು ಬಿಎಸ್‌ಎಫ್ ಒಂಟೆ ತುಕಡಿಯ ಭಾಗವಾಗಲಿದ್ದಾರೆ.

ಈ ಬಾರಿಯ ಪರೇಡ್‌ನಲ್ಲಿ ಮೂವರು ಪರಮವೀರ ಚಕ್ರ ಹಾಗೂ ಮೂವರು ಅಶೋಕ ಚಕ್ರ ಪುರಸ್ಕೃತರು ಕೂಡ ಭಾಗವಹಿಸಲಿದ್ದಾರೆ. ಇಡೀ ಪಥ ಸಂಚಲನದಲ್ಲಿ ಸಶಸ್ತ್ರ ಪಡೆಗಳು, ಕೇಂದ್ರೀಯ ಪ್ಯಾರಾ ಮಿಲಿಟರಿ ಪಡೆಗಳು, ದೆಹಲಿ ಪೊಲೀಸ್, ಎನ್‌ಸಿಸಿ, ಎನ್‌ಎಸ್‌ಎಸ್, ಪೈಪ್ಸ್​ ಮತ್ತು ಡ್ರಮ್ಸ್ ಬ್ಯಾಂಡ್‌ಗಳು 16 ಕವಾಯತು ತಂಡಗಳು ಪಾಲ್ಗೊಳ್ಳಲಿವೆ. 27 ವಿವಿಧ ರಾಜ್ಯಗಳು ಮತ್ತು ಇಲಾಖೆಗಳು ಹಾಗೂ ಸಶಸ್ತ್ರ ಪಡೆಗಳ ಸ್ತಬ್ಧ ಚಿತ್ರಗಳು ಪರೇಡ್‌ನಲ್ಲಿ ಸಾಗಲಿವೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಈ ವರ್ಷದ ಪರೇಡ್‌ಗೆ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಈಜಿಪ್ಟ್ ಸೇನೆಯ ತುಕಡಿ ಸಹ ಭಾಗವಹಿಸಲಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ದೆಹಲಿಯಲ್ಲಿ ಸಿದ್ಧತೆ: ಸಾರ್ವಜನಿಕರ ಆಸನ ಸಂಖ್ಯೆ ಕಡಿತ, ಪರೇಡ್‌ನಲ್ಲಿ ಈಜಿಪ್ಟ್‌ ಸೇನೆಗೂ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.