ETV Bharat / bharat

2025 ರ ಮಹಾಕುಂಭಕ್ಕೂ ಮೊದಲು ತ್ರಿವೇಣಿ ಪುಷ್ಪದಲ್ಲಿ 108 ಅಡಿ ಎತ್ತರದ ಹನುಮನ ವಿಗ್ರಹ ಪ್ರತಿಷ್ಠಾಪನೆ - Prayagraj Uttar Pradesh

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನ ತ್ರಿವೇಣಿ ಪುಷ್ಪದಲ್ಲಿ 108 ಅಡಿ ಎತ್ತರದ ಹನುಮಂತನ ವಿಗ್ರಹ 2025 ರ ಮೊದಲು ಪ್ರತಿಷ್ಠಾಪನೆಗೊಳ್ಳಲಿದೆ.

ಹನುಮಂತನ ವಿಗ್ರಹ
ಹನುಮಂತನ ವಿಗ್ರಹ
author img

By ETV Bharat Karnataka Team

Published : Oct 29, 2023, 6:41 PM IST

ಪ್ರಯಾಗರಾಜ್ (ಉತ್ತರ ಪ್ರದೇಶ): ಪ್ರಯಾಗ್​ರಾಜ್​ನಲ್ಲಿ ‘ನಾಗರ್ ಕೊತ್ವಾಲ್' ಎಂದು ಆರಾಧಿಸಲ್ಪಡುವ ಹನುಮಂತನ 108 ಅಡಿ ಎತ್ತರದ ವಿಗ್ರಹವು ಯಮುನಾ ತೀರದಲ್ಲಿರುವ ತ್ರಿವೇಣಿ ಪುಷ್ಪ ಪ್ರದೇಶದಲ್ಲಿ 2025ರ ಮಹಾಕುಂಭಕ್ಕೂ ಮುನ್ನ ನೆಲೆಸಲಿದೆ.

ಈ ತ್ರಿವೇಣಿ ಪುಷ್ಪ ಪ್ರದೇಶವನ್ನು ಹರಿದ್ವಾರದ ಪರಮಾರ್ಥ ನಿಕೇತನಕ್ಕೆ 30 ವರ್ಷಗಳ ಗುತ್ತಿಗೆಗೆ ಈಗಾಗಲೇ ಹಸ್ತಾಂತರಿಸಲಾಗಿದೆ. ಈ ಗುತ್ತಿಗೆದಾರರು ಈ ಪ್ರತಿಮೆಯ ನಿರ್ಮಾಣ ಮತ್ತು ವಿಗ್ರಹ ಕಟ್ಟಡಗಳ ರಚನೆಗಳು ಮತ್ತು ಬೇಕಾಗಿರುವ ಸೌಕರ್ಯಗಳ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ತ್ರಿವೇಣಿ ಪುಷ್ಪ ದೇಶದ ವಿವಿಧ ದೇವಾಲಯಗಳ ಪ್ರತಿಕೃತಿಗಳನ್ನು, ಉತ್ತಮ ಕೆತ್ತನೆಯನ್ನು ಹೊಂದಿದ್ದರೂ, ಸರಿಯಾದ ಕಾಳಜಿಯ ಕೊರತೆಯಿಂದಾಗಿ ಕಡೆಗಣಿಸಲ್ಪಟ್ಟಿದೆ. ಆದರೆ, 2025ರ ಮಹಾಕುಂಭಕ್ಕೂ ಮುನ್ನ ಈ ಜಾಗವನ್ನು ಆಧ್ಯಾತ್ಮಿಕ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಗುವುದು. ತ್ರಿವೇಣಿ ಪುಷ್ಪದಲ್ಲಿ ನವೀಕರಣ ಮಾಡಲಿದ್ದು, ಒಟ್ಟು ಹಳೆಯ ನಿರ್ಮಾಣಗಳು ಸೇರಿದಂತೆ 21 ನಿರ್ಮಾಣ ಕಾರ್ಯಗಳು ನಡೆಯಲಿವೆ. ಈ 21ರಲ್ಲಿ ವಿಗ್ರಹ, ಶಾಲೆ, ಫುಡ್ ಕೋರ್ಟ್, ನೀರಿನ ಕಾರಂಜಿ, ಧ್ಯಾನ ಕೇಂದ್ರ, ಮಣ್ಣಿನ ಮನೆ, ಆಧ್ಯಾತ್ಮಿಕ ಕುಟೀರ ಮತ್ತು ಹವನ ಕುಂಡ ಇರಲಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದು ಬಾಗಂಬರಿ ಮಠದ ಮಹಂತ್ ಬಲಬೀರ್ ಗಿರಿ ತಿಳಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶ ಸರ್ಕಾರವು ತನ್ನ ರಾಜ್ಯದಲ್ಲಿ ಅಭಿವೃದ್ಧಿಯ ದಾಖಲೆ ಬರೆಯಲು ಹೊರಟಿದೆ. ಜತೆಗೆ ಸಂಗಮ್​ ದಂಡೆಯಲ್ಲಿರುವ ಬಡೇ ಹನುಮಾನ್ ದೇವಾಲಯವು ಪುನರಾಭಿವೃದ್ಧಿ ಯೋಜನೆಗಳಲ್ಲಿ ಸೇರ್ಪಡೆ ಆಗಿರುವುದರಿಂದ, ಎಲ್ಲಾ ಸಂತರು ಮತ್ತು ಭಕ್ತರು ರಾಜ್ಯದ ಮುಖ್ಯಮಂತ್ರಿಗೆ ಕೃತಜ್ಞರಾಗಿರಬೇಕು ಎಂದು ಈ ದೇವಾಲಯದ ಪ್ರಧಾನ ಅರ್ಚಕ ಗಿರಿ ಹೇಳಿದ್ದಾರೆ.

ವಾರಣಾಸಿಯ ಕಾರಿಡಾರ್, ಅಯೋಧ್ಯೆ ದೇವಸ್ಥಾನ ಮತ್ತು ಉಜ್ಜಯಿನಿ ಮಹಾಕಾಲ್ ದೇವಸ್ಥಾನ ಕಾರಿಡಾರ್‌ನಂತೆ ಸರ್ಕಾರವು ಪ್ರಯಾಗ್‌ರಾಜ್​​ಗೆ ಕಾರಿಡಾರ್​ನ್ನು​ ಉಡುಗೊರೆಯಾಗಿ ನೀಡಿದೆ. ಪ್ರಯಾಗ್‌ರಾಜ್‌ನ ಹನುಮಾನ್ ದೇವಾಲಯ ಸಂಕೀರ್ಣಕ್ಕೂ ಹೊಸ ಸ್ವರೂಪ ನೀಡಲಾಗುವುದು ಎಂದು ಅವರು ಹೇಳಿದರು. ಇದಕ್ಕಾಗಿಯೇ ದೇವಸ್ಥಾನದ ಬಳಿ 11,589 ಚದರ್​ ಅಡಿ ಜಾಗವನ್ನು ಗುರುತಿಸಿಡಲಾಗಿದೆ.

ಜನವರಿ 22 ಕ್ಕೆ ರಾಮಂದಿರ ಉದ್ಘಾಟನೆ: ರಾಮಭಕ್ತರ ಕನಸಿನ ರಾಮಮಂದಿರದ ರಾಮನಮೂರ್ತಿ ಪ್ರಾಣ ಪ್ರತಿಷ್ಠಾಪನೆ 2024 ರ ಜನವರಿ 22ರಂದು ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ದೇವಸ್ಥಾನ ಮಂಡಳಿ ಔಪಚಾರಿಕೆ ಆಹ್ವಾನ ನೀಡಿದೆ.

ಇದನ್ನೂ ಓದಿ: ಭಾರತ ಸೇರಿದಂತೆ ಜಗತ್ತಿನ ಹಲವೆಡೆ ವರ್ಷದ ಕೊನೆಯ ಚಂದ್ರಗ್ರಹಣ ಗೋಚರ; ಮೋಕ್ಷದ ನಂತರ ದೇವಾಲಯಗಳ ಶುದ್ಧೀಕರಣ, ವಿಶೇಷ ಪೂಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.