ನವದೆಹಲಿ: ಜನ ಸಂಖ್ಯೆ ನಿಯಂತ್ರಣದ ಬಗ್ಗೆ ಪ್ರಸ್ತುತ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಉತ್ತರ ಪ್ರದೇಶ ಸರ್ಕಾರ ಕಾನೂನು ತರಲು ಮುಂದಾಗಿದೆ. ಉಳಿದ ರಾಜ್ಯಗಳೂ ಇದರ ಬಗ್ಗೆ ಚಿಂತನೆ ಮಾಡಬೇಕು ಹಾಗೂ ಕೇಂದ್ರ ಸರ್ಕಾರ ಮುಂದಾಳತ್ವ ವಹಿಸಲಿ ಎಂದು ಬಿಜೆಪಿ ಹಿರಿಯ ನಾಯಕ ಆರ್.ಕೆ ಶರ್ಮಾ ಹೇಳಿದ್ದಾರೆ.
ಚೀನಾದಂತೆ ಜನಸಂಖ್ಯೆ ನಿಯಂತ್ರಣ ಮಾಡುವ ಸಮಯ ಬಂದಿದೆ. ಪತಿ, ಪತ್ನಿ ಕೇವಲ ಒಂದು ಮಗುವನ್ನು ಪಡೆಯುವ ಬಗ್ಗೆ ಯೋಚನೆ ಮಾಡಬೇಕು. ಜನಸಂಖ್ಯೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರಿಗೆ ಅಂದ್ರೆ ಕನಿಷ್ಠ 50 ವರ್ಷಗಳ ವರೆಗೆ ದಂಪತಿ ಇಂತಹ ನಿರ್ಧಾರಕ್ಕೆ ಬರಬೇಕು ಎಂದು ಸಲಹೆ ನೀಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಮಾಡುವ ಬಗ್ಗೆ ಕಾನೂನು ತರಲು ಮುಂದಾಗಿದೆ. ರಾಜ್ಯ ಕಾನೂನು ಆಯೋಗವು ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾನೂನನ್ನು ರೂಪಿಸಲು ಪ್ರಾರಂಭಿಸಿದೆ. ಯುಪಿಯಲ್ಲಿ ಈ ಕಾನೂನು ಜಾರಿಗೆ ಬಂದ ನಂತರ ಎರಡುಕ್ಕೂ ಹೆಚ್ಚು ಮಕ್ಕಳನ್ನು ಹೊಂದುವ ಪೋಷಕರು ಸರ್ಕಾರಿ ಸೌಲಭ್ಯಗಳು ಮತ್ತು ಸಬ್ಸಿಡಿಗಳಿಂದ ವಂಚಿತರಾಗಬಹುದು.