ETV Bharat / bharat

ಒಮಿಕ್ರೋನ್ ವೇಗವಾಗಿ ಹರಡುವ ವೈರಸ್: ದಕ್ಷಿಣ ಆಫ್ರಿಕಾ ವೈದ್ಯೆ

ಡೆಲ್ಟಾ ರೂಪಾಂತರಿಗಿಂತ ಒಮಿಕ್ರೋನ್ ಗುಣಲಕ್ಷಣಗಳು ಲಘುವಾಗಿವೆ. ಆಯಾಸ, ದೇಹ ನೋಯುವುದು ಒಮಿಕ್ರೋನ್​ನ ಪ್ರಮುಖ ಲಕ್ಷಣಗಳು.

ಡೆಲ್ಟಾ ರೂಪಾಂತರಿಗಿಂತ ಒಮಿಕ್ರೋನ್ ಗುಣಲಕ್ಷಣಗಳು ಲಘು,Omicron symptom
ಒಮಿಕ್ರೋನ್ ವೇಗವಾಗಿ ಹರಡುವ ವೈರಸ್: ದಕ್ಷಿಣ ಆಫ್ರಿಕಾ ವೈದ್ಯೆ
author img

By

Published : Dec 3, 2021, 5:56 AM IST

Updated : Dec 3, 2021, 6:13 AM IST

ನವದೆಹಲಿ: ಡೆಲ್ಟಾ ರೂಪಾಂತರಿಗಿಂತ ಒಮಿಕ್ರೋನ್ ಗುಣಲಕ್ಷಣಗಳು ಲಘುವಾಗಿವೆ ಎಂದು ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್​ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯೆ ಹಾಗೂ ದಕ್ಷಿಣ ಆಫ್ರಿಕಾ ವೈದ್ಯಕೀಯ ಅಸೋಸಿಯೇಷನ್ ಮುಖ್ಯಸ್ಥೆ ಡಾ.ಏಂಜೆಲಿಕ್ ಕೋಟ್ಜಿ ತಿಳಿಸಿದ್ದಾರೆ.

ಆಯಾಸ, ದೇಹ ನೋಯುವುದು ಒಮಿಕ್ರೋನ್​ನ ಪ್ರಮುಖ ಲಕ್ಷಣಗಳು. ಜೊತೆಗೆ ಲಘು ತಲೆನೋವು, ಸುಸ್ತಾಗುವುದು ಕೂಡ ರೂಪಾಂತರಿಯ ಲಕ್ಷಣಗಳು. ಆದ್ರೆ ವಾಸನೆ ಅಥವಾ ರುಚಿ ಕಳೆದುಕೊಳ್ಳುವುದು ಮತ್ತು ಮೂಗು ಕಟ್ಟುವುದು, ಜ್ವರದ ಲಕ್ಷಣಗಳು ಸೋಂಕಿತರಲ್ಲಿ ಕಂಡುಬಂದಿಲ್ಲ. ಇವು ಡೆಲ್ಟಾ ಹಾಗೂ ಕೊರೊನಾ ಸೋಂಕಿತರಲ್ಲಿ ಕಂಡುಬರುತ್ತಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.

ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಡೆಲ್ಟಾ ರೂಪಾಂತರಿಯಷ್ಟು ಒಮಿಕ್ರೋನ್ ಅಪಾಯಕಾರಿ ಅಲ್ಲ. ಆದ್ರೆ ಮುಂದುವರೆದ್ರೆ ಬೇರೆ ರೀತಿ ಇರುತ್ತೆ. ಹೆಚ್ಚಿನ ಸಂಖ್ಯೆಯ ಸೋಂಕಿತರು ಆಸ್ಪತ್ರೆಗೆ ಸದ್ಯ ದಾಖಲಾಗುತ್ತಿಲ್ಲ ಎಂದು ಡಾ.ಏಂಜೆಲಿಕ್ ಕೋಟ್ಜಿ ಹೇಳಿದ್ದಾರೆ.

ಸದ್ಯದ ಮಟ್ಟಿಗೆ ಎಲ್ಲ ವಯಸ್ಸಿನವರು ಕೋವಿಡ್ ಲಸಿಕೆಯಿಂದ ಒಮಿಕ್ರೋನ್​ನಿಂದ ಅಲ್ಪ ಮಟ್ಟಿಗೆ ರಕ್ಷಿಸಿಕೊಳ್ಳಬಹುದು. ಲಸಿಕೆ ಪಡೆದ ಸೋಂಕಿತರಲ್ಲಿ ರೂಪಾಂತರಿಯ ಲಕ್ಷಣಗಳು ಲಘುವಾಗಿವೆ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದ NICD ಸಂಸ್ಥೆ ನವೆಂಬರ್ 25 ರಂದು ಒಮಿಕ್ರೋನ್ ರೂಪಾಂತರಿ ಬಗ್ಗೆ ಘೋಷಣೆ ಮಾಡಿದೆ. ನ.18 ರಂದು ಹಲವು ರೋಗಿಗಳು ತಲೆನೋವು, ಆಯಾಸದಿಂದ ಬಳಲುತ್ತಿದ್ದರಿಂದ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ರೂಪಾಂತರಿ ಪತ್ತೆಯಾಗಿದೆ. ಆದ್ರೆ ದೇಶದಲ್ಲಿ ಸೋಂಕು ಏಕಾಏಕಿ ಹರಡಿಲ್ಲ. ಈ ವಾರ ಸೋಂಕು ಹರಡುತ್ತಿದೆ. ಆದ್ದರಿಂದ ಇದು ವೇಗವಾಗಿ ಹರಡುವ ವೈರಸ್ ಎಂದು ವೈದ್ಯೆ ಎಚ್ಚರಿಕೆ ನೀಡಿದ್ದಾರೆ.

ಸದ್ಯ 24 ಗಂಟೆಯಲ್ಲಿ 11535 ಒಮಿಕ್ರೋನ್ ಪ್ರಕರಣಗಳು ಪತ್ತೆಯಾಗಿವೆ. 30 ಮತ್ತು 50-55 ವಯಸ್ಸಿನವರಲ್ಲೇ ಸೋಂಕು ಕಂಡುಬಂದಿದೆ ಎಂದು ಡಾ.ಏಂಜೆಲಿಕ್ ಕೋಟ್ಜಿ ಮಾಹಿತಿ ನೀಡಿದ್ದಾರೆ.

ಒಮಿಕ್ರೋನ್ ಕೋವಿಡ್ ರೂಪಾಂತರಿ ಬೆಂಗಳೂರಲ್ಲಿ ಪತ್ತೆಯಾಗುವ ಮೂಲಕ ಭಾರತಕ್ಕೂ ಕಾಲಿಟ್ಟಿದೆ. ಜೊತೆಗೆ ಅಮೆರಿಕಾದಲ್ಲೂ ಸೋಂಕು ಹರಡುತ್ತಿರುವುದು ಆತಂಕಕಾರಿಯಾಗಿದೆ.

(ಇದನ್ನೂ ಓದಿ: ಭಾರತಕ್ಕೆ ಲಗ್ಗೆ ಹಾಕಿದ ರೂಪಾಂತರಿ: ಕರ್ನಾಟಕದಲ್ಲಿ ಎರಡು ಒಮಿಕ್ರೋನ್ ಕೇಸ್​​​ ಪತ್ತೆ)

Last Updated : Dec 3, 2021, 6:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.