ಭುವನೇಶ್ವರ(ಒಡಿಶಾ) : ಕಳಂಕಿತ ಐಎಫ್ಎಸ್ ಅಧಿಕಾರಿ ಮಗನ ಹೆಸರಿನಲ್ಲಿ ಸುಮಾರು 9.4 ಕೋಟಿ ರೂ. ಠೇವಣಿ ಇಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಇಂಡಿಯನ್ ಫಾರೆಸ್ಟ್ ಸರ್ವೀಸ್ (ಐಎಫ್ಎಸ್) ಅಧಿಕಾರಿ ಅಭಯ್ ಕಾಂತ್ ಪಾಠಕ್ ಅವರಿಗೆ ಸಂಬಂಧಿಸಿ ಸ್ಥಳಗಳ ಮೇಲೆ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ನಡೆಸಿದ ದಾಳಿ ಎರಡನೇ ದಿನವೂ ಮುಂದುವರೆದಿದ್ದು, ಕೋಟ್ಯಂತರ ರೂಪಾಯಿ ಆಸ್ತಿ ಪತ್ತೆಯಾಗಿದೆ.
ಗುರುವಾರದಂದು ಭುವನೇಶ್ವರ, ಮುಂಬೈ, ಪುಣೆ, ರಾಜಸ್ಥಾನ ಮತ್ತು ಬಿಹಾರದಲ್ಲಿ ದಾಳಿ ನಡೆಸಲಾಗಿದೆ. ಈವರೆಗೆ ಸುಮಾರು 60 ಲಕ್ಷ ರೂ. ದುಬಾರಿ ವಸ್ತುಗಳು ಮತ್ತು 800 ಗ್ರಾಂ ತೂಕದ ಚಿನ್ನದ ಆಭರಣಗಳು ಕಂಡು ಬಂದಿವೆ. 23 ಲಕ್ಷ ರೂ.ಗಳ ಚಿನ್ನದ ಆಭರಣಗಳ ಖರೀದಿಗೆ ಸಂಬಂಧಿಸಿದ ಹೆಚ್ಚಿನ ದಾಖಲೆಗಳು ಪತ್ತೆಯಾಗಿವೆ ಎಂದು ವಿಜಿಲೆನ್ಸ್ ಅಧಿಕಾರಿ ತಿಳಿಸಿದ್ದಾರೆ.