ETV Bharat / bharat

ಕಲುಷಿತ ನೀರು ಕುಡಿದು ದುರಂತ..ಕಾಶಿಪುರ ಬ್ಲಾಕ್‌ನಲ್ಲಿ ಮತ್ತೆರಡು ಸಾವು: ಇನ್ನೊಂದು ಜಿಲ್ಲೆಗೆ ಹರಡಿದ ರೋಗ - ರಾಯಗಡ ಜಿಲ್ಲೆಯಲ್ಲಿ ಕಲುಷಿತ ನೀರಿನಿಂದ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ

ರಾಯಗಡ ಜಿಲ್ಲೆಯಲ್ಲಿ ಕಲುಷಿತ ನೀರಿನಿಂದ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ, ಕಾಶಿಪುರ ಬ್ಲಾಕ್‌ನ ಟಿಕಿರಿ ಪಂಚಾಯತ್‌ನ ಇಬ್ಬರ ಮಹಿಳೆಯರು ಮೃತಪಟ್ಟಿರುವುದು ವರದಿಯಾಗಿದೆ.

Cholera claims 12 lives in Rayagada's Kashipur
ಕಲುಷಿತ ನೀರು ಕುಡಿದು ದುರಂತ
author img

By

Published : Jul 27, 2022, 9:38 PM IST

ರಾಯಗಡ(ಒಡಿಶಾ): ಜಿಲ್ಲೆಯ ಕಾಶಿಪುರ ಬ್ಲಾಕ್‌ನಲ್ಲಿ ಇನ್ನಿಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಈ ಮೂಲಕ ಕಲುಷಿತ ನೀರಿನಿಂದ ಸಾವನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ.

ಒಬ್ಬರು ಟಿಕಿರಿ ಪಂಚಾಯತ್‌ನ ಜಮುಗುಡಾ ಗ್ರಾಮದ 56 ವರ್ಷದ ಸುನಿ ಮಜ್ಹಿ ಕಳೆದ ಎರಡು ದಿನಗಳಿಂದ ಅತಿಸಾರ ಮತ್ತು ವಾಂತಿಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿರಲಿಲ್ಲ, ಮನೆಯಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ಪ್ರಕರಣದಲ್ಲಿ, ಪಂಢಬಂಧ ಗ್ರಾಮದ 27 ವರ್ಷದ ಬಿತಾ ಮಾಝಿ ಇದೇ ರೀತಿಯ ಪರಿಸ್ಥಿತಿಯಲ್ಲಿ ಮನೆಯಲ್ಲಿ ಸಾವನ್ನಪ್ಪಿದ್ದಾರೆ.

ಪ್ರತಿದಿನ 70-80 ಪ್ರಕರಣಗಳು ವರದಿಯಾಗುತ್ತಿದ್ದವು, ಈಗ 60 ಕ್ಕೆ ಇಳಿದಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಭೀರ ರೋಗಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಪ್ರಸ್ತುತ ಕಾಲರಾ ರೋಗವು ಹೆಚ್ಚು ಸೂಕ್ಷ್ಮವಾಗಿದೆ ಮತ್ತು ರೋಗಿಗೆ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ. ಸೋಂಕು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಎಲ್ಲ ಮುಂಜಾಗ್ರತಾ ಕ್ರಮ: ಮಂಗಳವಾರ ಸಂಜೆಯವರೆಗೆ ಬ್ಲಾಕ್‌ನಲ್ಲಿ ಒಟ್ಟು ಕಾಲರಾ ಸೋಂಕಿತರ ಸಂಖ್ಯೆ 313 ಕ್ಕೆ ತಲುಪಿದೆ. ಸುಮಾರು 20 ಗ್ರಾಮಗಳು ನೀರಿನಿಂದ ಹರಡುವ ರೋಗದ ಹಿಡಿತದಲ್ಲಿವೆ. 297 ಗ್ರಾಮಗಳ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ ಮತ್ತು 264 ಗ್ರಾಮಗಳನ್ನು ಈಗಾಗಲೇ ನೈರ್ಮಲ್ಯೀಕರಣಗೊಳಿಸಲಾಗಿದೆ ಎಂದು ಜಿಲ್ಲೆಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇತರ ಹಳ್ಳಿಗಳಿಗೂ ಕಾಲರಾ: ಕಾಲರಾ ರೋಗವು ಬೇರೆ ಜಿಲ್ಲೆಯ ನುವಾಪಾದ ಹಳ್ಳಿಗಳಿಗೂ ಹರಡಿದೆ. ಅಲ್ಲಿ ಒಬ್ಬರು ಸಾವನ್ನಪ್ಪಿದರು ಮತ್ತು 10 ಇತರರು ಗಂಭೀರರಾಗಿದ್ದಾರೆ. ಕಾಶಿಪುರ ಬ್ಲಾಕ್ ನೀರಿನಿಂದ ಹರಡುವ ರೋಗಗಳ ಇತಿಹಾಸವನ್ನು ಹೊಂದಿದೆ. 2008 ರಲ್ಲಿ ಅತಿಸಾರದಿಂದ ಸುಮಾರು 100 ಜನರು ಸಾವನ್ನಪ್ಪಿದ್ದರೆ, 2010 ರಲ್ಲಿ ಕಾಲರಾ ಸುಮಾರು 100 ಜನರನ್ನು ಬಲಿ ತೆಗೆದುಕೊಂಡಿತ್ತು.

ಇದನ್ನೂ ಓದಿ : 7 ಮಂದಿ ಸಾವು, 71 ಜನರಿಗೆ ಅತಿಸಾರ ಭೇದಿ.. ಕಲುಷಿತ ನೀರು ಕುಡಿದು ದುರಂತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.