ಭೋಪಾಲ್(ಮಧ್ಯಪ್ರದೇಶ): ಗೆಳತಿ ಕಳವು ಮಾಡಿದ ರಮ್ಡೆಸಿವಿರ್ ಲಸಿಕೆ ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದಕ್ಕಾಗಿ ನರ್ಸಿಂಗ್ ಸಿಬ್ಬಂದಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಈ ಘಟನೆ ನಡೆದಿದೆ.
ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಬಳಕೆ ಮಾಡುವ ರೆಮ್ಡೆಸಿವರ್ ಚುಚ್ಚುಮದ್ದನ್ನ ಕದ್ದಿರುವ ಆರೋಪದ ಮೇಲೆ ಇದೀಗ ಖಾಸಗಿ ಆಸ್ಪತ್ರೆ ನರ್ಸ್ ಸಿಬ್ಬಂದಿ ಬಂಧನವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಗೆಳತಿ ಶಾಲಿನಿ ವರ್ಮಾ ತನ್ನ ಲವರ್ ಜಾಲ್ಕನ್ ಸಿಂಗ್ ಮೀನಾಗೆ ನೀಡುತ್ತಿದ್ದರು. ಜತೆಗೆ ಕೋವಿಡ್ ಲಸಿಕೆ ಬಾಕ್ಸ್ಗಳಲ್ಲಿ ಬೇರೆ ಔಷಧ ತುಂಬಿಡುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೋವಿಡ್ ಸೋಂಕಿಗೊಳಗಾಗುವ ಭಯ: ಆತ್ಮಹತ್ಯೆಗೆ ಶರಣಾದ ಯುವಕ!
ಆರಂಭದಲ್ಲಿ 30,000ರೂಗೆ ಇವುಗಳನ್ನ ಮಾರಾಟ ಮಾಡಲಾಗುತ್ತಿತ್ತು. ಆದರೆ ಇದೀಗ ಖಾಸಗಿ ಆಸ್ಪತ್ರೆ ವೈದ್ಯರಿಗೆ 13,000ರೂಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ. ಈಗಾಗಲೇ ಜಾಲ್ಕನ್ ಸಿಂಗ್ ಮೀನಾ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನರ್ಸ್ ಶಾಲಿನಿ ವರ್ಮಾ ಪರಾರಿಯಾಗಿದ್ದಾರೆ.