ETV Bharat / bharat

ದೆಹಲಿ ತೀರ್ಥಯಾತ್ರೆ ಯೋಜನೆಗೆ ಅಯೋಧ್ಯೆ ಸೇರ್ಪಡೆ: ಹಿರಿಯ ನಾಗರಿಕರಿಗೆ ಉಚಿತ ಯಾತ್ರೆ ಭಾಗ್ಯ - ಅಯೋಧ್ಯೆ

ದೆಹಲಿ ಸರ್ಕಾರದ ತೀರ್ಥಯಾತ್ರೆ ಯೋಜನೆಯಲ್ಲಿ ಅಯೋಧ್ಯೆಯನ್ನು ಸೇರಿಸಿದ್ದು, ಸಿಎಂ ಕೇಜ್ರಿವಾಲ್ ಹಿರಿಯ ನಾಗರಿಕರಿಗೆ ಉಚಿತ ಯಾತ್ರೆ ಭಾಗ್ಯ ಘೋಷಿಸಿದ್ದಾರೆ.

Now Ayodhya has also been included in Delhi Govt's Tirth Yatra Yojana: Delhi CM Arvind Kejriwal
ತೀರ್ಥಯಾತ್ರೆ ಯೋಜನೆಗೆ ಅಯೋಧ್ಯೆ ಸೇರ್ಪಡೆ; ಹಿರಿಯರಿಗೆ ಉಚಿತ ಎಂದ ಡೆಲ್ಲಿ ಸಿಎಂ ಕೇಜ್ರಿವಾಲ್‌
author img

By

Published : Oct 27, 2021, 1:03 PM IST

ನವದೆಹಲಿ: ರಾಜ್ಯ ಸರ್ಕಾರದ ತೀರ್ಥಯಾತ್ರೆ ಯೋಜನೆಯಲ್ಲಿ ಇದೀಗ ಅಯೋಧ್ಯೆಯನ್ನು ಸೇರಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಇದೀಗ ಅಯೋಧ್ಯೆಯ ರಾಮಲಲ್ಲಾ ದರ್ಶನವನ್ನೂ ತೀರ್ಥಯಾತ್ರೆಗೆ ಸೇರಿಸಲಾಗಿದೆ. ಹಿರಿಯ ನಾಗರಿಕರಿಗೆ ಉಚಿತ ದರ್ಶನ ಭಾಗ್ಯವನ್ನು ಕಲ್ಪಿಸಲಾಗಿದೆ. ಯಾತ್ರೆ ಕೈಗೊಳ್ಳುವ ಹಿರಿಯರ ನಾಗರಿಕರು ಸಹಾಯಕ್ಕೆ ತಮ್ಮ ಜೊತೆಯಲ್ಲಿ ಒಬ್ಬರನ್ನು ಕರೆದುಕೊಂಡು ಹೋಗಬಹುದು ಎಂದು ಹೇಳಿದರು.

ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿ ವಾಪಸ್‌ ಆದ ಮರುದಿನವೇ ಸಿಎಂ ಈ ನಿರ್ಧಾರ ಪ್ರಕಟಿಸಿದರು. ದೆಹಲಿಯ ಜನರು ಕೂಡ ಅಯೋಧ್ಯೆ ನೋಡಬೇಕೆಂದು ಬಯಸುತ್ತಿರುವುದಾಗಿ ಹೇಳುತ್ತಾರೆ. ಹೀಗಾಗಿ ತೀರ್ಥಯಾತ್ರೆ ಯೋಜನೆಯನ್ನು 1 ತಿಂಗಳೊಳಗೆ ಪುನರಾರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.