ETV Bharat / bharat

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲ್ಲುವುದು ಅಸಾಧ್ಯ: ಭವಿಷ್ಯ ನುಡಿದ ಗುಲಾಂ ನಬಿ ಆಜಾದ್​

ಜಮ್ಮು - ಕಾಶ್ಮೀರದಲ್ಲಿನ ಪರಿಸ್ಥಿತಿ ನೋಡಿದರೆ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ದೇವರಿಗೂ ಅನಿಸುತ್ತದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್​​ 300 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಅಸಾಧ್ಯ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

author img

By

Published : Dec 2, 2021, 7:09 PM IST

Ghulam Nabi Azad on Genral Election
Ghulam Nabi Azad on Genral Election

ಶ್ರೀನಗರ: 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ ಗೆಲ್ಲುವುದು ಅಸಾಧ್ಯ ಎಂದು ಕಾಂಗ್ರೆಸ್​​ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್​​ ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿರುವ ಗುಲಾಂ ನಬಿ ಆಜಾದ್​​, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ 300 ಸೀಟು ಗೆಲ್ಲುತ್ತದೆ ಎಂಬುದು ಅಸಾಧ್ಯ ಎಂದಿದ್ದಾರೆ.

2019ರಲ್ಲಿ ಕೇಂದ್ರ ಸರ್ಕಾರದಿಂದ ಬ್ಯಾನ್​​ ಆಗಿರುವ ಆರ್ಟಿಕಲ್​ 370 ಬಗ್ಗೆ ಮಾತನಾಡುತ್ತಿದ್ದ ಗುಲಾಂ ನಬಿ ಆಜಾದ್​, ಸಂವಿಧಾನದ 370ನೇ ವಿಧಿ ಮರುಸ್ಥಾಪನೆ ಮಾಡುವ ಆಸೆ ನನಗೂ ಇದೆ. ಇದಕ್ಕಾಗಿ ನಮ್ಮ ಪಕ್ಷ ಲೋಕಸಭೆಯಲ್ಲಿ 300 ಸ್ಥಾನ ಗೆಲ್ಲಬೇಕು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದು ಅಸಾಧ್ಯ ಎಂದಿದ್ದಾರೆ.

ಇದನ್ನೂ ಓದಿರಿ: ಭಾರತೀಯ ಯುವತಿ ಕೈ ಹಿಡಿಯಲು ಅಮೆರಿಕದಿಂದ ಬಂದ ವಿಜ್ಞಾನಿ!

ಆರ್ಟಿಕಲ್​ 370 ರದ್ಧತಿ ವಿಚಾರ ಕೋರ್ಟ್​​ನಲ್ಲಿದೆ. ನಮ್ಮ ಕೈಯಲ್ಲಿ ಇಲ್ಲದಿರುವುದರ ಬಗ್ಗೆ ನಾನು ಮಾತನಾಡುವುದಿಲ್ಲ. ಜೊತೆಗೆ ಇಲ್ಲಿನ ಜನರಿಗೆ ಹುಸಿ ಭರವಸೆ ನೀಡಲ್ಲ ಎಂದಿರುವ ಆಜಾದ್​, ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ನೋಡಿದ್ರೆ ದೇವರಿಗೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲ್ಲಬೇಕು ಎಂದು ದೇವರಿಗೂ ಅನಿಸುತ್ತದೆ. ಆದರೆ ಅದು ಸಾಧ್ಯವಿಲ್ಲ ಎಂದರು. ಜಮ್ಮು-ಕಾಶ್ಮೀರದ ಆರ್ಟಿಕಲ್​ 370 ರದ್ಧುಗೊಳ್ಳಬೇಕಾದರೆ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ನುಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.