ETV Bharat / bharat

ನವರಾತ್ರಿ ಆಚರಣೆ, ಗರ್ಬಾ ತರಗತಿಗಳಿಗೆ ಹಿಂದೂಯೇತರರಿಗೆ ನಿರ್ಬಂಧ

author img

By

Published : Sep 7, 2022, 8:35 PM IST

ನವರಾತ್ರಿ ಹಬ್ಬದ ಆಚರಣೆ ಹಾಗೂ ಗರ್ಬಾ ತರಗತಿಗಳಿಗೆ ಹಿಂದೂಯೇತರರು ಭಾಗವಹಿಸುವುದನ್ನು ತಡೆಯಲು ಗುರುತಿನ ಚೀಟಿ ಪರಿಶೀಲಿಸಲು ಸೂರತ್‌ನ ಪ್ರತಿಷ್ಠಿತ ಖೋಡಲ್‌ಧಾಮ್ ಸಂಸ್ಥೆ ಮುಂದಾಗಿದೆ.

non-hindu-youths-are-not-allowed-to-play-garba-classes-and-navratri-in-surat
ನವರಾತ್ರಿ ಆಚರಣೆ, ಗರ್ಬಾ ತರಗತಿಗಳಿಗೆ ಹಿಂದೂಯೇತರರಿಗೆ ನಿರ್ಬಂಧ

ಸೂರತ್‌ (ಗುಜರಾತ್​): ನವರಾತ್ರಿ ಆಚರಣೆಗೂ ಮುನ್ನವೇ ಗುಜರಾತ್​ನಲ್ಲಿ ಈ ಬಾರಿ ಗರ್ಬಾ ವಿವಾದ ಶುರುವಾಗಿದೆ. ಹಿಂದೂಗಳನ್ನು ಹೊರತುಪಡಿಸಿ ಹಿಂದೂಯೇತರರಿಗೆ ಗರ್ಬಾ ನೃತ್ಯದಲ್ಲಿ ಭಾಗವಹಿಸುತ್ತಿಲ್ಲ ಮತ್ತು ಗರ್ಬಾ ತರಗತಿಗಳಿಗೆ ಹಿಂದೂಯೇತರರನ್ನು ಸೇರಿಸಿಕೊಳ್ಳಬಾರದು ಎಂಬ ಅಲಿಖಿತ ನಿರ್ಬಂಧ ವಿಧಿಸಲಾಗುತ್ತಿದೆ.

ಇತ್ತೀಚೆಗೆ ಗುಜರಾತ್​ನಲ್ಲಿ ಲವ್ ಜಿಹಾದ್ ಸಾಕಷ್ಟು ಸದ್ದು ಮಾಡಿತ್ತು. ಇದೀಗ ನವರಾತ್ರಿ ಹಬ್ಬದ ಆಚರಣೆ ಹಾಗೂ ಗರ್ಬಾ ತರಗತಿಗಳ ಸಂಘಟಕರಿಗೆ ಕೆಲವು ಹಿಂದೂ ಸಂಘಟನೆಗಳು ಮತ್ತು ಸೂರತ್‌ನ ಬಿಜೆಪಿ ಕೌನ್ಸಿಲರ್‌ಗಳು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಸೂರತ್‌ನ ಪ್ರತಿಷ್ಠಿತ ಖೋಡಲ್‌ಧಾಮ್ ಸಂಸ್ಥೆ ಕೂಡ ಗರ್ಬಾ ತರಗತಿಗಳಿಗೆ ಹಿಂದೂಯೇತರರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ಗರ್ಬಾ ಆಡುವವರ ಗುರುತಿನ ಚೀಟಿ ಪರಿಶೀಲಿಸಲಾಗುವುದು. ಅಲ್ಲದೇ, ನವರಾತ್ರಿ ಸಂದರ್ಭದಲ್ಲಿ ಹಿಂದೂ ಯುವತಿಯರು ಬೇರೆ ಯಾವುದೇ ಧರ್ಮದ ಯುವಕರನ್ನು ಭೇಟಿ ಆಗುವುದನ್ನು ತಡೆಯಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಧಾರ್ಮಿಕ್ ಮಾಳವೀಯ ತಿಳಿಸಿದ್ದಾರೆ.

ನವರಾತ್ರಿಯು ದುರ್ಗಾಮಾತೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಪೂಜಿಸುವ ಹಬ್ಬವಾಗಿದೆ. ಈ ಹಬ್ಬದಲ್ಲಿ ಕೆಲವರು ತಮ್ಮ ಮೂಲ ಹೆಸರು ಮರೆಮಾಚಿ ಭಾಗವಹಿಸಿ ಹಿಂದೂ ಹುಡುಗಿಯರನ್ನು ಲವ್ ಜಿಹಾದ್​ ಬಲೆಗೆ ಬೀಳಿಸುತ್ತಾರೆ. ಈ ಹಿಂದೆಯೂ ಇಂತಹ ಹಲವು ಘಟನೆಗಳು ಮುನ್ನೆಲೆಗೆ ಬಂದಿದ್ದವು. ಹೀಗಾಗಿ ಈ ಬಾರಿ ಗರ್ಬಾ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಅವರಿಂದ ಪಾಸ್​ಗಳ ಪರಿಶೀಲನೆ ನಡೆಸಿ ಖಾತ್ರಿಯಾದ ಬಳಿಕ ಗರ್ಬಾ ಆಡಲು ಬಿಡಲಾಗುತ್ತದೆ ಎಂದು ಹೇಳಿದ್ದಾರೆ.

ಇತ್ತ, ಸೂರತ್‌ನ ಬಿಜೆಪಿ ಕೌನ್ಸಿಲರ್ ವಿಜಯ್ ಚೋಮಲ್ ಸಹ ಗರ್ಬಾ ತರಗತಿಗಳನ್ನು ನಡೆಸುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ. ಬೇರೆ ಧರ್ಮದವರು ಗರ್ಬಾ ತರಗತಿಗಳಿಗೆ ಪ್ರವೇಶ ಪಡೆಯುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುವುದನ್ನು ಮೊದಲೇ ಆಯೋಜಕರು ಮತ್ತು ಸಂಘಟಕರು ತಿಳಿದುಕೊಳ್ಳಬೇಕೆಂದು ಹೇಳಿದ್ದಾರೆ.

ಇದನ್ನೂ ಓದಿ: ಧಾರ್ಮಿಕ ಸಂಸ್ಥೆಗಳಿಗೆ ಧರ್ಮ ಬದಲಿಸುವ ಹಕ್ಕಿಲ್ಲ: ಗ್ವಾಲಿಯರ್​ ಹೈಕೋರ್ಟ್​ ಮಹತ್ವದ ತೀರ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.