ETV Bharat / bharat

ಅಮಲಾಪುರಂ ಹಿಂಸಾಚಾರ: ಒಂದು ವಾರದಿಂದ ಇಂಟರ್ನೆಟ್​ ಸೇವೆ ಸ್ಥಗಿತ; ಸಿಗ್ನಲ್​ಗಾಗಿ ಅಲೆದಾಟ - ಇಂಟರ್ನೆಟ್​ ಸೇವೆ ಇಲ್ಲದೆ ಜನ ಕಕ್ಕಾಬಿಕ್ಕಿ

ಕೋನಸೀಮಾ ಜಿಲ್ಲೆಗೆ ಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವುದನ್ನು ವಿರೋಧಿಸಿ ಕೋನಸೀಮಾ ಸಾಧನಾ ಸಮಿತಿ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆ ವೇಳೆ, ಜಿಲ್ಲಾ ಕೇಂದ್ರವಾದ ಅಮಲಾಪುರದಲ್ಲಿ ಹಿಂಸಾಚಾರ ನಡೆದಿತ್ತು.

No internet connection in Amalapuram For One week...
ಒಂದು ವಾರದಿಂದ ಇಂಟರ್ನೆಟ್​ ಸೇವೆ ಸ್ಥಗಿತ; ಸಿಗ್ನಲ್​ಗಾಗಿ ಅಲೆದಾಟ
author img

By

Published : May 31, 2022, 7:58 PM IST

ಅಮಲಾಪುರ(ಆಂಧ್ರಪ್ರದೇಶ): ಅಮಲಾಪುರಂನಲ್ಲಿ ನಡೆದ ವಿಧ್ವಂಸಕ ಘಟನೆಗಳಿಂದಾಗಿ ಅಧಿಕಾರಿಗಳು ಕಳೆದ ಏಳು ದಿನಗಳಿಂದ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಆದರೆ ಇದುವರೆಗೂ ಇಂಟರ್ನೆಟ್​ ಸೇವೆ ಮರುಸ್ಥಾಪನೆಯಾಗದೇ ಎಲ್ಲಾ ವರ್ಗದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಸಾಫ್ಟ್​ವೇರ್​ ಉದ್ಯೋಗಿಗಳ ಸ್ಥಿತಿ ಚಿಂತಾಜನಕವಾಗಿದೆ. ಕೈಯಲ್ಲಿ ಲ್ಯಾಪ್​ಟಾಪ್​, ಫೋನ್​ ಹಿಡಿದು ಸಿಗ್ನಲ್​​ಗಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ.

ಮನೆಯಿಮದಲೇ ಕೆಲಸ ಮಾಡುವ ಅದೆಷ್ಟೋ ಉದ್ಯೋಗಿಗಳು ಇಂಟರ್ನೆಟ್​ ಸೇವೆ ಇಲ್ಲದೇ, ಸಿಗ್ನಲ್​ಗಾಗಿ ಜಿಲ್ಲೆಯ ಗಡಿಭಾಗಕ್ಕೆ ತೆರಳುತ್ತಿದ್ದಾರೆ. ದೂರದ ಪ್ರದೇಶಗಳಾದ ಯಾಣಂ, ಕಾಕಿನಾಡ, ರಾಜಮಂಡ್ರಿ, ಪಾಲಕೊಳ್ಳು, ಭೀಮಾವರಂ, ನರಸಪುರಂ ಮುಂತಾದ ಪ್ರದೇಶಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಗೋದಾವರಿ ನದಿ ತಟದಲ್ಲೂ ಕುಳಿತು ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಮತ್ತೊಂದೆಡೆ ಡಿಜಿಟಲ್ ಸೇವೆಗಳು ಸ್ಥಗಿತಗೊಂಡಿದ್ದು, ವ್ಯಾಪಾರಸ್ಥರು ಆರ್ಥಿಕ ವಹಿವಾಟು ನಡೆಸಲು ಪರದಾಡುತ್ತಿದ್ದಾರೆ.

ಒಂದು ವಾರದಿಂದ ಇಂಟರ್ನೆಟ್​ ಸೇವೆ ಸ್ಥಗಿತ; ಸಿಗ್ನಲ್​ಗಾಗಿ ಅಲೆದಾಟ

ಅಮಲಾಪುರಂ ಹಿಂಸಾಚಾರ... ಇಂಟರ್ನೆಟ್​ ಸೇವೆ ಇಲ್ಲದೇ ಜನ ಕಕ್ಕಾಬಿಕ್ಕಿ: ಕೋನಸೀಮಾ ಜಿಲ್ಲೆಗೆ ಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆ ಸರ್ಕಾರದ ಪ್ರಸ್ತಾವನೆ ಮುಂದಿಟ್ಟಿದೆ. ಇದನ್ನು ವಿರೋಧಿಸಿ ಕೋನಸೀಮಾ ಸಾಧನಾ ಸಮಿತಿ (ಕೆಎಸ್‌ಎಸ್) ಕಳೆದ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆ ವೇಳೆ ಜಿಲ್ಲಾ ಕೇಂದ್ರವಾದ ಅಮಲಾಪುರದಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳೇ ಪ್ರಮುಖ ಕಾರಣ ಎಂದು ಪೊಲೀಸರು ಗುರುತಿಸಿದ್ದು, ಅಧಿಕಾರಿಗಳ ಆದೇಶದ ಮೇರೆಗೆ ಇಂಟರ್ನೆಟ್​​ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಆದರೆ, ಈಗ ಅದರ ಪ್ರಭಾವ ಅಮಲಾಪುರದಿಂದ 10 ಕಿ.ಮೀ ದೂರದ ಮುಮ್ಮಡಿವರಂನ ವ್ಯಾಪಾರಿಗಳ ಮೇಲೂ ಬಿದ್ದಿದೆ. ಇಂಟರ್ನೆಟ್ ಸಂಪರ್ಕ ಇಲ್ಲದ ಕಾರಣ ನೆಟ್ ಸೆಂಟರ್​ಗಳು ಕೂಡ ಮುಚ್ಚಿವೆ. ಸಣ್ಣ ವ್ಯಾಪಾರಿಗಳು, ಮೀಸಲಾತಿ ಬುಕ್ಕಿಂಗ್ ಕೇಂದ್ರಗಳು, ಔಷಧ ಅಂಗಡಿಗಳು, ಸೆಲ್ ಫೋನ್ ರೀಚಾರ್ಜ್ ಕೇಂದ್ರಗಳ ಮಾಲೀಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಡಿಜಿಟಲ್ ಪಾವತಿಗೆ ಒಗ್ಗಿಕೊಂಡಿರುವವರು ನೆಟ್ ಸೇವೆಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ.

ಸರ್ಕಾರ ಕೂಡಲೇ ಸ್ಪಂದಿಸಿ ಇಂಟರ್ ನೆಟ್ ಸೇವೆ ಮರುಸ್ಥಾಪಿಸಬೇಕು, ಇಲ್ಲವಾದಲ್ಲಿ ಮುಷ್ಕರ ನಡೆಸುವುದಾಗಿ ಸಾಫ್ಟ್​ವೇರ್ ನೌಕರರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಆಂಧ್ರ ಹಿಂಸಾಚಾರಕ್ಕೆ ಸಂಬಂಧಿಸಿ 46 ಜನರ ಬಂಧನ: ಜಗನ್​ ಸರ್ಕಾರದ ವಿರುದ್ಧ ನಾಯ್ಡು, ಪವನ್ ಕಲ್ಯಾಣ್ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.