ETV Bharat / bharat

ಸುಪ್ರೀಂಕೋರ್ಟ್​ ಯಾವುದೇ ಭರವಸೆ ಉಳಿಸಿಕೊಂಡಿಲ್ಲ: ಕಪಿಲ್​ ಸಿಬಲ್​ - SIT

ಹಿರಿಯ ವಕೀಲ ಕಪಿಲ್​ ಸಿಬಲ್​ ಸುಪ್ರೀಂಕೋರ್ಟ್​ ಬಗ್ಗೆ ಅಸಮಾಧಾನ- ಸುಪ್ರೀಂ ತೀರ್ಪು ಬಗ್ಗೆ ಸಿಬಲ್​ ಅಪನಂಬಿಕೆ- ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್​ ಬಗ್ಗೆ ಕಪಿಲ್​ ಸಿಬಲ್​ ಮಾತು

kapil-sibal
ಕಪಿಲ್​ ಸಿಬಲ್​
author img

By

Published : Aug 8, 2022, 1:54 PM IST

ನವದೆಹಲಿ: ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂಕೋರ್ಟ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮ ಪ್ರಕರಣಗಳನ್ನು ಆಯ್ದ ನ್ಯಾಯಮೂರ್ತಿಗಳಿಗೆ ಮಾತ್ರ ವಹಿಸುತ್ತಿರುವುದರಿಂದ ನ್ಯಾಯಸಮ್ಮತ ತೀರ್ಪು ಬರುತ್ತಿಲ್ಲ. ಸುಪ್ರೀಂ ಮೇಲೆ ಯಾವುದೇ ಭರವಸೆ ಉಳಿದಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ 50 ವರ್ಷ ಕೆಲಸ ಮಾಡಿದ್ದೇನೆ. ಇಷ್ಟು ಸುದೀರ್ಘ ಸಮಯದ ಬಳಿಕ ಈ ರೀತಿ ಹೇಳುವುದು ತಕ್ಕುದಲ್ಲ. ಆದರೆ, ಪರಿಸ್ಥಿತಿಗಳು ಬದಲಾಗಿವೆ. ಕೆಲ ಸೂಕ್ಷ್ಮ ಪ್ರಕರಣಗಳು ಆಯ್ದ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಬಂದಾಗ, ಆ ಪ್ರಕರಣದ ತೀರ್ಪು ಏನಿರಬಹುದು ಎಂಬುದನ್ನು ಕಾನೂನು ಪಂಡಿತರು ಊಹಿಸಬಲ್ಲರು. ಸಂವಿಧಾನದ ಮೂರನೇ ಅಂಗ ತನ್ನ ನಂಬಿಕೆ ಕಳೆದುಕೊಂಡಿದೆ ಎಂದು ಆಪಾದಿಸಿದರು.

ಸುಪ್ರೀಂ ಕೋರ್ಟ್‌ನಿಂದ ಬರುತ್ತಿರುವ ಮಹತ್ವದ ತೀರ್ಪುಗಳು ಈ ನೆಲದ ನಂಬಿಕೆ ಮತ್ತು ವಾಸ್ತವತೆಯನ್ನು ಹೊಂದಿಲ್ಲ. ನ್ಯಾಯಾಲಯ ಗೌಪ್ಯ ಮಾಹಿತಿಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳುತ್ತದೆ. ಆದರೆ, ಕೆಲ ದಿನಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಂಥವರ ಮನೆಗಳ ಮೇಲೆ ದಾಳಿ ಮಾಡುತ್ತಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು.

"ನಾಗರಿಕರ ಸ್ವಾತಂತ್ರ್ಯದ ಮೇಲೆ ನ್ಯಾಯಾಂಗದ ಪಾತ್ರ" ಕುರಿತು ದೆಹಲಿಯಲ್ಲಿ ಶನಿವಾರ ನಡೆದ ನಾಗರಿಕ ನ್ಯಾಯಾಧಿಕರಣ ಕಾರ್ಯಕ್ರಮದಲ್ಲಿ ಅವರು ಈ ಎಲ್ಲ ಅಂಶಗಳ ಬಗ್ಗೆ ಮಾತನಾಡಿದ್ದಾರೆ.

2002 ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರಿಗೆ ವಿಶೇಷ ತನಿಖಾ ತಂಡ (SIT) ನೀಡಿದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿ, ಜಾರಿ ನಿರ್ದೇಶನಾಲಯಕ್ಕೆ ವ್ಯಾಪಕ ಅಧಿಕಾರ ನೀಡಿದ್ದು, ಛತ್ತೀಸ್‌ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು 17 ಬುಡಕಟ್ಟು ಜನಾಂಗದವರನ್ನು ಹತ್ಯೆ ಮಾಡಿದ ಪ್ರಕರಣವನ್ನು ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿ ವಜಾಗೊಳಿಸಿದ್ದರ ವಿರುದ್ಧ ಸಿಬಲ್​ ಅಸಮಾಧಾನ ವ್ಯಕ್ತಪಡಿಸಿದರು.

ಓದಿ: ಸರ್ಕಾರಿ ಐಟಿಐ ಕಾಲೇಜು ಪರೀಕ್ಷೆಯಲ್ಲಿ ಮಾಸ್​ ಕಾಪಿ: ಉಪನ್ಯಾಸಕಿಗೆ ಕೊಲೆ ಬೆದರಿಕೆ- ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.