ETV Bharat / bharat

ತಂಗಿ ಮದುವೆಗೆ ಚಿನ್ನ ಖರೀದಿಸಲು ಬ್ಯಾಂಕ್​​​ನಲ್ಲಿ ಸಿಗದ ಸಾಲ.. ಆತ್ಮಹತ್ಯೆಗೆ ಶರಣಾದ ಸಹೋದರ.. - ಕೇರಳದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಜ್ಯುವೆಲ್ಲರಿ ಶಾಪ್​​ನಲ್ಲಿ ಕಾಯ್ದು ಕಾಯ್ದು ತಾಯಿ-ಮಗಳು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿಪಿನ್ ಕುಟುಂಬ ಕೇವಲ ಮೂರು ಗುಂಟೆ ಭೂಮಿ ಹೊಂದಿದೆ. ಸಹಕಾರಿ ಬ್ಯಾಂಕ್​​​ ಹಾಗೂ ರಾಷ್ಟ್ರೀಕೃತ ಬ್ಯಾಂಕ್​​​ಗಳಲ್ಲಿ ಸಾಲ ಸಿಗುವುದಿಲ್ಲ. ಹೀಗಾಗಿ, ಖಾಸಗಿ ಬ್ಯಾಂಕ್​​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು, ಸಾಲ ನೀಡಲು ಅಧಿಕಾರಿಗಳು ಒಪ್ಪಿದ್ದರು..

Man suicide in Kerala
Man suicide in Kerala
author img

By

Published : Dec 7, 2021, 6:30 PM IST

ತ್ರಿಶೂರ್(ಕೇರಳ) : ಒಡಹುಟ್ಟಿದ ತಂಗಿ ಮದುವೆಗೋಸ್ಕರ ಚಿನ್ನ ಖರೀದಿ ಮಾಡಲು ಬ್ಯಾಂಕ್​​ನಲ್ಲಿ ಸಾಲ ಸಿಗದ ಕಾರಣ 26 ವರ್ಷದ ಸಹೋದರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ತ್ರಿಶೂರ್​​ನಲ್ಲಿ ನಡೆದಿದೆ.

ಚಿನ್ನ ಖರೀದಿ ಮಾಡಲು ಮುಂದಾಗಿದ್ದ ಪಿ ವಿ ವಿಪಿನ್​​​​, ತನ್ನ ಸಹೋದರಿ ಹಾಗೂ ತಾಯಿಯನ್ನ ಜ್ಯುವೆಲ್ಲರಿ ಶಾಪ್​ನಲ್ಲಿ ಬಿಟ್ಟು ಹಣ ತೆಗೆದುಕೊಂಡು ಬರಲು ಬ್ಯಾಂಕ್​​ಗೆ ತೆರಳಿದ್ದಾನೆ. ಈ ವೇಳೆ ಸಾಲ ನೀಡಲು ಬ್ಯಾಂಕ್​ ನಿರಾಕರಣೆ ಮಾಡಿದ್ದರಿಂದ ಬೇರೆ ಹಾದಿ ಕಾಣದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ತ್ರಿಶೂರ್​ನ ಚೆಂಬುಕ್ಕಾವು ಎಂಬಲ್ಲಿ ಈ ಘಟನೆ ನಡೆದಿದೆ. ತನ್ನ ಸಹೋದರಿ ಮದುವೆಗೋಸ್ಕರ ಚಿನ್ನಾಭರಣ ಖರೀದಿಸಲು ಆತ ಬ್ಯಾಂಕ್​​​ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದನೆಂದು ತಿಳಿದು ಬಂದಿದೆ.

ಸಾಲ ಮಂಜೂರಾಗಿದ್ದಾಗಿ ತಿಳಿಸಿದ್ದ ಬ್ಯಾಂಕ್​ ; ಚಿನ್ನ ಖರೀದಿ ಮಾಡಲು ಹೋಗುವ ಹಿಂದಿನ ದಿನ ಬ್ಯಾಂಕ್​​​ ಅಧಿಕಾರಿಗಳು ವಿಪಿನ್​​ಗೆ ಫೋನ್​ ಮಾಡಿ, ಸಾಲ ಮಂಜೂರು ಆಗಿರುವುದಾಗಿ ತಿಳಿಸಿದ್ದರು.

ಹೀಗಾಗಿ, ತಾಯಿ-ಸಹೋದರಿಯನ್ನ ಜ್ಯುವೆಲ್ಲರಿ ಶಾಪ್​​ನಲ್ಲಿ ಬಿಟ್ಟು, ಆತ ಹಣ ಪಡೆದುಕೊಂಡು ಬರಲು ಬ್ಯಾಂಕ್​​ಗೆ ಹೋಗಿದ್ದ. ಆದರೆ, ಕೊನೆ ಕ್ಷಣದಲ್ಲಿ ಆತನ ಅರ್ಜಿ ನಿರಾಕರಣೆಗೊಂಡಿದೆ. ಇದರಿಂದ ಬೇರೆ ದಾರಿ ಕಾಣದೇ ಮನೆಗೆ ತೆರಳಿರುವ ವಿಪಿನ್​​​ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿರಿ: ರೈತರ ಎಲ್ಲ ಬೇಡಿಕೆ ಅಂಗೀಕಾರಕ್ಕೆ ಕೇಂದ್ರದ ಒಪ್ಪಿಗೆ: ಪ್ರತಿಭಟನೆ ಹಿಂಪಡೆದುಕೊಳ್ಳಲಿರುವ ಅನ್ನದಾತರು!?

ಜ್ಯುವೆಲ್ಲರಿ ಶಾಪ್​​ನಲ್ಲಿ ಕಾಯ್ದು ಕಾಯ್ದು ತಾಯಿ-ಮಗಳು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿಪಿನ್ ಕುಟುಂಬ ಕೇವಲ ಮೂರು ಗುಂಟೆ ಭೂಮಿ ಹೊಂದಿದೆ. ಸಹಕಾರಿ ಬ್ಯಾಂಕ್​​​ ಹಾಗೂ ರಾಷ್ಟ್ರೀಕೃತ ಬ್ಯಾಂಕ್​​​ಗಳಲ್ಲಿ ಸಾಲ ಸಿಗುವುದಿಲ್ಲ. ಹೀಗಾಗಿ, ಖಾಸಗಿ ಬ್ಯಾಂಕ್​​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು, ಸಾಲ ನೀಡಲು ಅಧಿಕಾರಿಗಳು ಒಪ್ಪಿದ್ದರು.

ಆದರೆ, ಹಣ ಪಡೆದುಕೊಂಡು ಬರಲು ಹೋದಾಗ ಸಾಲ ನೀಡಲು ಆಗುವುದಿಲ್ಲ ಎಂದು ಹೇಳಿರುವ ಕಾರಣ, ವಿಪಿನ್​​ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.