ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸಂದರ್ಭದಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡು ಇನ್ನಿಲ್ಲದ ತೊಂದರೆ ಅನುಭವಿಸಿದ್ದಾರೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡಿರುವ ಅನೇಕ ಘಟನೆಗಳಿವೆ. ಆದರೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಸಂದರ್ಭದಲ್ಲಿ ಯೂಟ್ಯೂಬ್ನಿಂದ ಪ್ರತಿ ತಿಂಗಳು 4 ಲಕ್ಷ ರೂ. ಸಂಪಾದನೆ ಮಾಡಿದ್ದಾರೆ.
ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ ಯೋಜನೆಯ ಪ್ರಗತಿ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಹರಿಯಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಕೇಂದ್ರ ಸಚಿವರು, ಕೋವಿಡ್ ಸಂದರ್ಭದಲ್ಲಿನ ಸಮಯವನ್ನು ಯಾವ ರೀತಿಯಾಗಿ ಸದುಪಯೋಗ ಪಡಿಸಿಕೊಂಡಿದ್ದರು ಎಂಬುದರ ಬಗ್ಗೆ ಹೇಳಿಕೊಂಡರು.
-
In COVID time, I did two things -- I started cooking at home & giving lectures through video conference. I delivered many lectures online, which were uploaded on YouTube. Owing to huge viewership, YouTube now pays me Rs 4 lakhs per month: Union Minister Nitin Gadkari (16.09) pic.twitter.com/IXWhDK6wG9
— ANI (@ANI) September 16, 2021 " class="align-text-top noRightClick twitterSection" data="
">In COVID time, I did two things -- I started cooking at home & giving lectures through video conference. I delivered many lectures online, which were uploaded on YouTube. Owing to huge viewership, YouTube now pays me Rs 4 lakhs per month: Union Minister Nitin Gadkari (16.09) pic.twitter.com/IXWhDK6wG9
— ANI (@ANI) September 16, 2021In COVID time, I did two things -- I started cooking at home & giving lectures through video conference. I delivered many lectures online, which were uploaded on YouTube. Owing to huge viewership, YouTube now pays me Rs 4 lakhs per month: Union Minister Nitin Gadkari (16.09) pic.twitter.com/IXWhDK6wG9
— ANI (@ANI) September 16, 2021
ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿ ಅಡುಗೆ ಮಾಡುವುದು ಹಾಗೂ ವಿಡಿಯೋ ಕಾನ್ಪರೆನ್ಸ್ ಮೂಲಕ ಉಪನ್ಯಾಸ ನೀಡುವ ಕೆಲಸ ಮಾಡುತ್ತಿದ್ದೆ. ಆನ್ಲೈನ್ ಉಪನ್ಯಾಸಗಳನ್ನು ಯೂಟ್ಯೂಬ್ನಲ್ಲಿ ಶೇರ್ ಮಾಡಲು ಶುರು ಮಾಡಿದ್ದರಿಂದ ಅದಕ್ಕೆ ಪ್ರೇಕ್ಷಕರಿಂದ ಭಾರಿ ಬೆಂಬಲ ವ್ಯಕ್ತವಾಯಿತು. ಹೀಗಾಗಿ ನಾನು ಪ್ರತಿ ತಿಂಗಳು 4 ಲಕ್ಷ ರೂಪಾಯಿ ಗಳಿಕೆ ಮಾಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ನಿವಾಸದ ಮೇಲೆ ಐಟಿ ದಾಳಿ..
ಇನ್ನೊಂದು ಘಟನೆ ಮೆಲಕು ಹಾಕಿದ ಕೇಂದ್ರ ಸಚಿವರು:
ಮದುವೆಯಾದ ಹೊಸದರಲ್ಲಿ ಮಾವನ ಮನೆ ಕೆಡವಲು ಖುದ್ದಾಗಿ ಆದೇಶ ನೀಡಿದ್ದೆ ಎಂದು ಹೇಳಿಕೊಂಡಿದ್ದಾರೆ. ನನ್ನ ಮಾವನ ಮನೆ ರಸ್ತೆ ಮಧ್ಯದಲ್ಲಿತ್ತು. ಈ ವಿಚಾರವನ್ನು ನನ್ನ ಹೆಂಡತಿಗೆ ತಿಳಿಸದೇ ಮನೆ ಕೆಡವಲು ಆದೇಶಿಸಿದ್ದೆ. ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಗಡ್ಡರಿ ಹೇಳಿದ್ದಾರೆ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಸುಮಾರು 95,000 ಕೋಟಿ ರೂ ವೆಚ್ಚದ ಯೋಜನೆ ನಡೆಯುತ್ತಿದ್ದು, ವೀಕ್ಷಣೆ ಮಾಡಲು ತೆರಳಿದ್ದ ವೇಳೆ ನಿತಿನ್ ಗಡ್ಕರಿ ಮನಬಿಚ್ಚಿ ಮಾತನಾಡಿದರು.