ETV Bharat / bharat

ಟೆರರ್​ ಗ್ಯಾಂಗ್​ಸ್ಟರ್​​ ಪ್ರಕರಣ: ದೆಹಲಿ, ಹರಿಯಾಣ, ಪಂಜಾಬ್‌ನ 32 ಸ್ಥಳಗಳಲ್ಲಿ ಎನ್‌ಐಎ ದಾಳಿ

ಭಯೋತ್ಪಾದಕ, ದರೋಡೆಕೋರ, ಮಾದಕ ಕಳ್ಳಸಾಗಣೆದಾರರ ಜೊತೆ ನಂಟು ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಗುರುವಾರ ದೆಹಲಿ, ಹರಿಯಾಣ ಮತ್ತು ಪಂಜಾಬ್‌ನ 32 ಪ್ರದೇಶಗಳಲ್ಲಿ ಸಂಬಂಧಿಸಿದಂತೆ ತೀವ್ರ ಶೋಧ ಕಾರ್ಯ ನಡೆಸಿದರು.

NIA  Haryana  Punjab  Terror gangster case  ಎನ್‌ಐಎ ದಾಳಿ  ಆಸ್ತಿ ಮುಟ್ಟುಗೋಲು
ಭಯೋತ್ಪಾದಕ- ದರೋಡೆಕೋರರ ಪ್ರಕರಣ: ದೆಹಲಿ, ಹರಿಯಾಣ, ಪಂಜಾಬ್‌ನ 32 ಸ್ಥಳಗಳಲ್ಲಿ ಎನ್‌ಐಎ ದಾಳಿ
author img

By ETV Bharat Karnataka Team

Published : Jan 11, 2024, 3:50 PM IST

ನವದೆಹಲಿ: ಭಯೋತ್ಪಾದಕರು, ದರೋಡೆಕೋರ ಜತೆ ಮಾದಕ ಕಳ್ಳಸಾಗಣೆದಾರರು ನಂಟು ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​​​ಐಎ ಇಂದು ಭರ್ಜರಿ ಕಾರ್ಯಾಚರಣೆ ಕೈಗೊಂಡಿದೆ. ಉಗ್ರರರನ್ನು ಮಟ್ಟಹಾಕಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಗುರುವಾರ ದೆಹಲಿ, ಹರಿಯಾಣ ಮತ್ತು ಪಂಜಾಬ್‌ನ 32 ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆಯಿಂದಲೇ ವಿವಿಧೆಡೆ ದಾಳಿ ನಡೆಸಲಾಗಿದೆ. ಭಯೋತ್ಪಾದನಾ ವಿರೋಧಿ ಏಜೆನ್ಸಿಯ ಅನೇಕ ತಂಡಗಳು, ರಾಜ್ಯ ಪೊಲೀಸ್ ಪಡೆಗಳ ಭದ್ರತೆಯಲ್ಲಿ ಹುಡುಕಾಟ ನಡೆಸಿವೆ.

ಆರೋಪಿಗಳ ಆಸ್ತಿ ಮುಟ್ಟುಗೋಲು: ಹರಿಯಾಣದ ಝಜ್ಜರ್ ಮತ್ತು ಸೋನಿಪತ್ ಇತರ ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ನಟೋರಿಯಸ್​ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಸಂಘಟಿತ ಭಯೋತ್ಪಾದನೆ ಹಾಗೂ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಿವಿಧ ಪ್ರದೇಶಗಳಲ್ಲಿ ಅಧಿಕಾರಿಗಳು ತೀವ್ರ ತಪಾಸಣೆ ಕೈಗೊಂಡಿದ್ದಾರೆ. ಜನವರಿ 6 ರಂದು ಲಾರೆನ್ಸ್ ಬಿಷ್ಣೋಯ್ ಒಡೆತನದ ನಾಲ್ಕು ಆಸ್ತಿಗಳನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡಿತ್ತು. ಈಗ ಮತ್ತೆ ದಾಳಿಗಳನ್ನು ಮಾಡಲಾಗಿದೆ.

ಈ ಆಸ್ತಿಗಳಲ್ಲಿ ಮೂರು ಸ್ಥಿರ ಮತ್ತು ಒಂದು ಚರಾಸ್ತಿ ಸೇರಿವೆ. ಈ ಹಿಂದೆ 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಅಡಿ ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ NIA ತಂಡಗಳು ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಎಲ್ಲ ಆಸ್ತಿಗಳು ಭಯೋತ್ಪಾದನೆಯ ಸಂಚು ರೂಪಿಸಲು ಮತ್ತು ಗಂಭೀರ ಅಪರಾಧಗಳನ್ನು ಕಾರ್ಯಗತಗೊಳಿಸಲು ಬಳಸಲಾಗುತ್ತಿತ್ತು ಎಂದು ಕಂಡುಕೊಂಡಿರುವ ಎನ್​ಐಎ, ಇಂತಹ ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಭಯೋತ್ಪಾದಕ ಗ್ಯಾಂಗ್‌ನ ಆಶ್ರಯದಾತ ವಿಕಾಸ್ ಸಿಂಗ್‌ಗೆ ಸೇರಿದ ಫ್ಲಾಟ್-77/4, ಆಶ್ರಯ-1, ಸುಲಭ್ ಆವಾಸ್ ಯೋಜನೆ, ಸೆಕ್ಟರ್-1, ಗೋಮತಿ ನಗರ ವಿಸ್ತರಣೆ, ಉತ್ತರ ಪ್ರದೇಶದ ಲಕ್ನೋ ಸೇರಿದಂತೆ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.

ಎನ್‌ಐಎ ತನಿಖೆಯಿಂದ ಬಹಿರಂಗವಾದ ಮಾಹಿತಿ: ಎನ್‌ಐಎ ತನಿಖೆಯ ಪ್ರಕಾರ, ವಿಕಾಸ್ ಸಿಂಗ್, ಲಾರೆನ್ಸ್ ಬಿಷ್ಣೋಯ್ ಅವರ ಸಹವರ್ತಿಯಾಗಿದ್ದು, ಪಂಜಾಬ್ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ರಾಕೆಟ್-ಪ್ರೊಪೆಲ್ಡ್ ಗ್ರೆನೇಡ್ (ಆರ್‌ಪಿಜಿ) ದಾಳಿಯಲ್ಲಿ ಭಾಗಿಯಾಗಿರುವ ಆರೋಪಿಗಳು ಸೇರಿದಂತೆ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು.

ಜೋಗಿಂದರ್ ಸಿಂಗ್ ಗ್ಯಾಂಗ್‌ಸ್ಟರ್ ಕಲಾ ರಾಣಾ ಅವರ ತಂದೆಯು ಲಾರೆನ್ಸ್ ಬಿಷ್ಣೋಯ್ ಅವರ ನಿಕಟ ಸಹವರ್ತಿ ಆಗಿದ್ದಾರೆ. ಜೋಗಿಂದರ್ ಸಿಂಗ್ ತನ್ನ ಫಾರ್ಚುನರ್ ಕಾರನ್ನು ಭಯೋತ್ಪಾದಕ ಕೃತ್ಯಗಳನ್ನು ಉತ್ತೇಜಿಸಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸುವ ಉದ್ದೇಶಕ್ಕಾಗಿ ಬಳಸಲು ಅವಕಾಶ ನೀಡುವ ಮೂಲಕ ಗ್ಯಾಂಗ್ ಸದಸ್ಯರಿಗೆ ಅನುಕೂಲ ಮಾಡಿಕೊಡುತ್ತಿದ್ದನು ಎಂದು ಎನ್​ಐಎ ಆರೋಪಿಸಿದೆ.

ಆರೋಪಿ ದಲೀಪ್ ಕುಮಾರ್‌ಗೆ ಸೇರಿದ ಆಸ್ತಿಯನ್ನು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಮತ್ತು ಮರೆಮಾಚಲು ಆಶ್ರಯ ಮತ್ತು ಉಗ್ರಾಣವಾಗಿ ಬಳಸಲಾಗುತ್ತಿತ್ತು. ಭಯೋತ್ಪಾದಕ ಗ್ಯಾಂಗ್ ಸದಸ್ಯರಿಗೆ ಆಶ್ರಯ ನೀಡಲಾಗುತ್ತಿತ್ತು. ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಸಹಚರರ ಸಂಘಟಿತ ಅಪರಾಧಗಳ ವಿರುದ್ಧ NIA ಆಗಸ್ಟ್ 2022ರಲ್ಲಿ UA(P)A ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಈ ಗ್ಯಾಂಗ್ ತನ್ನ ಮಾಫಿಯಾ ಮಾದರಿಯ ಅಪರಾಧದ ಜಾಲಗಳನ್ನು ದೇಶದ ಹಲವಾರು ರಾಜ್ಯಗಳಲ್ಲಿ ಹರಡಿದೆ ಎಂದು ಎನ್​ಐಎ ಸಂಸ್ಥೆ ತನಿಖೆಯಿಂದ ಬಹಿರಂಗವಾಗಿದೆ.

ಈ ಜಾಲಗಳು ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿವೆ. ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಮತ್ತು ಪರ್ದೀಪ್ ಕುಮಾರ್ ಅವರಂತಹ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರ ಹತ್ಯೆಗಳು, ಉದ್ಯಮಿಗಳು ಮತ್ತು ವೃತ್ತಿಪರರಿಂದ ದೊಡ್ಡ ಪ್ರಮಾಣದ ಸುಲಿಗೆಗಳು ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ತಿಳಿದಿದೆ.

ಪಾಕಿಸ್ತಾನ ಮತ್ತು ಕೆನಡಾ ಸೇರಿದಂತೆ ವಿದೇಶಗಳಿಂದ ಅಥವಾ ಭಾರತದಾದ್ಯಂತ ಜೈಲುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟಿತ ಭಯೋತ್ಪಾದಕ ಗ್ಯಾಂಗ್​ಗಳ ನಾಯಕರು, ಈ ಭಯೋತ್ಪಾದಕ ಸಂಚುಗಳನ್ನು ರೂಪಿಸಿದ ಹಲವು ಮಾಸ್ಟರ್‌ಮೈಂಡ್‌ಗಳು ಆಗಿದ್ದಾರೆ ಎಂದು ಎನ್‌ಐಎ ತನಿಖೆಯಿಂದ ತಿಳಿದಿದೆ.

ಭಯೋತ್ಪಾದನೆ ಮತ್ತು ಮಾಫಿಯಾ ಜಾಲಗಳನ್ನು ಕಿತ್ತುಹಾಕುವ ಪ್ರಯತ್ನಗಳ ಭಾಗವಾಗಿ, NIA ಇತ್ತೀಚಿನ ತಿಂಗಳುಗಳಲ್ಲಿ 'ಭಯೋತ್ಪಾದನೆಯ ಆದಾಯ'ದಿಂದ ಪಡೆದ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಹಲವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ: ಸಂಸತ್​ ಭದ್ರತೆ ಉಲ್ಲಂಘನೆ ಕೇಸ್: ಆರೋಪಿಗಳಿಗೆ ನಾರ್ಕೊ, ಪಾಲಿಗ್ರಾಫ್​​ ಪರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.