ETV Bharat / bharat

ಬಾಂಗ್ಲಾ ಮಾನವ ಕಳ್ಳಸಾಗಣೆದಾರರಿಗೆ ನಕಲಿ ಗುರುತು ಚೀಟಿ: ಆರೋಪಿಗಾಗಿ ಬೆಂಗಳೂರಲ್ಲಿ NIA ಶೋಧ - ರಾಷ್ಟ್ರೀಯ ತನಿಖಾ ಸಂಸ್ಥೆ

ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧ ಶಂಕಿತನ ಬಗ್ಗೆ ಮಾಹಿತಿ ಸಂಗ್ರಹಿಸಲು ಬೆಂಗಳೂರಿನ ಎರಡು ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ.

NIA Conducts Searches in Karnataka
NIA Conducts Searches in Karnataka
author img

By

Published : Aug 8, 2021, 2:12 PM IST

ಬೆಂಗಳೂರು/ನವದೆಹಲಿ: ಬಾಂಗ್ಲಾದೇಶದ ಮಾನವ ಕಳ್ಳಸಾಗಣೆದಾರರು ಮತ್ತು ಸಾಗಾಣಿಕೆಗೊಳಗಾದ ಸಂತ್ರಸ್ತರಿಗೆ ನಕಲಿ ಗುರುತು ಚೀಟಿ (ಐಡಿ ಪ್ರೂಫ್) ತಯಾರಿಸಿರುವ ಆರೋಪದ ಮೇರೆಗೆ ಶಂಕಿತನ ಬಗ್ಗೆ ಮಾಹಿತಿ ಸಂಗ್ರಹಿಸಲು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶೋಧ ಕಾರ್ಯ ನಡೆಸಿದೆ.

  • NIA has conducted searches at 2 locations in Bengaluru, Karnataka at the premises of a person suspected to be allegedly involved in making fake ID proof documents for Bangladeshi traffickers and the trafficked victims. Incriminating documents & 6 digital devices; further probe on pic.twitter.com/taAqPrNprN

    — ANI (@ANI) August 8, 2021 " class="align-text-top noRightClick twitterSection" data=" ">

ಶಂಕಿತ ವ್ಯಕ್ತಿಗೆ ಸಂಬಂಧಿಸಿದ ಬೆಂಗಳೂರಿನ ಎರಡು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ನಕಲಿ ದಾಖಲೆಗಳು ಮತ್ತು 6 ಡಿಜಿಟಲ್ ಸಾಧನಗಳು ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.

ಪ್ರಕರಣ ಹಿನ್ನೆಲೆ

ಜೂನ್​ 8ರಂದು ಕರ್ನಾಟಕ ಪೊಲೀಸರು ಬಾಡಿಗೆ ಮನೆಯೊಂದರ ಮೇಲೆ ನಡೆಸಿದ ದಾಳಿ ವೇಳೆ ಕಳ್ಳಸಾಗಣೆದಾರರ ವಶದಲ್ಲಿದ್ದ 7 ಬಾಂಗ್ಲಾದೇಶಿ ಮಹಿಳೆಯರು ಮತ್ತು ಒಂದು ಮಗುವನ್ನು ರಕ್ಷಿಸಲಾಗಿತ್ತು. ಈ ಸಂಬಂಧ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ 13 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.