ETV Bharat / bharat

ಸಮಾಜದಲ್ಲಿ ಶಾಂತಿ ಕದಡುವ ಪೋಸ್ಟ್: ಓರ್ವ ವಶಕ್ಕೆ, ವಿಚಾರಣೆ

ಸಮಾಜದಲ್ಲಿ ಶಾಂತಿ ಕದಡುವ ಪೋಸ್ಟ್ ಹಾಕಿದ್ದಕ್ಕೆ ಎನ್​​ಐಎ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಳಿಕ ಬಿಡುಗಡೆ ಮಾಡಿದೆ.

ಸೋಷಿಯಲ್​ ಮೀಡಿಯಾ
ಸೋಷಿಯಲ್​ ಮೀಡಿಯಾ
author img

By

Published : Jul 25, 2021, 12:52 PM IST

ಚೆನ್ನೈ (ತಮಿಳುನಾಡು): ಉದಯ ಕುಮಾರ್ ಅಲಿಯಾಸ್ ಯೂಸುಫ್ ಅಸ್ಲಾಂ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್​ಗೆ ಸಂಬಂಧಿಸಿದಂತೆ ಎನ್​ಐಎ, ಶನಿವಾರ ಥೇನಿ ಮತ್ತು ತಿರುನೆಲ್ವೇಲಿಯ ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಸಿದೆ.

ಶೋಧ ಕಾರ್ಯಾಚರಣೆ ಬಳಿಕ ಅಸ್ಲಾಂನನ್ನು ಚಿನ್ನಮನೂರು ಠಾಣೆಗೆ ಕರೆದೊಯ್ದ ಅಧಿಕಾರಿಗಳು, ಸತತ 12 ಗಂಟೆಗಳ ವಿಚಾರಣೆ ಬಳಿಕ ಬಿಡುಗಡೆ ಮಾಡಿದರು. ಈ ವೇಳೆ ಚಿನ್ನಮನೂರು ಗ್ರಾಮ ಅಧಿಕಾರಿಯ ಸಮ್ಮುಖದಲ್ಲಿ ಅಸ್ಲಾಂ ಲಿಖಿತ ಹೇಳಿಕೆ ಪಡೆದ ಅಧಿಕಾರಿಗಳು, ಅವನನ್ನು ರಿಲೀಸ್ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಯೂಸುಫ್​ ಅಸ್ಲಾಂ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದಲ್ಲಿ ಶಾಂತಿ ಕದಡುವ ಸಂಬಂಧಿತ ಪೋಸ್ಟ್​ಗಳನ್ನು ಅಪ್ಲೋಡ್ ಮಾಡುತ್ತಿದ್ದ. ಹಾಗಾಗಿ ಅಧಿಕಾರಿಗಳು ಶೋಧ ನಡೆಸಿ ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಅಸ್ಲಾಂಗೆ ಭಯೋತ್ಪಾದನೆ ಸಂಘಟನೆಗಳೊಂದಿಗೆ ಏನಾದರೂ ಸಂಬಂಧವಿದ್ಯಾ ಅನ್ನೋದ್ರ ಬಗ್ಗೆ ತನಿಖಾ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ.

ಸೋಷಿಯಲ್​ ಮೀಡಿಯಾಗಳಲ್ಲಿ ಶಾಂತಿ ಕದಡುವ ಸಂಬಂಧ ಪೋಸ್ಟ್ ಹಾಕಿದ್ದ ಇಬ್ಬರನ್ನು ಇತ್ತೀಚೆಗೆ ಎನ್​ಐಎ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.