ETV Bharat / bharat

ಭಯೋತ್ಪಾದಕ ಕೃತ್ಯಕ್ಕೆ ಸಂಚು ಪ್ರಕರಣ: ಮತ್ತಿಬ್ಬರು ಶಂಕಿತರನ್ನು ಬಂಧಿಸಿದ NIA - ಜಮ್ಮು ಮತ್ತು ಕಾಶ್ಮೀರ

ಹಿಂಸಾತ್ಮಕ ಭಯೋತ್ಪಾದಕ ಕೃತ್ಯಗಳನ್ನು ಕೈಗೊಳ್ಳಲು ಸಂಚು ರೂಪಿಸಿದ ಪ್ರಕರಣ ಸಂಬಂಧ ಇದೀಗ ಮತ್ತಿಬ್ಬರು ಶಂಕಿತ ಆರೋಪಿಗಳನ್ನು ಎನ್‌ಐಎ ಬಂಧಿಸಿದ್ದು, ಈವರೆಗೆ ಒಟ್ಟು 25 ಆರೋಪಿಗಳು ಅರೆಸ್ಟ್ ಆಗಿದ್ದಾರೆ.

NIA
NIA
author img

By

Published : Oct 31, 2021, 4:57 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ಪ್ರಮುಖ ನಗರಗಳಲ್ಲಿ ಹಿಂಸಾತ್ಮಕ ಭಯೋತ್ಪಾದಕ ಕೃತ್ಯಗಳನ್ನು ಕೈಗೊಳ್ಳಲು ಸಂಚು ರೂಪಿಸಿದ ಪ್ರಕರಣ ಸಂಬಂಧ ಇದೀಗ ಮತ್ತಿಬ್ಬರು ಶಂಕಿತ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.

ಬಂಧಿತರನ್ನು ಇಷ್ಫಾಕ್ ಅಹ್ಮದ್ ವಾನಿ ಮತ್ತು ಉಮರ್ ಭಟ್ ಎಂದು ಗುರುತಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ದಾಳಿ ನಡೆಸಿ ಇವರನ್ನು ಬಂಧಿಸಲಾಗಿದೆ.

ಜಮ್ಮು-ಕಾಶ್ಮೀರ ಮತ್ತು ಇತರ ಪ್ರಮುಖ ನಗರಗಳಲ್ಲಿ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಎಂ), ಹಿಜ್ಬ್-ಉಲ್-ಮುಜಾಹಿದೀನ್ (ಎಚ್‌ಎಂ) ಸೇರಿದಂತೆ ಇತರ ಉಗ್ರ ಸಂಘಟನೆಗಳಡಿ ಭಯೋತ್ಪಾದಕ ಕೃತ್ಯಗಳನ್ನು ಕೈಗೊಳ್ಳಲು ಸಂಚು ರೂಪಿಸಲಾಗಿರುವ ಸ್ಫೋಟಕ ಮಾಹಿತಿ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು. ಅಕ್ಟೋಬರ್ 10 ರಂದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಐಎ ತನಿಖೆ ಆರಂಭಿಸಿತ್ತು. ಈ ಪ್ರಕರಣದಲ್ಲಿ ಇದುವರೆಗೆ 25 ಆರೋಪಿಗಳನ್ನು ಎನ್‌ಐಎ ಬಂಧಿಸಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಿಗೂಢ ಸ್ಫೋಟ: ಇಬ್ಬರು ಯೋಧರು ಹುತಾತ್ಮ

ಈ ಎಲ್ಲಾ ಬಂಧಿತ ಆರೋಪಿಗಳು ಭಯೋತ್ಪಾದಕ ಸಂಘಟನೆಗಳ ಸಹಚರರು ಮತ್ತು ವಿವಿಧ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಓವರ್​ ಗ್ರೌಂಡ್​ ವರ್ಕರ್ಸ್​ (Over Ground Workers) ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎನ್ಐಎ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.