ETV Bharat / bharat

ಎನ್​ಸಿಇಆರ್​ಟಿ ಹತ್ತನೇ ಕ್ಲಾಸ್​ ಪಠ್ಯಕ್ರಮಕ್ಕೆ ಕತ್ತರಿ..ಆವರ್ತಕ ಕೋಷ್ಠಕ, ಪ್ರಜಾಪ್ರಭುತ್ವ ವಿಷಯ ಕಡಿತ

10 ನೇ ತರಗತಿಯ ಪಠ್ಯಪುಸ್ತಕದಲ್ಲಿನ ಕಠಿಣ, ಪುನರಾವರ್ತಿತ, ಅಪ್ರಸ್ತುತ ಪಠ್ಯಕ್ರಮಗಳನ್ನು ಕಡಿತ ಮಾಡಲಾಗಿದೆ ಎಂದು ಎನ್​ಸಿಇಆರ್​ಟಿ ಹೇಳಿದೆ.

ಎನ್​ಸಿಇಆರ್​ಟಿ ಹತ್ತನೇ ಕ್ಲಾಸ್​ ಪಠ್ಯಕ್ರಮಕ್ಕೆ ಕತ್ತರಿ

author img

By

Published : Jun 1, 2023, 10:30 PM IST

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು(ಎನ್‌ಸಿಇಆರ್‌ಟಿ) 12 ನೇ ತರಗತಿಯ ಕೆಲ ಪಠ್ಯಕ್ರಮಗಳನ್ನು ತೆಗೆದು ಹಾಕಿತ್ತು. ಇದೀಗ 10 ನೇ ತರಗತಿಯಲ್ಲಿನ ಕೆಲ ಪಠ್ಯಕ್ರಮವನ್ನು ಕಡಿತ ಮಾಡುವ ನಿರ್ಧಾರ ಮಾಡಿದೆ. ಆವರ್ತಕ ಕೋಷ್ಟಕ, ಪ್ರಜಾಪ್ರಭುತ್ವ ಮತ್ತು ಇಂಧನ ಸಂಪನ್ಮೂಲಗಳ ಅಧ್ಯಾಯಗಳನ್ನು ಕೈಬಿಡಲು ಮುಂದಾಗಿದೆ. ವಿದ್ಯಾರ್ಥಿಗಳ ಮೇಲಿನ ಹೊರೆ ತಗ್ಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎನ್‌ಸಿಇಆರ್‌ಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  • Modi’s BJP is a tragic affront to India’s secular beginnings. Hinduism is at least as ridiculous as Islam. Between them, these two idiotic religions have betrayed the ideals of Nehru and Gandhi.https://t.co/1wIHXKeyGS

    — Richard Dawkins (@RichardDawkins) May 31, 2023 " class="align-text-top noRightClick twitterSection" data=" ">

ಇತ್ತೀಚೆಗಷ್ಟೇ 10ನೇ ತರಗತಿಯ ಪಠ್ಯಕ್ರಮದಿಂದ ಜೈವಿಕ ವಿಕಾಸದ ಸಿದ್ಧಾಂತವನ್ನು ಎನ್​ಸಿಇಆರ್​​ಟಿ ತೆಗೆದು ಹಾಕಿತ್ತು. ಈಗ ಇನ್ನಷ್ಟು ವಿಷಯಗಳಿಗೆ ಕತ್ತರಿ ಹಾಕಿದೆ. ಪರಿಸರ ಸುಸ್ಥಿರತೆ, ಇಂಧನ ಸಂಪನ್ಮೂಲಗಳು, ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವಕ್ಕಿರುವ ಸವಾಲುಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಸಂಪೂರ್ಣ ಅಧ್ಯಾಯಗಳನ್ನು ಪಠ್ಯಕ್ರಮದಿಂದ ಕೈ ಬಿಡಲಾಗಿದೆ. ಕೊರೊನಾ ಸಾಂಕ್ರಾಮಿಕದ ಬಳಿಕ ವಿದ್ಯಾರ್ಥಿಗಳ ಮೇಲೆ ವಿಷಯದ ಭಾರ ಹೆಚ್ಚಾಗಿದೆ. ಹೀಗಾಗಿ ಕೆಲವನ್ನು ಕಡಿತ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಹೇಳಿದ್ದಾರೆ.

ಜಿಆರ್‌ಇ ಪರೀಕ್ಷೆಯ ಅವಧಿ ಕಡಿತ: ಸೆಪ್ಟೆಂಬರ್ 2023 ರಲ್ಲಿ ನಡೆಯಲಿರುವ ಗ್ರಾಜುಯೇಟ್ ರೆಕಾರ್ಡ್ ಪರೀಕ್ಷೆಯ (ಜಿಆರ್‌ಇ) ಸಮಯವನ್ನು 1 ಗಂಟೆ 58 ನಿಮಿಷಗಳಿಗೆ ಕಡಿಮೆ ಮಾಡಲಾಗಿದೆ ಎಂದು ಶೈಕ್ಷಣಿಕ ಪರೀಕ್ಷಾ ಸೇವೆ (ಇಟಿಎಸ್) ಗುರುವಾರ ಪ್ರಕಟಿಸಿದೆ. ಪರೀಕ್ಷೆ ಮುಗಿದ 10 ದಿನಗಳಲ್ಲಿ ಅಂಕ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಈ ಹಿಂದೆ ಜಿಆರ್‌ಇ ಪರೀಕ್ಷೆಯ ಸಮಯ 3 ಗಂಟೆ 45 ನಿಮಿಷವಾಗಿತ್ತು. ಅಲ್ಲದೆ, ಪ್ರಬಂಧ, ವರ್ಬಲ್ ರೀಸನಿಂಗ್ ಮತ್ತು ಕ್ವಾಂಟಿಟೇಟಿವ್ ರೀಸನಿಂಗ್ ವಿಭಾಗಗಳಲ್ಲಿನ ಪ್ರಶ್ನೆಗಳ ಸಂಖ್ಯೆಯನ್ನೂ ಇದೇ ವೇಳೆ ಕಡಿಮೆ ಮಾಡಲಾಗಿದೆ.

  • Periodic table cut from India’s textbooks: @ncert @dpradhanbjp @narendramodi

    School children in India will no longer be taught about evolution, the periodic table of elements, sustainability, pollution or energy sources such as fossil fuels and renewables. Chapters on all of…

    — 🧬Dr. Namrata Datta (Singa Pen), PhD🧫🇬🇧🦘🇮🇳 (@DrDatta01) June 1, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಬಿಎಸ್​ವೈ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ: ಗೇಟ್​ವರೆಗೂ ಬಂದು ಸ್ವಾಗತ ಕೋರಿದ ಯಡಿಯೂರಪ್ಪ

ಅಮೆರಿಕದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ GRE ಸ್ಕೋರ್ ಪ್ರಮುಖವಾಗಿದೆ. ಜಿಆರ್​ಇ ಅಂಕ ಹೆಚ್ಚಿದ್ದರೆ ವಿವಿಯಲ್ಲಿ ಸೀಟು ಹಾಗೂ ಸ್ಟೈಫಂಡ್ ಪಡೆಯಲು ಅವಕಾಶವಿದೆ. ಈ ಸ್ಕೋರ್ 5 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಅಮೆರಿಕಕ್ಕೆ ಹೋಗಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಗಾಗಿ ಹಗಲಿರುಳು ಶ್ರಮಿಸುತ್ತಾರೆ. ಇದು ಕ್ವಾಂಟಿಟೇಟಿವ್ ರೀಸನಿಂಗ್, ವೆರ್ಬಲ್ ರೀಸನಿಂಗ್ ಮತ್ತು ವಿಶ್ಲೇಷಣಾತ್ಮಕ ಬರವಣಿಗೆಯನ್ನು ಒಳಗೊಂಡಿದೆ.

ಗಾಂಧೀಜಿ ಸಾವು ವಿಷಯ, ಗುಜರಾತ್​ ಗಲಭೆ, ತುರ್ತು ಪರಿಸ್ಥಿತಿ ಸೇರಿದಂತೆ ಎನ್‌ಸಿಇಆರ್‌ಟಿ 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಿಂದ ಈ ಹಿಂದೆ ಕೈಬಿಡಲಾಗಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು. ಗಾಂಧೀಜಿ ವಿಷಯ ಕೈಬಿಟ್ಟಿದ್ದು ಟೀಕೆಗೂ ಗುರಿಯಾಗಿತ್ತು. ಈ ಎಲ್ಲಾ ವಿಷಯಗಳು ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿಲ್ಲ. ಮಕ್ಕಳಿಗೆ ಅವುಗಳ ಅಗತ್ಯವಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: ರಾಹುಲ್ ವಿರುದ್ಧದ ಮೋದಿ ಉಪನಾಮದ ಕೇಸ್​: ಪರಿಷ್ಕರಣಾ ಅರ್ಜಿಯ ತೀರ್ಪು ಜೂನ್​ 5 ರ ನಂತರ ಪ್ರಕಟ ಸಾಧ್ಯತೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.