ಶ್ಯೋಪುರ(ಮಧ್ಯಪ್ರದೇಶ): ಯಾವ ರೈತ ಹೆದರುತ್ತಾನೋ ಅವನು ನಮ್ಮೊಂದಿಗೆ ಬರುವುದು ಬೇಡ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಜೈದಾ ಕೃಷಿ ಉತ್ಪನ್ನ ಮಾರುಕಟ್ಟೆಯ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್, ಕೇಂದ್ರದಲ್ಲಿ ಯಾವುದೇ ಸರ್ಕಾರ ನಡೆಯುತ್ತಿಲ್ಲ. ಬದಲಿಗೆ ಕಂಪನಿ ನಡೆಯುತ್ತಿದೆ. ದೊಡ್ಡ ಕೈಗಾರಿಕೆಗಳ ಉದ್ಯಮಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಂತಹ ದರೋಡೆಕೋರರ ಗುಂಪಿನಿಂದ ದೂರವಿರಬೇಕು ಎಂದು ಟಿಕಾಯತ್ ಎಚ್ಚರಿಸಿದ್ದಾರೆ. ಅಲ್ಲದೇ, ಅಂತಹ ದರೋಡೆಕೋರರಿಂದ ದೇಶವನ್ನು ಉಳಿಸಿ ಎಂದಿದ್ದಾರೆ. ಈಗ ನಮ್ಮ ಮುಂದೆ ಮೂರು ಕಾನೂನುಗಳು ಮಾತ್ರ ಇವೆ ನಾವೇನಾದರೂ ಮೌನವಾಗಿದ್ದರೆ ಇನ್ನೂ 40 ಕಾನೂನುಗಳು ಬರಲಿವೆ ಎಂದು ರೈತರಿಗೆ ಎಚ್ಚರಿಸಿದ್ರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವ ಬಗ್ಗೆ ಮಾತನಾಡಿದ ರಾಕೇಶ್ ಟಿಕಾಯತ್, ಪೆಟ್ರೋಲ್ , ಡೀಸೆಲ್ ಬೆಲೆ ಹೆಚ್ಚಿಸಿ ಅವರೇ ಬೆಂಕಿ ಹಚ್ಚುತ್ತಾರೆ. ಆದರೆ ಸಾರ್ವಜನಿಕರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳುತ್ತಾರೆ. ಅವರು ಈ ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಅವರು ಆಲ್‌ರೌಂಡರ್‌ಗಳು. ಅವರದ್ದು ದರೋಡೆಕೋರರ ಗ್ಯಾಂಗ್ , ದೇಶವನ್ನು ಅವರಿಂದ ರಕ್ಷಿಸಬೇಕಾಗಿದೆ. ರಾಜಕೀಯ ಪಕ್ಷವೊಂದು ಸರ್ಕಾರ ನಡೆಸಿದ್ದರೆ ಹೀಗಾಗುತ್ತಿತ್ತಾ.. ಇದು ಸ್ಪಷ್ಟವಾಗಿ ದರೋಡೆಕೋರರ ಸರ್ಕಾರ ಎಂದು ಆಕ್ರೋಶ ಹೊರಹಾಕಿದ್ರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನುಗಳ ಪ್ರತಿಭಟನೆ ಕುರಿತಂತೆ ಕೃಷಿ ಉಪಾಜ್ ಮಂಡಿಯಲ್ಲಿ ರೈತರ ಮಹಾ ಪಂಚಾಯತ್ ಆಯೋಜಿಸಲಾಗಿತ್ತು. ಈ ಮಹಾ ಪಂಚಾಯತ್‌ನಲ್ಲಿ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಸೇರಿ ಅನೇಕ ರೈತ ಮುಖಂಡರು ಭಾಗವಹಿಸಿದ್ದರು. ಶಿವಪುರಿ, ಮೊರೆನಾ, ಅಶೋಕ್ ನಗರ, ಬಾರನ್, ಕೋಟಾ, ರಾಜಸ್ಥಾನದ ಸವಾಯಿ ಮಾಧೋಪುರ ಸೇರಿದಂತೆ ಇತರ ರಾಜ್ಯಗಳ ರೈತರು ಈ ಮಹಾ ಪಂಚಾಯತ್ ನಲ್ಲಿ ಪಾಲ್ಗೊಂಡಿದ್ದರು. ಮಹಾ ಪಂಚಾಯತ್ ಹಿನ್ನೆಲೆ ಸುಮಾರು 600 ಸೈನಿಕರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.