ETV Bharat / bharat

92 ದಿನದಲ್ಲಿ 8000 ಮೀಟರ್​ ಎತ್ತರದ 14 ಹಿಮಪರ್ವತ ಹತ್ತಿಳಿದ ನಾರ್ವೆ, ನೇಪಾಳಿ ಶೆರ್ಪಾಗಳು: ಹೊಸ ದಾಖಲೆ - Nepali and Norwegian climbers

ಪರ್ವತಾರೋಹಣ ಎಂಬುದು ಸಾಹಸ ಕ್ರೀಡೆ. ಇದು ಕೆಲವರಿಗೆ ಖಯಾಲಿಯಾಗಿದೆ. ನಾರ್ವೆ ಮತ್ತು ನೇಪಾಳಿ ಶೆರ್ಪಾಳಿಗಳಿಬ್ಬರು ಕೇವಲ 92 ದಿನಗಳಲ್ಲಿ 8 ಮೀಟರ್​ ಎತ್ತರದ 14 ಹಿಮ ಶಿಖರಗಳನ್ನು ಹತ್ತಿಳಿದು ಹೊಸ ದಾಖಲೆ ನಿರ್ಮಿಸಿದ್ದಾರೆ.

ಹಿಮಪರ್ವತ
ಹಿಮಪರ್ವತ
author img

By

Published : Jul 27, 2023, 10:53 PM IST

ಕಠ್ಮಂಡು (ನೇಪಾಳ) : ಶೆರ್ಪಾಗಳಾದ ನಾರ್ವೆಯ ಕ್ರಿಸ್ಟಿನ್ ಹರಿಲಾ ಮತ್ತು ನೇಪಾಳದ ಟೆನ್ಜೆನ್ (ಲಾಮಾ) ಅವರು 92 ದಿನಗಳಲ್ಲಿ 8000 ಮೀಟರ್‌ಗಳ ಎತ್ತರದ 14 ಶಿಖರಗಳನ್ನು ಹತ್ತುವ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಇದನ್ನು ಸಾಧಿಸಿದ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.

ಗುರುವಾರ ಟೆನ್ಜೆನ್ ಮತ್ತು ಹರಿಲಾ ಎವರೆಸ್ಟ್ ಶಿಖರದ ನಂತರದ ಎರಡನೇ ಅತ್ಯುನ್ನತ ಶಿಖರವಾದ K2 ಹಿಮರಾಶಿಯನ್ನು ಸೇರಿ 92 ದಿನಗಳಲ್ಲಿ 14 ಇತರ ಶಿಖರಗಳನ್ನು ಆರೋಹಣ ಮಾಡುವ ಮೂಲಕ ಈ ಸಾಧನೆಗೆ ಪಾತ್ರರಾದರು. ಈ ಮೂಲಕ ನಿರ್ಮಲ್ ಪುರ್ಜಾ ಅವರು ನಿರ್ಮಿಸಿದ ಹಿಂದಿನ ದಾಖಲೆಯನ್ನು ಮುರಿದರು. ಅವರು ಇಷ್ಟೇ ದಿನಗಳಲ್ಲಿ 8 ಶಿಖರವನ್ನು ಏರುವ ಮೂಲಕ ದಾಖಲೆ ಬರೆದಿದ್ದರು.

ಇಂದು ಬೆಳಗ್ಗೆ (ಜುಲೈ 27, 2023) K2 ಶಿಖರದದ ಜೊತೆಗೆ 8000 ಮೀಟರ್‌ಗಿಂತ ಎತ್ತರದಲ್ಲಿರುವ 14 ಶಿಖರಗಳನ್ನು ಅತಿ ವೇಗವಾಗಿ ಪೂರ್ಣಗೊಳಿಸಿದ ದಾಖಲೆಯನ್ನು ಬರೆದರು. 3 ತಿಂಗಳೊಳಗೆ ಈ ಟಾಸ್ಕ್​ ಅನ್ನು ಮುಗಿಸಿದ್ದಾರೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಎಕ್ಸ್‌ಪೆಡಿಶನ್ ಡೈರೆಕ್ಟರ್ ಚಾಂಗ್ ದೇವಾ ಶೆರ್ಪಾ ಅವರು ತಿಳಿಸಿದರು.

ಶೆರ್ಪಾಗಳಾದ ಕ್ರಿಸ್ಟಿನ್ ಮತ್ತು ಲಾಮಾ ಅವರು ಜುಲೈ 18 ರಂದು G1 ಮತ್ತು ಜುಲೈ 23 ರಂದು ಬ್ರಾಡ್ ಪೀಕ್ ಶಿಖರವನ್ನು ಹತ್ತಿದರು. ಜುಲೈ 15 ರಂದು ವಿಶ್ವದ 13 ನೇ ಅತಿ ಎತ್ತರದ ಪರ್ವತವಾದ G2 ಅನ್ನು ಏರಿದರು. ಜೂನ್ 26 ರಂದು ಈ ಜೋಡಿಯು ನಂಗಾ ಪರ್ವತ್ ಅನ್ನು ಸಹ ಆರೋಹಣ ಮಾಡಿದ್ದಾರೆ.

ಇದಕ್ಕೂ ಮೊದಲು ಜೂನ್ 10 ರಂದು ಮನಸ್ಲು ಪರ್ವತ, ಜೂನ್ 5 ರಂದು ಅನ್ನಪೂರ್ಣ ಪರ್ವತ, ಮೇ 29 ರಂದು ಧೌಲಗಿರಿ, ಮೇ 18ರಂದು ಕಾಂಚನಜುಂಗಾ ಸೇರಿದಂತೆ 14 ಎತ್ತರದ ಪರ್ವತಗಳನ್ನು ಏರುವ ಬಹು ದಾಖಲೆ ಸೃಷ್ಟಿಸಿದ್ದಾರೆ. ಇಬ್ಬರೂ ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಲ್ಹೋಟ್ಸೆಯನ್ನು ಸಹ ಆರೋಹಣ ಮಾಡಿದ್ದಾರೆ.

ನೇಪಾಳದ ಶೆರ್ಪಾ ಲಾಮಾ ಅವರು ಕ್ರಿಸ್ಟಿನ್ ಹರಿಲಾ ಅವರ ಜೊತೆಗೂಡಿ ಏಪ್ರಿಲ್ 26 ರಂದು ಶಿಶಾಪಾಂಗ್ಮಾ ಪರ್ವತವನ್ನು ಏರುವ ಮೂಲಕ ತಮ್ಮ ಮಹತ್ವಾಕಾಂಕ್ಷೆಯ 14 ಶಿಖರಗಳ ಯೋಜನೆಯನ್ನು ಪ್ರಾರಂಭಿಸಿದರು. ನಂತರ ಅವರು ಮೇ 3 ರಂದು ಟಿಬೆಟ್‌ನ ಚೋ ಓಯು ಪರ್ವತ, ಮೇ 15 ರಂದು ಮಕಾಲು ಪರ್ವತವನ್ನು ಹತ್ತಿಳಿದಿದ್ದರು.

ಹಿಂದಿನ ದಾಖಲೆ ಭಗ್ನ: ಈ ಹಿಂದೆ ನಿರ್ಮಲ್ ಪುರ್ಜಾ ಎಂಬ ಪರ್ವತಾರೋಹಿ 2 ವರ್ಷ ಮತ್ತು 5 ತಿಂಗಳು, 15 ದಿನಗಳಲ್ಲಿ ಮೌಂಟ್ ಮನಸ್ಲು ಮತ್ತು ಮೌಂಟ್ ಧೌಲಗಿರಿ ಶಿಖರಗಳು ಸೇರಿದಂತೆ 14 ಹಿಮ ಪರ್ವತಗಳನ್ನು ಏರಿ ದಾಖಲೆ ನಿರ್ಮಿಸಿದ್ದರು. ಇದೀಗ ನೇಪಾಳ ಮತ್ತು ನಾರ್ವೆಯ ಶೆರ್ಪಾಗಳು ಈ ಶಿಖರ ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ: ಭಾರತದ ಅತಿ ಎತ್ತರದ ಶಿಖರವೇರಿದ ನೇಪಾಳಿ ತಂಡ: ಕಠ್ಮಂಡುವಿನಲ್ಲಿ ಸ್ವಾಗತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.