ನವದೆಹಲಿ: ಭಾರತದಲ್ಲಿ ಈವರೆಗೆ ಸುಮಾರು 18 ಕೋಟಿ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ. ಯುಎಸ್ನಲ್ಲಿ, ಈವರೆಗೆ 26 ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಆದ್ದರಿಂದ, ಭಾರತ ವ್ಯಾಕ್ಸಿನೇಷನ್ನಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ತಿಳಿಸಿದ್ದಾರೆ.
ರಾಜ್ಯಗಳು ಹೊರಗಿನಿಂದ ಲಸಿಕೆಗಳನ್ನು ಖರೀದಿಸಬೇಕಾದರೆ, ಕೇಂದ್ರವು ಅನುಮತಿ ನೀಡಬೇಕು. ಲಸಿಕೆ ಉತ್ಪಾದಿಸುವ 2 ಕಂಪನಿಗಳು (ಕೋವ್ಯಾಕ್ಸಿನ್, ಕೋವಿಶೀಲ್ಡ್) ಇತರ ಕಂಪನಿಗಳೊಂದಿಗೆ ಫಾರ್ಮುಲಾ ಹಂಚಿಕೊಳ್ಳಬೇಕು. ಲಸಿಕೆಗಳನ್ನು 150 ರೂ.ಗಿಂತ ಹೆಚ್ಚು ಮಾರಾಟ ಮಾಡಲು ಅವರಿಗೆ ಅನುಮತಿ ಕೊಡಬಾರದು ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ರಲ್ಲಿ ವಿ.ಕೆ.ಪಾಲ್ ಮನವಿ ಮಾಡಿದರು.
ಇದನ್ನೂ ಓದಿ:ಭಾರತದಲ್ಲಿ ಹೆಚ್ಚುತ್ತಿವೆ ಕಪ್ಪು ಶಿಲೀಂಧ್ರ ಸೋಂಕಿನ ಪ್ರಕರಣಗಳು.. ಲಕ್ಷಣಗಳೇನು... ಚಿಕಿತ್ಸೆ ಹೀಗಿದೆ!
ದೇಶದಲ್ಲಿ ಈವರೆಗೆ 17.72 ಕೋಟಿ ಕೋವಿಡ್ ವ್ಯಾಕ್ಸಿನ್ ಡೋಸ್ಗಳನ್ನು ನೀಡಲಾಗಿದೆ. ಕಳೆದ ಎರಡು ವಾರಗಳಿಂದ 187 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ. ಇದು ಆರೋಗ್ಯಕರ ಬೆಳವಣಿಗೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದ್ದಾರೆ.