ETV Bharat / bharat

ನಟ ಅರ್ಜುನ್​ ರಾಂಪಾಲ್​ ಭಾರತದಿಂದ ದ.ಆಫ್ರಿಕಾಕ್ಕೆ ಪಲಾಯನ ಮಾಡಲು ಪ್ಲಾನ್​​​​: ಚಾರ್ಜಶೀಟ್​ನಲ್ಲಿ ಎನ್​ಸಿಬಿ ಉಲ್ಲೇಖ - ದಕ್ಷಿಣ ಆಫ್ರಿಕಾ ರಾಯಭಾರ ಕಚೇರಿಗೆ ಎನ್​ಸಿಬಿ ಪತ್ರ

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್​ ಕಳ್ಳಸಾಗಣೆಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿರುವ ಪ್ರಕರಣದ ಶಂಕಿತ ಆರೋಪಿ ನಟ ಅರ್ಜುನ್ ರಾಂಪಾಲ್ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಓಡಿ ಹೋಗುವ ಪ್ಲಾನ್​ ಮಾಡಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿ, ಈ ಸಂಬಂಧ ಎನ್​ಸಿಬಿ ದಕ್ಷಿಣ ಆಫ್ರಿಕಾದ ರಾಯಭಾರ ಕಚೇರಿಗೆ ಪತ್ರ ಬರೆದಿದೆ.

bollywood drug case
ನಟ ಅರ್ಜುನ್​ ರಾಂಪಾಲ್
author img

By

Published : Apr 2, 2021, 12:30 PM IST

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಎನ್‌ಸಿಬಿ ವಿಚಾರಣೆ ನಡೆಸಿದರೂ ಬಾಲಿವುಡ್ ನಟ ಅರ್ಜುನ್ ರಾಂಪಾಲ್​ಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ಎನ್‌ಸಿಬಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಇನ್ನು ಅರ್ಜುನ್ ರಾಂಪಾಲ್ ದಕ್ಷಿಣ ಆಫ್ರಿಕಾಕ್ಕೆ ಪಲಾಯನ ಮಾಡಲು ತಯಾರಿ ನಡೆಸಿದ್ದರಿಂದ ಎನ್‌ಸಿಬಿ ದಕ್ಷಿಣ ಆಫ್ರಿಕಾ ಗಣರಾಜ್ಯದ ರಾಯಭಾರ ಕಚೇರಿಗೆ ಪತ್ರ ಬರೆದಿದೆ.

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಎನ್‌ಸಿಬಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ 33 ಆರೋಪಿಗಳ ಹೆಸರನ್ನು ದಾಖಲಿಸಲಾಗಿದೆ. ಸುಮಾರು 50,000 ಪುಟಗಳ ದೋಷಾರೋಪಣೆಯು ಅರ್ಜುನ್ ರಾಂಪಾಲ್ ಅವರ ಗೆಳತಿಯ ಸಹೋದರನ ಹೆಸರನ್ನು ಸಹ ಹೊಂದಿದೆ. ಹಾಗೂ ಚಾರ್ಜ್‌ಶೀಟ್‌ನಲ್ಲಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್ ಚಕ್ರವರ್ತಿ, ಸುಶಾಂತ್ ಅವರ ಮನೆ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಸೇರಿದಂತೆ ಎನ್​​ಸಿಬಿ ಮತ್ತಿತರ ಹೆಸರನ್ನು ಉಲ್ಲೇಖಿಸಿದೆ. ಚಾರ್ಜ್‌ಶೀಟ್‌ನ ಪ್ರಕಾರ, ಮುಂಬೈ ಎನ್‌ಸಿಬಿ 2020 ರ ಡಿಸೆಂಬರ್ 3 ರಂದು ದಕ್ಷಿಣ ಆಫ್ರಿಕಾ ಗಣರಾಜ್ಯದ ಕೌನ್ಸೆಲ್ ಜನರಲ್‌ಗೆ ಪತ್ರವೊಂದನ್ನು ಬರೆದಿದ್ದು, "ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರನ್ನು ಎನ್‌ಸಿಬಿ ಬಂಧಿಸಿದ ಪ್ರಕರಣದಲ್ಲಿ ಅರ್ಜುನ್ ರಾಂಪಾಲ್ ಕೂಡ ಶಂಕಿತ ಆರೋಪಿ. ಅವರು ಭಾರತದಿಂದ ಓಡಿಹೋಗಿ ದಕ್ಷಿಣ ಆಫ್ರಿಕಾಕ್ಕೆ ಪಲಾಯನ ಮಾಡಬಹುದೆಂದು ಉಲ್ಲೇಖಿಸಿದೆ.

ಪ್ರಕರಣ ಸಂಬಂಧ ನಟ ಅರ್ಜುನ್ ರಾಂಪಾಲ್ ಅವರನ್ನು ಎನ್‌ಸಿಬಿ ಈಗಾಗಲೇ ಎರಡು ಬಾರಿ ವಿಚಾರಣೆ ನಡೆಸಿದೆ. 2020 ರ ನವೆಂಬರ್ 13 ರಂದು ನಡೆದ ವಿಚಾರಣೆ ವೇಳೆ ಅರ್ಜುನ್ ರಾಂಪಾಲ್ ಎನ್‌ಸಿಬಿಗೆ ತಮ್ಮ ಶೈಕ್ಷಣಿಕ ಅರ್ಹತೆಗಳು, ವೈಯಕ್ತಿಕ ಮಾಹಿತಿ, ಮಾಡೆಲಿಂಗ್ ಮತ್ತು ಸಿನಿಮಾ ಸಂಬಂಧ ಕಾರ್ಯಗಳು ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದರು. ಎನ್‌ಸಿಬಿ ಅರ್ಜುನ್ ರಾಂಪಾಲ್ ಅವರ ಮನೆಯಲ್ಲಿ ultracet ಮತ್ತು clonazepam dispiblele tablet ಎಂಬ ಎರಡು ಔಷಧಗಳನ್ನು ವಶಪಡಿಸಿಕೊಂಡಿತ್ತು. ಇದರಲ್ಲಿ ಒಂದು ಅರ್ಜುನ್ ರಾಂಪಾಲ್ ಅವರ ಸಾಕು ನಾಯಿಗೆ ಮತ್ತು ಇನ್ನೊಂದು ತನ್ನ ತಂಗಿಗೆ ಎಂದು ಅವರು ಎನ್‌ಸಿಬಿಗೆ ತಿಳಿಸಿದ್ದರು.

ಬಾಲಿವುಡ್‌ಗೆ ಡ್ರಗ್ಸ್ ಪೂರೈಸಲು ಅರ್ಜುನ್ ರಾಂಪಾಲ್ ಅವರ ಸಹೋದರ ಗೇಬ್ರಿಯಲ್ ಸಹೋದರ ಅರ್ಜುನ್ ರಾಂಪಾಲ್ ಹೆಸರನ್ನು ಬಳಸುತ್ತಿದ್ದಾನೆ ಎಂದು ಎನ್‌ಸಿಬಿ ಅನುಮಾನಿಸಿತ್ತು. ಆದ್ದರಿಂದ ಎನ್‌ಸಿಬಿ ತನ್ನ ಗೆಳತಿಯ ಸಹೋದರನ ಬಗ್ಗೆ ಅರ್ಜುನ್ ರಾಂಪಾಲ್ ಅವರನ್ನು ಕೇಳಿದಾಗ, ಅರ್ಜುನ್ ರಾಂಪಾಲ್ ಅವರು ಈ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲ ಮತ್ತು ವಾಟ್ಸ್​​ಆ್ಯಪ್​ ಚಾಟ್​​ನಲ್ಲಿ ಉಲ್ಲೇಖಿಸಿರುವ ಅರ್ಜುನ್ ರಾಂಪಾಲ್ ಎಂಬ ವ್ಯಕ್ತಿ ನಾನಲ್ಲ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.