ಏಪ್ರಿಲ್ 4ರಂದು ಛತ್ತೀಸ್ಗಢದ ಸುಕ್ಮಾ - ಬಿಜಾಪುರದಲ್ಲಿ ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.
ಇಂದು ಭಾರತ್ ಬಂದ್‌ಗೆ ನಕ್ಸಲರ ಕರೆ: ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ - ಛತ್ತೀಸ್ಗಢ ಸುದ್ದಿ
ಇಂದು ಭಾರತ್ ಬಂದ್‌ಗೆ ಕರೆ ನೀಡಿರುವ ನಕ್ಸಲರು ಛತ್ತೀಸ್ಗಢದ ಸುಕ್ಮಾದಲ್ಲಿ ನಿನ್ನೆ ರಾತ್ರಿ ಏಳು ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.ಇಂದು ಭಾರತ್ ಬಂದ್‌ಗೆ ಕರೆ ನೀಡಿರುವ ನಕ್ಸಲರು ಛತ್ತೀಸ್ಗಢದ ಸುಕ್ಮಾದಲ್ಲಿ ನಿನ್ನೆ ರಾತ್ರಿ ಏಳು ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.
ಸುಕ್ಮಾ (ಛತ್ತೀಸ್ಗಢ): ನಕ್ಸಲ್ ಪೀಡಿತ ಪ್ರದೇಶವಾದ ಛತ್ತೀಸ್ಗಢದ ಸುಕ್ಮಾದಲ್ಲಿ ಮಾವೋವಾದಿಗಳ ಗುಂಪೊಂದು ನಿನ್ನೆ ರಾತ್ರಿ ಏಳು ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದೆ. ಭಾರತ್ ಬಂದ್‌ಗೆ ಒಂದು ದಿನದ ಮುಂಚಿತವಾಗಿ ಕೃತ್ಯ ನಡೆದಿದೆ ಎಂದು ಸುಕ್ಮಾ ಎಸ್ಪಿ ಎಲ್.ಧ್ರುವ ತಿಳಿಸಿದರು.
ಘಟನೆಯಲ್ಲಿ ಯಾವುದೇ ವಾಹನ ಚಾಲಕರಿಗೆ ತೊಂದರೆಯಾಗಿಲ್ಲ. ಮಾಹಿತಿ ತಿಳಿದ ಕೂಡಲೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು ಭಾರತ್ ಬಂದ್ ಅನ್ನು ಯಶಸ್ವಿಯಾಗಿಸುವಂತೆ ಜನರಿಗೆ ಸೂಚಿಸಿ ಕರಪತ್ರಗಳನ್ನು ಎಸೆದು ಹೋಗಿದ್ದಾರೆ.
ಇದನ್ನೂ ಓದಿ: ಛತ್ತೀಸ್ಗಢಲ್ಲಿ ರೈಲು ಅಡ್ಡಗಟ್ಟಿದ ನಕ್ಸಲರು: ಏ. 26ರಂದು ಭಾರತ್ ಬಂದ್ ಮಾಡುವಂತೆ ಪ್ರಯಾಣಿಕರಿಗೆ ಕರೆ
ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಮೂಲಕ ಹಾಗೂ ಕೆಲ ಯೋಜನೆಗಳಲ್ಲಿ ಬಳಸುವ ವಾಹನಗಳು ಮತ್ತು ಯಂತ್ರಗಳಿಗೆ ಹಾನಿ ಮಾಡಿ, ಸುಕ್ಮಾ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡ ರಾಜ್ಯದ ಬಸ್ತಾರ್ ವಿಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅಡ್ಡಿಪಡಿಸಲು ನಕ್ಸಲರು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಮಾರಣಹೋಮ ನಡೆಸಿದ್ದ ನಕ್ಸಲರು
ಆ ಬಳಿಕ ಛತ್ತೀಸ್ಗಢ ಹಾಗೂ ಬಿಹಾರದಲ್ಲಿ ತಮ್ಮವರನ್ನು ಭದ್ರತಾ ಪಡೆ ಹತ್ಯೆಗೈದ ಕಾರಣ ಮಾವೋವಾದಿಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿವೆ. ಮೊನ್ನೆಯಷ್ಟೇ ಛತ್ತೀಸ್ಗಢದ ದಂತೇವಾಡದಲ್ಲಿ ರೈಲು ಅಡ್ಡಗಟ್ಟಿ ಏಪ್ರಿಲ್ 26ರಂದು ಭಾರತ್ ಬಂದ್‌ಗೆ ಸಹಾಯ ಮಾಡುವಂತೆ ಪ್ರಯಾಣಿಕರಿಗೆ ಹೇಳಿ, ರೈಲಿನೊಳಗೆ ಪೋಸ್ಟರ್‌ಗಳನ್ನು ಅಂಟಿಸಿದ್ದರು.