ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಪಟಿಯಾಲ ಜೈಲಿನಿಂದ ಬಿಡುಗಡೆಯಾದ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾದರು. ಈ ಭೇಟಿಯ ಫೋಟೋಗಳನ್ನು ಸಿಧು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
-
Met my Mentor Rahul ji and Friend, Philosopher, Guide Priyanka ji in New Delhi Today.
— Navjot Singh Sidhu (@sherryontopp) April 6, 2023 " class="align-text-top noRightClick twitterSection" data="
You can Jail me , Intimidate me, Block all my financial accounts but My commitment for Punjab and My Leaders will neither flinch nor back an inch !! pic.twitter.com/9EiRwE5AnP
">Met my Mentor Rahul ji and Friend, Philosopher, Guide Priyanka ji in New Delhi Today.
— Navjot Singh Sidhu (@sherryontopp) April 6, 2023
You can Jail me , Intimidate me, Block all my financial accounts but My commitment for Punjab and My Leaders will neither flinch nor back an inch !! pic.twitter.com/9EiRwE5AnPMet my Mentor Rahul ji and Friend, Philosopher, Guide Priyanka ji in New Delhi Today.
— Navjot Singh Sidhu (@sherryontopp) April 6, 2023
You can Jail me , Intimidate me, Block all my financial accounts but My commitment for Punjab and My Leaders will neither flinch nor back an inch !! pic.twitter.com/9EiRwE5AnP
ಸಭೆಯ ಕುರಿತು ಟ್ವೀಟ್: ನವಜೋತ್ ಸಿಧು ಟ್ವೀಟ್ ಮಾಡಿ, ಇಂದು ನಾನು ನವದೆಹಲಿಯಲ್ಲಿ ನನ್ನ ಆಪ್ತ ರಾಹುಲ್ ಜಿ ಮತ್ತು ಸ್ನೇಹಿತೆ, ತತ್ವಜ್ಞಾನಿ, ಮಾರ್ಗದರ್ಶಕ ಪ್ರಿಯಾಂಕಾ ಜಿ ಅವರನ್ನು ಭೇಟಿ ಮಾಡಿದ್ದೇನೆ. ನೀವು ನನ್ನನ್ನು ಜೈಲಿಗೆ ಕಳುಹಿಸಬಹುದು, ನೀವು ನನಗೆ ಬೆದರಿಕೆ ಹಾಕಬಹುದು, ನೀವು ನನ್ನ ಎಲ್ಲಾ ಹಣಕಾಸು ಖಾತೆಗಳನ್ನು ನಿರ್ಬಂಧಿಸಬಹುದು.. ಆದರೆ, ನನ್ನ ನಾಯಕರ ಬಗ್ಗೆ ನನ್ನ ಬದ್ಧತೆ ಒಂದಿಂಚು ಕೂಡ ಕದಲುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಬದಲಾಯಿತು ಸಿಧು ಟ್ವಿಟ್ಟರ್ ಬ್ಯಾನರ್ ಚಿತ್ರ : ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾದ ನಂತರ ನವಜೋತ್ ಸಿಧು ತಮ್ಮ ಟ್ವಿಟರ್ ಹ್ಯಾಂಡಲ್‌ನ ಬ್ಯಾನರ್ ಚಿತ್ರವನ್ನು ಬದಲಾಯಿಸಿದ್ದಾರೆ. ಇದೀಗ ಸಿದ್ದು ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭೇಟಿ ವೇಳೆ ತೆಗೆದ ಫೋಟೋವನ್ನು ಟ್ವಿಟರ್ ಬ್ಯಾನರ್ ಚಿತ್ರವಾಗಿ ಹಾಕಿದ್ದಾರೆ.
ಬಿಡುಗಡೆಯ ನಂತರ ಮೊದಲ ಸಭೆ: ಜೈಲಿನಿಂದ ಬಿಡುಗಡೆಯಾದ ನಂತರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರೊಂದಿಗೆ ನವಜೋತ್ ಸಿಂಗ್ ಸಿಧು ಅವರ ಮೊದಲ ಭೇಟಿಯಾಗಿದೆ. ಆದರೆ, ಸಿಧು ಜೈಲಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿ ಕೂಡ ಟ್ವೀಟ್ ಮಾಡಿದ್ದು, ಪಕ್ಷ ನಿಮಗಾಗಿ ಕಾಯುತ್ತಿದೆ, ನವಜೋತ್ ಸಿಧು ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗುವುದು. ಇದೀಗ ಸಿದ್ದುಗೆ ಹೈಕಮಾಂಡ್ ಯಾವ ಜವಾಬ್ದಾರಿ ನೀಡಲಿದೆ ಎಂಬುದು ಸಸ್ಪೆನ್ಸ್ ಆಗಿದೆ. ಪ್ರಸ್ತುತ ಇದು ಇನ್ನೂ ಚರ್ಚೆಯ ವಿಷಯವಾಗಿದೆ.
ಭದ್ರತೆ ಕಡಿತ: ಇತ್ತಿಚೇಗೆ ಮಾಜಿ ಕ್ರಿಕೆಟಿಗ, ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆಯಾಗಿದ್ದರು. 34 ವರ್ಷದ ಹಿಂದಿನ ರೋಡ್ ರೇಜ್ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಿಧು ಕಳೆದ ಮೇ ತಿಂಗಳಿಂದ ಜೈಲಿನಲ್ಲಿದ್ದರು. ಇತ್ತಿಚೇಗೆ ಪಟಿಯಾಲ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದರು. ಸಿಧು ಜೈಲಿನಿಂದ ಹೊರ ಬರುತ್ತಿದ್ದಂತೆ ತಮ್ಮ ಬೆಂಬಲಿಗರತ್ತ ಕೈ ಜೋಡಿಸಿ ನಮಸ್ಕಾರ ಮಾಡಿದ್ದರು. ಮತ್ತೊಂದೆಡೆ, ಇದಕ್ಕೂ ಮುನ್ನವೇ ರಾಜ್ಯ ಸರ್ಕಾರ ನವಜೋತ್ ಸಿಂಗ್ ಸಿಧು ಭದ್ರತೆಯನ್ನು ಝೆಡ್ ಪ್ಲಸ್ನಿಂದ ವೈ ಶ್ರೇಣಿಗೆ ಕಡಿತಗೊಳಿಸಿ ಶಾಕ್ ನೀಡಿತ್ತು. ಹೀಗಾಗಿ ಸಿಧು ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿ ಒಬ್ಬ ಸಿಧುವನ್ನು ಕೊಂದಿದ್ದಾರೆ, ಈಗ ಇನ್ನೊಬ್ಬ ಸಿಧು ಸಾಯಬೇಕಾ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಓದಿ: 10 ತಿಂಗಳ ನಂತರ ಜೈಲಿನಿಂದ ಹೊರ ಬಂದ ನವಜೋತ್ ಸಿಂಗ್ ಸಿಧು: ಭದ್ರತೆ ಕಡಿತ