ಪಂಜಾಬ್: ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ನವಜೋತ್ ಸಿಧು ಅವರ ಪತ್ನಿಯು ತೀವ್ರ ನೋವು ಅನುಭವಿಸುತ್ತಿರುವುದು ಬಯಲಾಗಿದೆ. ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವ ನವಜೋತ್ ಕೌರ್ ಸಿಧು ಟ್ವೀಟ್‌ನಲ್ಲಿ ತಮಗೆ ಕಾಡುತ್ತಿರುವ ಕ್ಯಾನ್ಸರ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವರು, ಪತಿ ನವಜೋತ್ ಸಿಧು ನೆನಪಿಸಿಕೊಂಡು ಭಾವನಾತ್ಮಕ ಪೋಸ್ಟ್ಯೊಂದನ್ನು ಬರೆದು ಹಾಕಿದ್ದಾರೆ.
ಟ್ವೀಟ್‌ನಲ್ಲಿ ಬರೆದಿದ್ದೇನು?: ''ತನ್ನ ಪತಿ ನವಜೋತ್ ಸಿಧು ಪದೇ ಪದೇ ನ್ಯಾಯದಿಂದ ವಂಚಿತರಾಗಿದ್ದಾರೆ'' ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ. ಸತ್ಯವು ಎಷ್ಟು ಶಕ್ತಿಯುತವಾಗಿದೆ ಎಂದರೆ, ಅದನ್ನು ಬೆಂಕಿಯಿಂದ ಪದೇ ಪದೇ ಪರೀಕ್ಷಿಸಲಾಗುತ್ತಿದೆ. ಪ್ರಸ್ತುತ ಕಲಿಯುಗ ಇದೆ. ಕ್ಷಮಿಸಿ ನಿಮಗಾಗಿ ನಾನು ಕಾಯಲು ಸಾಧ್ಯವಿಲ್ಲ. ಕ್ಯಾನ್ಸರ್ ಎರಡನೇ ಹಂತವು ಅತ್ಯಂತ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪಟಿಯಾಲ ಸೆಂಟ್ರಲ್ ಜೈಲಿನಲ್ಲಿರುವ ಸಿಧು: ನವಜೋತ್ ಸಿಧು ಅವರನ್ನು ಬಂಧಿಸಿ ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿದೆ. ಮೇ 2022ರಿಂದ ನವಜೋತ್ ಸಿಂಗ್ ಸಿಧು ಅವರು ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ ಇದ್ದಾರೆ. ರೋಡ್ ರೇಜ್ ಪ್ರಕರಣದಲ್ಲಿ ಅವರಿಗೆ 1 ವರ್ಷ ಶಿಕ್ಷೆಯಾಗಿದೆ. ಜನವರಿ 26 ರಂದು ಅವರು ಬಿಡುಗಡೆಯಾಗಲಿದ್ದಾರೆ. ಆದರೆ, ಅವರ ಬಿಡುಗಡೆ ಮಾಡಲಾಗಲಿಲ್ಲ ಎಂದು ನವಜೋತ್ ಕೌರ್ ಸಿಧು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣದಲ್ಲಿ ಈ ಹಿಂದೆ, ಸುಪ್ರೀಂ ಕೋರ್ಟ್ ಸಿಧು ಅವರನ್ನು ಆರೋಪದಿಂದ ಖುಲಾಸೆಗೊಳಿಸಿತ್ತು. ನಂತರ, ಈ ಪ್ರಕರಣದ ಮರುಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1,000 ರೂ. ದಂಡ ವಿಧಿಸಿದೆ.
ಇದನ್ನೂ ಓದಿ: 2050ರ ಹೊತ್ತಿಗೆ ಭಾರತದಲ್ಲಿ ಕುಡಿಯುವ ನೀರಿನ ಕೊರತೆ ತೀವ್ರ- ವಿಶ್ವಸಂಸ್ಥೆ ವರದಿ
ಸಿಧು ಪತ್ನಿಗೆ ಈಗಾಗಲೇ ಆಗಿದೆ ಆಪರೇಷನ್: ನವಜೋತ್ ಕೌರ್ ಸಿಧು ಅವರು ಎರಡನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಡೇರಾ ಬಾಸಿಯ ಇಂಡಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನವಜೋತ್ ಕೌರ್ ಸಿಧುಗೆ ಈಗಾಗಲೇ ಆಪರೇಷನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕೌರ್ ಅವರು ಪತಿ ನವಜೋತ್ ಸಿಧುವನ್ನು ನೆನಪಿಸಿಕೊಂಡು ಭಾವುಕರಾಗಿ ಟ್ವೀಟ್ ಮಾಡಿದ್ದು ಕಂಡುಬಂದಿದೆ.
ಸಿಧು ಏ.1ಕ್ಕೆ ಜೈಲಿನಿಂದ ಹೊರಗೆ ಬರಬಹುದು: ನವಜೋತ್ ಸಿಧು ಏಪ್ರಿಲ್ವರೆಗೆ ಜೈಲಿನಲ್ಲೇ ಇರಬೇಕಾಗಬಹುದು. ಕಳೆದ ವರ್ಷ ಮೇ 19ರಿಂದ ನವಜೋತ್ ಸಿಧು ಜೈಲಿನಲ್ಲಿದ್ದಾರೆ. ಕಾನೂನು ಪ್ರಕ್ರಿಯೆ ಪ್ರಕಾರ ಅವರು, ಏಪ್ರಿಲ್ 1ರವರೆಗೆ ಜೈಲಿನಲ್ಲಿ ಇರಬೇಕಾಗಬಹುದು. ಆದರೆ, ಅವರ ಶಿಕ್ಷೆಯ ಅವಧಿ ಮೇ 18ಕ್ಕೆ ಪೂರ್ಣಗೊಳ್ಳಲಿದೆ. ನಿಯಮಗಳ ಪ್ರಕಾರ ಕೈದಿಗಳಿಗೆ ತಿಂಗಳಿಗೆ 4ದಿನ ರಜೆ ನೀಡಲಾಗುತ್ತದೆ. ಆದರೆ, ಈ ಸಮಯದಲ್ಲಿ ಸಿಧು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ ಅಂತ್ಯಕ್ಕೆ 48 ದಿನಗಳ ಮೊದಲು ಅವರ ಶಿಕ್ಷೆಯನ್ನು ಪೂರ್ಣಗೊಳ್ಳಲಿದ್ದು, ಏಪ್ರಿಲ್ 1ರಂದು ಅವರು ಜೈಲಿನಿಂದ ಹೊರಗೆ ಬರಬಹುದು.
ಇದನ್ನೂ ಓದಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಜೈಲು ಶಿಕ್ಷೆ: ರಾಹುಲ್ ಸಂಸತ್ ಸದಸ್ಯತ್ವಕ್ಕೆ ತೂಗುಗತ್ತಿಯೇ?