ETV Bharat / bharat

ದಾವೂದ್​ ಇಬ್ರಾಹಿಂ ಬಂಟರಿಂದ ಪ್ರಧಾನಿ ಮೋದಿ ಹತ್ಯೆಗೆ ಮತ್ತೆ ಬೆದರಿಕೆ ಸಂದೇಶ - ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್​

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಮುಂಬೈ ಪೊಲೀಸ್​ ಠಾಣೆಗೆ ಬೆದರಿಕೆ ಆಡಿಯೋ ಸಂದೇಶ ಬಂದಿದೆ. ಖಾಕಿ ಪಡೆ ಎಲ್ಲೆಡೆ ಅಲರ್ಟ್​ ಘೋಷಿಸಿದೆ.

narendra-modis-death-threats
ಪ್ರಧಾನಿ ಮೋದಿ ಹತ್ಯೆಗೆ ಮತ್ತೆ ಬೆದರಿಕೆ ಸಂದೇಶ
author img

By

Published : Nov 22, 2022, 3:52 PM IST

ಮುಂಬೈ(ಮಹಾರಾಷ್ಟ್ರ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತೆ ಜೀವ ಬೆದರಿಕೆ ಬಂದಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್​ ಪ್ರಧಾನಿ ಹತ್ಯೆಗೆ ಸಂಚು ರೂಪಿಸುತ್ತಿರುವ ಬಗ್ಗೆ ಮುಂಬೈ ಪೊಲೀಸರಿಗೆ ಮಾಹಿತಿ ಬಂದಿದೆ. ಠಾಣೆಯ ಸಂಚಾರಿ ದೂರವಾಣಿಗೆ ಆಡಿಯೋ ಸಂದೇಶವೊಂದು ಬಂದಿದ್ದು, ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ.

ಏಪ್ರಿಲ್ ತಿಂಗಳಲ್ಲೂ ಪ್ರಧಾನಿ ನರೇಂದ್ರ ಮೋದಿಗೆ ಜೀವ ಬೆದರಿಕೆ ಹಾಕಿದ ಇ-ಮೇಲ್ ಮುಂಬೈನ ಎನ್‌ಐಎ ಶಾಖೆಗೆ ಬಂದಿತ್ತು. ಅದರಲ್ಲಿ ನಮೂದಿಸಿದಂತೆ 20 ಕೆಜಿ ಆರ್​ಡಿಎಕ್ಸ್ ಇದ್ದು, ಪ್ರಧಾನಿ ಜೊತೆಗೆ 2 ಮಿಲಿಯನ್ ಜನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು.

ಕಳೆದ ಕೆಲವು ತಿಂಗಳಿಂದ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಹೆಚ್ಚಾಗುತ್ತಿರುವುದರ ಬಗ್ಗೆ ಮುಂಬೈ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನದಿಂದ ಬಂದಿದ್ದ ಕರೆಯಲ್ಲಿ ನಗರದ ಪ್ರಸಿದ್ಧ ಹೋಟೆಲ್​ ಅನ್ನು ಉಡಾಯಿಸುವುದಾಗಿ ಬೆದರಿಕೆ ಬಂದಿತ್ತು.

ಓದಿ: ಯುವಜನತೆಗೆ ನಿರಂತರ ರೋಜಗಾರ್ ಮೇಳ: 71 ಸಾವಿರ ನೇಮಕಾತಿ ಪತ್ರ ಹಸ್ತಾಂತರಿಸಿದ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.