ಚಿಂದ್ವಾರ್(ಮಧ್ಯಪ್ರದೇಶ): ಇಲ್ಲಿನ ಸೌಸರ್ನ ಘೋಘ್ರಾ ಜಲಪಾತದ ವೀಕ್ಷಣೆಗೋಸ್ಕರ ಪಿಕ್ನಿಕ್ ತೆರಳಿದ್ದ ನಾಗ್ಪುರದ ಕುಟುಂಬವೊಂದು ಪ್ರವಾಹದಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಹಠಾತ್ ಪ್ರವಾಹದಿಂದಾಗಿ ಈ ಕುಟುಂಬ ಸಿಲುಕೊಂಡಿದ್ದು, ಕೆಲ ಗಂಟೆಗಳ ಕಾಲ ಸಂಕಷ್ಟ ಅನುಭವಿಸಿದೆ. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸೌಸರ್ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣೆ ಮಾಡಿದ್ದಾರೆ. ಜಲಪಾತ ವೀಕ್ಷಣೆ ಮಾಡಲು ಒಂದೇ ಕುಟುಂಬದ 12 ಜನರು ತೆರಳಿದ್ದರು. ಈ ವೇಳೆ, ಏಕಾಏಕಿ ಪ್ರವಾಹ ಹೆಚ್ಚಾಗಿರುವ ಕಾರಣ ಅಲ್ಲಿಂದ ವಾಪಸ್ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಸಿಕ್ಕಿ ಹಾಕಿಕೊಂಡಿದ್ದು, ಅವರನ್ನ ಸುರಕ್ಷಿತವಾಗಿ ಕರೆತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿರಿ: 'ಭಾಯ್, ನನ್ನ ಗೆಳತಿಗೆ iPhone ಕೊಡಿಸಿ ಎಂದ ಯುವಕ'; ಸೋನು ಸೂದ್ ಪ್ರತಿಕ್ರಿಯೆ ನೋಡಿ!