ಹೈದರಾಬಾದ್: ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ ಮುಂಬರುವ ಚಿತ್ರ 'ಲಾಲ್ ಸಿಂಗ್ ಚಡ್ಡಾ'ದಲ್ಲಿ ತೆಲುಗು ನಟ ನಾಗಚೈತನ್ಯ ಕಾಣಿಸಿಕೊಂಡಿದ್ದು, ಚಿತ್ರದ ತಮ್ಮ ಫಸ್ಟ್ ಲುಕ್ ಅನ್ನು ಶುಕ್ರವಾರ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಅಮೀರ್ ಖಾನ್ನೊಂದಿಗಿರುವ ಫೋಟೋವನ್ನು ಇನ್ಸ್ಟಾ, ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಇಬ್ಬರೂ ಸೈನಿಕರ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಹನಿರ್ಮಾಪಕಿ ಕಿರಣ್ ರಾವ್ ಮತ್ತು ನಿರ್ದೇಶಕ ಅದ್ವೈತ್ ಚಂದನ್ ಕೂಡ ಇದ್ದಾರೆ.
-
Grateful #Bala #LaalSinghChaddha pic.twitter.com/hLidCDCcyf
— chaitanya akkineni (@chay_akkineni) July 9, 2021 " class="align-text-top noRightClick twitterSection" data="
">Grateful #Bala #LaalSinghChaddha pic.twitter.com/hLidCDCcyf
— chaitanya akkineni (@chay_akkineni) July 9, 2021Grateful #Bala #LaalSinghChaddha pic.twitter.com/hLidCDCcyf
— chaitanya akkineni (@chay_akkineni) July 9, 2021
ಬಾಲಾ, ಲಾಲ್ ಸಿಂಗ್ ಚಡ್ಡಾ ಎಂಬ ಹ್ಯಾಷ್ಟ್ಯಾಗ್ ಅನ್ನು ಚೈತನ್ಯ ನೀಡಿದ್ದು, ಫೋಟೋ ಮೇಲೆ 'ಬಾಲಾ ಮೀಟ್ಸ್ ಲಾಲ್' ಎಂದು ಬರೆದುಕೊಂಡಿದ್ದಾರೆ. ಮೇಲ್ನೋಟಕ್ಕೆ ಈ ಚಿತ್ರ ಹಾಲಿವುಡ್ನ 'ಫಾರೆಸ್ಟ್ ಗಂಪ್' ಎಂಬ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದ್ದು, ಸದ್ಯಕ್ಕೆ ಲಡಾಖ್ನಲ್ಲಿ ಶೂಟಿಂಗ್ ನಡೆಯುತ್ತಿದೆ. ಚೈತನ್ಯ ಅವರ ಪತ್ನಿ, ನಟಿ ಸಮಂತಾ ಅಕ್ಕಿನೇನಿ, ಚಿತ್ರವನ್ನು ರೀಪೋಸ್ಟ್ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಾಗಚೈತನ್ಯ ಕಾಣಿಸಿಕೊಳ್ಳಲಿದ್ದಾರೆ. ಈಗ ಲಾಲ್ಸಿಂಗ್ ಚಡ್ಡಾ ಶೂಟಿಂಗ್ ಬಯೋಬಬಲ್ನಲ್ಲಿ ನಡೆಯಲಿದೆ.