ETV Bharat / bharat

ನನ್ನ ಯಶಸ್ಸಿಗೆ ಪೋಷಕರೇ ಕಾರಣ: 'ಈಟಿವಿ ಭಾರತ'ದೊಂದಿಗೆ ಭುವನ ಸುಂದರಿ ಹರ್ನಾಜ್ Exclusive ಮಾತು - ಮಿಸ್ ಯೂನಿವರ್ಸ್ 2021

Miss Universe Harnaaz: ಭುವನ ಸುಂದರಿ ಹರ್ನಾಜ್ ಸಂಧು 'ಈಟಿವಿ ಭಾರತ'ದೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Miss Universe Harnaaz
ಮಿಸ್ ಯೂನಿವರ್ಸ್ ಹರ್ನಾಜ್ ಸಂಧು
author img

By

Published : Dec 25, 2021, 10:43 AM IST

ಮುಂಬೈ: ಭುವನ ಸುಂದರಿ ಪಟ್ಟ ಅಲಂಕರಿಸಿದ 3ನೇ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಹರ್ನಾಜ್ ಸಂಧು ಪಾತ್ರರಾಗಿದ್ದಾರೆ. 2000 ರಲ್ಲಿ ಗೆದ್ದ ಲಾರಾ ದತ್ತಾ ಭೂಪತಿ ಮತ್ತು 1994 ರಲ್ಲಿ ಸುಶ್ಮಿತಾ ಸೇನ್ ಸೇರಿ ಭುವನ ಸುಂದರಿ ಪಟ್ಟ ಅಲಂಕರಿಸಿದ್ದರು. ಈ ಬಾರಿ ಮಿಸ್​ ಯುನಿವರ್ಸ್ ಕಿರೀಟ ಧರಿಸಿದ ಹರ್ನಾಜ್​ ಸಂಧು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾರೆ.

ಈಟಿವಿ ಭಾರತದೊಂದಿಗೆ ವಿಶೇಷ ಸಂದರ್ಶನದಲ್ಲಿ ಹರ್ನಾಜ್ ಸಂಧು

ಇತ್ತೀಚೆಗೆ ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಚಂಡೀಗಢದ 21 ವರ್ಷದ ನಟಿ ಮತ್ತು ರೂಪದರ್ಶಿ ಹರ್ನಾಜ್ ದಕ್ಷಿಣ ಆಫ್ರಿಕಾದ ಲಾಲೆಲಾ ಮ್ಸ್ವಾನೆ ಮತ್ತು ಪರಾಗ್ವೆಯ ನಾಡಿಯಾ ಫೆರೇರಾರನ್ನು ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡರು. ಲಾರಾ ದತ್ತ ನಂತರ ಬರೋಬ್ಬರಿ 21 ವರ್ಷಗಳ ಬಳಿಕ ಕಿರೀಟ ಭಾರತಕ್ಕೆ ಸಂದಿದೆ. ಈ ಮೂಲಕ ಹರ್ನಾಜ್ ವಿಜಯಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.

'ಈಟಿವಿ ಭಾರತ'ದೊಂದಿಗಿನ ಕಿರು ಸಂದರ್ಶನದಲ್ಲಿ ಮಿಸ್ ಯೂನಿವರ್ಸ್ 2021 ಎಂದು ಘೋಷಿಸಿದಾಗ ನಿಮಗೆ ಏನನ್ನಿಸಿತು ಎಂದು ಕೇಳಿದಾಗ, "ಇದು ನನ್ನ ಹೆಸರಲ್ಲ, ಆದರೆ ನನ್ನ ದೇಶದ ಹೆಸರನ್ನು ವಿಜೇತ ಎಂದು ಘೋಷಿಸಿದ್ದು, ಅದೊಂದು ಅದ್ಭುತ ಕ್ಷಣವಾಗಿದೆ. ಅವರು ನನ್ನನ್ನು ನನ್ನ ದೇಶದ ಹೆಸರಿನಿಂದ ಉಲ್ಲೇಖಿಸಿದಾಗ ನಾನು ಹೆಮ್ಮೆಪಟ್ಟೆ ಎಂದು ಭಾವುಕರಾದರು.

ಇದನ್ನೂ ಓದಿ: ಹರ್ನಾಝ್​ ಸಂಧುಗೆ ಭುವನ ಸುಂದರಿ ಕಿರೀಟ​.. 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಅದೃಷ್ಟ

ಸ್ಪರ್ಧೆಯಲ್ಲಿ ಭಾಗವಹಿಸಲು ನಡೆಸಿದ ಪೂರ್ವ ತಯಾರಿಗಳ ಬಗ್ಗೆ ಮಾತನಾಡಿದ ಹರ್ನಾಜ್​, ನಾನು ಕೇವಲ 30 ದಿನಗಳ ಸಿದ್ಧತೆ ಮಾಡಿಕೊಂಡಿದ್ದೆ. ಸಂವಹನ, ರಾಂಪ್ ವಾಕ್, ಕೂದಲು ಮತ್ತು ಮೇಕ್ಅಪ್, ಆಹಾರ ಮತ್ತು ಜಿಮ್ ತರಬೇತಿ ಪಡೆದಿದ್ದೆ. ಇದಕ್ಕೆ ನನ್ನ ಕುಟುಂಬದ ಸಂಪೂರ್ಣ ಬೆಂಬಲವಿತ್ತು ಎಂದರು.

Miss Universe Harnaaz
ಮಿಸ್ ಯೂನಿವರ್ಸ್ ಹರ್ನಾಜ್ ಸಂಧು

ಹರ್ನಾಜ್ ಸಂಧು ಚಂಡೀಗಢದಲ್ಲಿನ ತನ್ನ ದಿನಗಳ ಬಗ್ಗೆ ಮಾತನಾಡುತ್ತಾ, ನಾನು ಚಂಡೀಗಢದಲ್ಲಿ ನನ್ನ ಶಿಕ್ಷಣವನ್ನು ಪೂರ್ಣಗೊಳಿಸಿದೆ. ನನಗೆ ಖುಷಿಕೊಡುವ ಸಂತಿ ಎಂದರೆ ವಿವಿಧ ಸಮುದಾಯಗಳೊಂದಿಗೆ ಒಟ್ಟಿಗೆ ವಾಸಿಸುವುದು. ನಗರಕ್ಕೆ ಭೇಟಿ ನೀಡಲು ನಾನು ಉತ್ಸುಕಳಾಗಿದ್ದೇನೆ ಎಂದರು.

ಅವರು ತಮ್ಮ ಆರಂಭಿಕ ಮಾಡೆಲಿಂಗ್ ದಿನಗಳ ಬಗ್ಗೆ ಮಾತನಾಡುತ್ತಾರೆ, "ನನ್ನ ಕುಟುಂಬ ಯಾವಾಗಲೂ ನನ್ನನ್ನು ಬೆಂಬಲಿಸುತ್ತದೆ. ನನಗೆ 'ಪಂಜಾಬ್ ಕಿ ಶೆರ್ನಿ' ಎಂಬ ಪದವನ್ನು ಸೃಷ್ಟಿಸಿದವರು ನನ್ನ ತಂದೆ. ಸ್ತ್ರೀರೋಗ ತಜ್ಞರಾಗಿರುವ ನನ್ನ ತಾಯಿ ಯಾವಾಗಲೂ ನನ್ನನ್ನು ಉತ್ತಮ ಸ್ನೇಹಿತೆಯಂತೆ ಬೆಂಬಲಿಸಿದರು ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: 21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ: ಅಭಿನಂದನೆ ಸಲ್ಲಿಸಿದ ಮಾಜಿ ವಿಶ್ವಸುಂದರಿಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.