ETV Bharat / bharat

ಪುಲ್ವಾಮಾದಲ್ಲಿ 5 ಸಾವಿರ ವರ್ಷ ಹಳೆಯದಾದ ಶಿವನ ದೇಗುಲ.. ಮುಸ್ಲಿಂರಿಂದಲೇ ರಕ್ಷಣೆ, ನಿರ್ವಹಣೆ

author img

By

Published : Aug 20, 2022, 10:38 PM IST

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 5 ಸಾವಿರ ವರ್ಷ ಹಳೆಯದಾದ ಶಿವನ ದೇಗುಲವಿದ್ದು, ಅದರ ನಿರ್ವಹಣೆ ಮುಸ್ಲಿಂ ಸಮುದಾಯದಿಂದ ನಡೆಯುತ್ತಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

Etv Bharat
Etv Bharat

ಪುಲ್ವಾಮಾ(ಜಮ್ಮು-ಕಾಶ್ಮೀರ): ಭಾರತ ದೇಗುಲಗಳ ಬೀಡು, ಇಲ್ಲಿ ಲಕ್ಷಾಂತರ ದೇಗುಲಗಳಿದ್ದು, ಅವುಗಳಲ್ಲಿ ಕೆಲ ದೇವಸ್ಥಾನಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಂತಹದೊಂದು ದೇವಸ್ಥಾನ ಕಣಿವೆ ನಾಡು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಇದಕ್ಕೆ ಬರೋಬ್ಬರಿ 5 ಸಾವಿರ ವರ್ಷಗಳಷ್ಟು ಹಳೆಯದಾದ ಇತಿಹಾಸವಿದೆ ಎನ್ನಲಾಗ್ತಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಈ ಜನಪ್ರಿಯ ದೇವಾಲಯವಿದೆ. 10ನೇ ಶತಮಾನದ ಶಿವನ ದೇಗುಲ ಇದಾಗಿದೆ. ಏಕತೆಯ ಸಂಕೇತ ಸಾರುವ ಈ ದೇಗುಲದಲ್ಲಿ ಎಲ್ಲ ಕೆಲಸ, ದೇವಾಲಯದ ನಿರ್ವಹಣೆ ಮುಸ್ಲಿಂರಿಂದ ನಡೆಯುತ್ತದೆ. ಪುಲ್ವಾಮಾ ಪ್ರದೇಶದಲ್ಲಿ ಹೆಚ್ಚಾಗಿ ಮುಸ್ಲಿಂ ಕುಟುಂಬಗಳು ವಾಸವಾಗಿದ್ದು, ದೇವಾಲಯದ ನಿರ್ವಹಣೆ ಅವರಿಂದ ನಡೆಯುತ್ತದೆ. ಏಕಶಿಲೆ ಕೆತ್ತನೆಯಲ್ಲಿ ಈ ಸುಂದರ ದೇಗುಲ ನಿರ್ಮಾಣಗೊಂಡಿದ್ದು, ಇದರ ಬಗ್ಗೆ ಬ್ರಿಟಿಷ್​​ ಸೆಟ್ಲಮೆಂಟ್ ಕಮಿಷನರ್​ ಸರ್​ ವಾಲ್ಟರ್​​ ರೋಪರ್​ ಲಾರೆನ್ಸ್​​ ಅವರ 'ದಿ ವ್ಯಾಲಿ ಆಫ್ ಕಾಶ್ಮೀರ್​'​​ನಲ್ಲಿ ಉಲ್ಲೇಖವಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಕ್ರಿಸ್ತಪೂರ್ವ 483 ಮತ್ತು 490ರ ನಡುವೆ ಕಣಿವೆ ನಾಡು ಆಳಿರುವ ನರೇಂದ್ರಾದಿತ್ಯನ ಆಳ್ವಿಕೆಯಲ್ಲಿ ಈ ಶಿವನ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಪುಲ್ವಾಮಾದ ಅಚಾನ್​ ಗ್ರಾಮದಲ್ಲಿ ಈ ದೇಗುಲವಿದೆ. 2,200ಕ್ಕೂ ಹೆಚ್ಚಿನ ಜನಸಂಖ್ಯೆ ಈ ಗ್ರಾಮದಲ್ಲಿದ್ದು, ಪ್ರಧಾನವಾಗಿ ಮುಸ್ಲಿಂರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ದೇವಸ್ಥಾನದ ದುರಸ್ತಿ ಕಾರ್ಯ ಸಹ ಇವರಿಂದ ನಡೆಯುತ್ತದೆ.

ಗ್ರಾಮದಲ್ಲಿ ಈ ಹಿಂದೆ ಕಾಶ್ಮೀರಿ ಪಂಡಿತರ ಜನವಸತಿ ಇತ್ತು. ಜೊತೆಗೆ ಪ್ರತಿ ವರ್ಷ ಅನೇಕರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ, 1990ರ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರ ಮೇಲಿನ ಉಗ್ರರ ದಾಳಿಯಿಂದಾಗಿ ಅವರು ಸ್ಥಳಾಂತರಗೊಳ್ಳುತ್ತಾರೆ. ಬಳಿಕ ಈ ಪ್ರದೇಶದಲ್ಲಿ ಉಗ್ರರ ಉಪಟಳ ಕೂಡ ಹೆಚ್ಚಾಗುತ್ತದೆ. ಆದರೆ, ಹಿಂದೂ ದೇವಾಲಯ ಮಾತ್ರ ಸ್ಥಳೀಯ ಮುಸ್ಲಿಂ ಕುಟುಂಬಗಳಿಂದ ನಿರ್ವಹಣೆಗೊಳಪಡುತ್ತದೆ. ಈ ದೇಗುಲಕ್ಕೆ ಯಾವುದೇ ರೀತಿಯ ಹಾನಿ ಸಹ ಆಗಿಲ್ಲ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ ಪತ್ತೆ

ಇಲ್ಲಿನ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕಳೆದ ಮೂರು ದಶಕಗಳಲ್ಲಿ ಕಾಶ್ಮೀರದಲ್ಲಿ 208ಕ್ಕೂ ಅಧಿಕ ಹಿಂದೂ ದೇವಾಲಯಗಳು ದ್ವಂಸಗೊಂಡಿವೆ. ಆದರೆ, ಈ ಶಿವನ ದೇಗುಲಕ್ಕೆ ಯಾವುದೇ ಹಾನಿಯಾಗಿಲ್ಲ. ಸ್ಥಳೀಯ ಮುಸ್ಲಿಂರು ಇದನ್ನು ರಕ್ಷಿಸಿಕೊಂಡು ಬಂದಿದ್ದಾರೆ. ದೇಶದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಜಮ್ಮು-ಕಾಶ್ಮೀರದ ಈ ದೇಗುಲ ಮಾತ್ರ ಏಕತೆಯ ಪ್ರತೀಕವಾಗಿ ನಿಂತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದೆ.

2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ ಪರಿಣಾಮ 40 ಸಿಆರ್​​​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಸರ್ಜಿಕಲ್​ ಸ್ಟ್ರೈಕ್​ ನಡೆಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.