ವಾರಾಣಸಿ(ಉತ್ತರ ಪ್ರದೇಶ): ಧರ್ಮ ಮತ್ತು ಅಧ್ಯಾತ್ಮದ ನಗರಿ ಕಾಶಿಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 2004ರಲ್ಲಿ ಶಿವ ದೇವಾಲಯವನ್ನು ನಿರ್ಮಿಸಿದಳು. ಆದರೆ, ದೇವಾಲಯದ ಚಿಕ್ಕದಾದ ಕಾರಣ ಮುಸ್ಲಿಮೇತರ ಮಹಿಳೆಯರು ಭಜನೆ, ಕೀರ್ತನೆ ಮಾಡಲು ತೊಂದರೆಗಳನ್ನು ಅನುಭವಿಸುತ್ತಿದ್ದರು. ಹೀಗಾಗಿ ಅವರು ಮುಸ್ಲಿಮೇತರ ಮಹಿಳೆಯರ ಪೂಜೆಗೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನದ ಮುಂಭಾಗದಲ್ಲಿ ಸಭಾಂಗಣವನ್ನು ನಿರ್ಮಿಸಿದ್ದಾರೆ.
ವಾರಾಣಸಿಯ ರುದ್ರ ಬಿಹಾರ ಕಾಲೋನಿಯ ನಿವಾಸಿ ನೂರ್ ಫಾತಿಮಾ ಸಭಾಂಗಣ ನಿರ್ಮಿಸಿದವರು. ವೃತ್ತಿಯಲ್ಲಿ ವಕೀಲೆ ಆಗಿರುವ ಇವರು 2004ರಲ್ಲಿ ಸಾಕಷ್ಟು ಶ್ರಮವಹಿಸಿ ಅಲ್ಲಿ ಶಿವನ ಮಂದಿರ ನಿರ್ಮಿಸಿದ್ದರು. ಶಿವನ ದರ್ಶನ ಪಡೆದು ಕೆಲಸಕ್ಕೆ ತೆರಳಿದರೆ ಒಳ್ಳೆಯದಾಗುತ್ತದೆ ಎನ್ನುತ್ತಾರೆ ನೂರ್ ಫಾತಿಮಾ. ಇದನ್ನು ಗಮನದಲ್ಲಿಟ್ಟುಕೊಂಡು ಅವರು ಶಿವನ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯರ ಪ್ರಕಾರ, ನೂರ್ ಫಾತಿಮಾ ಅವರು ಕನಸಿನಲ್ಲಿ ಶಿವ ದೇವಾಲಯವನ್ನು ನಿರ್ಮಿಸುವ ಸೂಚನೆಯನ್ನು ಪಡೆದ್ದಿದರಂತೆ. ಹಾಗಾಗಿ ಅವರು ದೇವಾಲಯವನ್ನು ನಿರ್ಮಿಸಿದ್ದಾರೆ. ಅಲ್ಲದೇ ಅವರು ನಿತ್ಯ ದೇವಸ್ಥಾನವನ್ನು ಸ್ವಚ್ಛಗೊಳಿಸುತ್ತಾರೆ ಎನ್ನುತ್ತಾರೆ.
ಭೋಲೆನಾಥನ ದರ್ಶನ ಪಡೆದು ಎಲ್ಲಿಗೆ ಹೋದರೂ ತನ್ನ ಕೆಲಸ ನಿರ್ವಿಗ್ನವಾಗಿ ನಡೆಯುತ್ತದೆ ಎನ್ನುತ್ತಾರೆ ನೂರ್ ಫಾತಿಮಾ. ಹೀಗಾಗಿ ಅವರು 2004ರಲ್ಲಿ ಈ ಶಿವಾಲಯ ನಿರ್ಮಿಸಿದ್ದಾರೆ. ಕಾಲೋನಿಯ ಸುತ್ತಮುತ್ತಲಿನ ಜನರೂ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ದೇವಾಲಯವು ಚಿಕ್ಕದಾದ ಕಾರಣ, ಅದರಲ್ಲಿ ಭಜನೆ ಕೀರ್ತನೆ ಮಾಡಲು ಜನರಿಗೆ ತೊಂದರೆಯಾಯಿತು. ಈ ಹಿನ್ನೆಲೆಯಲ್ಲಿ ನೂರ್ ಫಾತಿಮಾ ಅವರು ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ಸಭಾಂಗಣವನ್ನು ನಿರ್ಮಿಸಿದ್ದು, ಅದನ್ನು ಸಚಿವ ರವೀಂದ್ರನಾಥ್ ಜೈಸ್ವಾಲ್ ಉದ್ಘಾಟಿಸಿದ್ದಾರೆ.
ಇದನ್ನೂ ಓದಿ: ಈಡೇರಿತು ಭಾರತೀಯರ ದಶಕದ ಕನಸು.. ದುಬೈನಲ್ಲಿ ಹಿಂದೂ ದೇವಾಲಯ ಉದ್ಘಾಟನೆ