ETV Bharat / bharat

ವಿಡಿಯೋ: ಹುಟ್ಟುಹಬ್ಬದಂದು ಒಂದಲ್ಲ, ಎರಡಲ್ಲ ಬರೋಬ್ಬರಿ 550 ಕೇಕ್​ ಕತ್ತರಿಸಿದ ಭೂಪ!

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವ್ಯಕ್ತಿಯೊಬ್ಬ ದಾಖಲೆಯ 550 ಕೇಕ್​ ಕತ್ತರಿಸುವ ಮೂಲಕ ವಿವಾದಕ್ಕೆ ಸಿಲುಕಿಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

Mumbai man cuts 550 cakes on birthday
Mumbai man cuts 550 cakes on birthday
author img

By

Published : Oct 13, 2021, 8:09 PM IST

ಮುಂಬೈ: ಹುಟ್ಟುಹಬ್ಬದ ಸಂಭ್ರಮದಲ್ಲಿರುವಾಗ ಒಂದು ಅಥವಾ ಎರಡು ಕೇಕ್​ ಕತ್ತರಿಸುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ಭೂಪ ದಾಖಲೆಯ 550 ಕೇಕ್​ ಕತ್ತರಿಸಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ಒಂದಲ್ಲ, ಎರಡಲ್ಲ ಬರೋಬ್ಬರಿ 550 ಕೇಕ್​ ಕತ್ತರಿಸಿದ ಭೂಪ

ಸೂರ್ಯ ರಾತುರಿ ಎಂಬ ಯುವಕ 550 ಕೇಕ್​ ಕತ್ತರಿಸಿದ್ದು, ಕೈಯಲ್ಲಿ ಎರಡು ಕೇಕ್​​​ ಹಿಡಿದುಕೊಂಡು ಸುಮಾರು ಮೂರು ನಿಮಿಷಗಳ ಕಾಲ ಹುಟ್ಟುಹಬ್ಬದ ಕೇಕ್​ ಕತ್ತರಿಸಿದ್ದಾನೆ. 550 ಕೇಕ್​​ಗಳನ್ನ ಒಟ್ಟು ಟೇಬಲ್​ಗಳ ಮೇಲೆ ಇಡಲಾಗಿತ್ತು. ಈ ವೇಳೆ, ಅನೇಕ ಜನರು ಆತನ ಸುತ್ತಮುತ್ತಲೂ ನಿಂತಿದ್ದಾರೆ. ಈ ವೇಳೆ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಕ್ಕಾಗಿ ಪ್ರಕರಣ ಸಹ ದಾಖಲಾಗಿದೆ.

ಇದನ್ನೂ ಓದಿರಿ: ಏಮ್ಸ್​ ಆಸ್ಪತ್ರೆಗೆ ದಾಖಲಾದ ಮಾಜಿ ಪಿಎಂ ಮನಮೋಹನ್ ಸಿಂಗ್​

ಇಷ್ಟೊಂದು ಕೇಕ್ ಕತ್ತರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​ ಆಗುತ್ತಿದ್ದಂತೆ ಸ್ಥಳೀಯರು ಪೊಲೀಸ್ ಠಾಣೆ ಹಾಗೂ ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ನಲ್ಲಿ ದೂರು ದಾಖಲು ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.