ಮುಂಬೈ: ಕ್ಯಾಬ್ ಚಾಲಕನೊಬ್ಬ ತನ್ನ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು 40 ವರ್ಷದ ಅಮೆರಿಕ ಪ್ರಜೆಯೊಬ್ಬರು ಆರೋಪಿಸಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
ಮಾಧ್ಯಮ ವರದಿಗಳ ಪ್ರಕಾರ ಡಿಎನ್ ನಗರ ಪೊಲೀಸರು ಕ್ಯಾಬ್ ಚಾಲಕ ಯೋಗೇಂದ್ರ ಉಪಾಧ್ಯಾಯ ಅವರನ್ನು ಬಂಧಿಸಿದ್ದಾರೆ. ಯೋಗೇಂದ್ರ ಅವರನ್ನು ಬಾಂದ್ರಾದ ಹಾಲಿಡೇ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು, ಅಲ್ಲಿ ಅವನ ವಿರುದ್ಧ ಐಪಿಸಿಯ ಸೆಕ್ಷನ್ 354 (ಎ) ಮತ್ತು 509 ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಅಮೆರಿಕ ಮೂಲದ ಉದ್ಯಮಿ ಒಂದು ತಿಂಗಳಿನಿಂದ ಕೆಲಸದ ನಿಮಿತ್ತ ಭಾರತದಲ್ಲಿದ್ದಾರೆ. ಅವರು ಶನಿವಾರ ತನ್ನ ಸಹೋದ್ಯೋಗಿಗಳೊಂದಿಗೆ ಬೇರೆ ನಗರದಿಂದ ಕೆಲಸವನ್ನು ಮುಗಿಸಿ ಮುಂಬೈಗೆ ಹಿಂತಿರುಗುತ್ತಿದ್ದರು. ಅಲ್ಲಿಂದ ಬೇರೆ ಸ್ಥಳಕ್ಕೆ ಸಂಚರಿಸಲು ಎಸ್‌ಯುವಿ ಬುಕ್ ಮಾಡಿದ್ದಾರೆ, ನಂತರ ದೂರುದಾರರು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದರು.
ಜೊತೆಗಿದ್ದವರು ಒಬ್ಬೊಬ್ಬರಾಗಿ ಇಳಿದು ಕೊನೆಗೆ ಕಾರಿನಲ್ಲಿ ಒಂಟಿಯಾಗಿ ಒಬ್ಬರೇ ಉಳಿದರು. ಈ ವೇಳೆ, ಚಾಲಕ ಅವರ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಅವರು ಕೂಗಿಕೊಂಡಿದ್ದಾರೆ. ನಂತರ ದಾರಿಹೋಕರು ಆರೋಪಿ ಚಾಲಕನನ್ನು ಹಿಡಿದರು. ಡಿ.ಎನ್.ನಗರ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ ಸ್ಥಳಕ್ಕೆ ಬಂದ ಪೊಲೀಸರು ಅವನನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣ ದಾಖಲಿಸಿದ್ದು ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ:20 ವರ್ಷಗಳ ನಂತರ ತನ್ನ ಕುಟುಂಬ ಸೇರಿದ ಮಾನಸಿಕವಾಗಿ ನೊಂದ ಮಹಿಳೆ