ಗಾಜಿಪುರ(ಉತ್ತರಪ್ರದೇಶ): ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಆಪರೇಷನ್ ಭೂ ಮಾಫಿಯಾದಡಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮಾಫಿಯಾ ಮುಕ್ತಾರ್ ಅನ್ಸಾರಿ ಅಪ್ತ ಹಾಗೂ ವಿಶೇಷ ಶೂಟರ್ ವಿರುದ್ಧ ಮಹತ್ವದ ಕ್ರಮ ಕೈಗೊಂಡಿದೆ. ಜಿಲ್ಲೆಯ ಭವರಕೋಲ್ ಪ್ರದೇಶದ ಶೇರ್ಪುರ್ ಗ್ರಾಮದಲ್ಲಿ ಮುಖ್ತಾರ್ ಅನ್ಸಾರಿಯ ಅಪ್ತ ಸಹಾಯಕ ಹಾಗೂ ವಿಶೇಷ ಶೂಟರ್ ಆಗಿದ್ದ ಅಂಗಾದ್ ರೈ ಅವರಿಗೆ ಸೇರಿದ 7 ಕೋಟಿ 17 ಲಕ್ಷ ಮೌಲ್ಯದ ಆಸ್ತಿಯನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಮುಖ್ತಾರ್ ಅನ್ಸಾರಿ ಐಎಸ್ 191 ಗ್ಯಾಂಗ್‌ನ ಸದಸ್ಯ ಆಗಿರುವ ಅಂಗಾದ್ ರೈ ಯನ್ನು ಪೊಲೀಸರು ಬಂಧಿಸಿದ್ದು, ಯೋಗಿ ಸರ್ಕಾರದ ಆಪರೇಷನ್ ಭೂ ಮಾಫಿಯಾದಡಿ ಪೊಲೀಸರು ಅಂಗಾದ್ ರೈ ಅವರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಗಾಜಿಪುರ ಎಸ್ಪಿ ಓಂವೀರ್ ಸಿಂಗ್ ತಿಳಿಸಿದ್ದಾರೆ.
ಅಂಗಾದ್ ರೈ ಅವರು ದರೋಡೆ, ಸುಲಿಗೆಯಿಂದ ಗಳಿಸಿದ ಹಣದಿಂದ ಗಾಜಿಪುರ ಮತ್ತು ವಾರಣಾಸಿಯಲ್ಲಿ ಆಸ್ತಿಗಳನ್ನು ಖರೀದಿಸಿದ್ದರು. ಪರಿಶೀಲನೆ ವರದಿ ಆಧರಿಸಿ ಕಂದಾಯ ಇಲಾಖೆ ಸಮನ್ವಯದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತು. ನವಲಪುರದ ಜಗಜೀವನಪುರದಲ್ಲಿರುವ 650 ಚದರ್ ಮೀಟರ್ ವಿಸ್ತೀರ್ಣದ ವಾಣಿಜ್ಯ ಪ್ಲಾಟ್ ಮತ್ತು ಅದರ ಮೇಲೆ ನಿರ್ಮಿಸಿದ ವಸತಿ ಕಟ್ಟಡವನ್ನು ಮಂಗಳವಾರ ಭನ್ವರಕೋಲ್ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದರೊಂದಿಗೆ ಅಂಗಾದ್ ಅವರ ಹುಟ್ಟೂರು ಶೇರ್ಪುರ್ ಖುರ್ದ್‌ನಲ್ಲಿ ನಿರ್ಮಿಸಿದ ಮನೆಯೂ ಸೇರಿಕೊಂಡಿದೆ.
ಇದನ್ನೂಓದಿ:ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪು ಕದ್ದೊಯ್ದ ವಿಕೃತಕಾಮಿಗಳು.. ಎಂಥ ಕರ್ಮ ಮಾರ್ರೆ!
ಮಂಗಳವಾರದಂದು ಜಪ್ತಿ ಮಾಡಿದ ಎರಡೂ ಆಸ್ತಿಗಳ ಒಟ್ಟು ಮೌಲ್ಯ 7 ಕೋಟಿ 17 ಲಕ್ಷ 4460 ರೂಪಾಯಿ ಎಂದು ಅಂದಾಜಿಸಲಾಗಿದೆ. 14(1) ದರೋಡೆಕೋರ ಕಾಯಿದೆ ಅಡಿ ಆಸ್ತಿಗಳನ್ನು ಪೊಲೀಸರು ಸೀಲ್ ಮಾಡಿದ್ದು,ನೋಟಿಸ್ಗಳನ್ನು ಲಗತ್ತಿಸಿದರು. ಮುಟ್ಟುಗೋಲು ಮಾಡಿಕೊಂಡಿರುವ ಆಸ್ತಿಗಳಲ್ಲಿ ಯಾರೇ ಅಕ್ರಮವಾಗಿ ಒಳನುಸುಳಲು ಯತ್ನಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಾಜಿಪುರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ವೇಳೆ ಗ್ರಾಮಾಂತರ ಎಸ್ಪಿ ಬಲವಂತ್, ಸಿಒ ಹಿತೇಂದ್ರ ಕೃಷ್ಣ, ತಹಸೀಲ್ದಾರ್ ಬಿಜಯ್ ಪ್ರತಾಪ್ ಸಿಂಗ್, ಪ್ರಭಾರಿ ಇನ್ಸ್‌ಪೆಕ್ಟರ್ ಮುಹಮ್ಮದಾಬಾದ್ ಘನಾನಂದ ತ್ರಿಪಾಠಿ, ಕರಿಮುಡಿನ್‌ಪುರ ಪ್ರಭಾರಿ ಇನ್‌ಸ್ಪೆಕ್ಟರ್ ವಿಶ್ವನಾಥ್ ಯಾದವ್, ಎಸ್‌ಐ ಓಂಕಾರ್ ತಿವಾರಿ ಮೊದಲಾದವರು ಉಪಸ್ಥಿತರಿದ್ದರು.
ಅಂಗಾದ್ ರೈ ಯಾರು? ಅಂಗದ್ ರೈ ಬಹಳ ಕಾಲ ಮುಕ್ತಾರ್ ಅನ್ಸಾರಿ ಗ್ಯಾಂಗ್‌ನಲ್ಲಿ ಸಕ್ರಿಯರಾಗಿದ್ದರು. ಅಪರಾಧ ಜಗತ್ತಿನಲ್ಲಿ ಖ್ಯಾತಿ ಗಳಿಸಿರುವ ಸುಲಿಗೆ ದರೋಡೆ ಅಕ್ರಮ ಆಸ್ತಿಗಳನ್ನು ಮಾಡಿದ್ದಾರೆ. ಅಂಗಾದ್ ರೈ ಮುಹಮ್ಮದಾಬಾದ್ ಪ್ರದೇಶದ ಶೇರ್ಪುರ್ ಖುರ್ದ್ ಗ್ರಾಮದ ನಿವಾಸಿ. ಕಳೆದ ಮಾರ್ಚ್‌ನಲ್ಲಿ ಮದ್ಯದ ಬಾಟಲಿಗಳೊಂದಿಗೆ ಸಿಕ್ಕಿಬಿದ್ದರು. ದರೋಡೆಕೋರ ಕೃತ್ಯದ ಪ್ರಕರಣದಲ್ಲಿ ಗಾಜಿಪುರ ಪೊಲೀಸ್ರಿಗೆ ಈತನು ಬೇಕಾಗಿದ್ದಾನೆ. ಅಂಗದ್ ರೈ ಈಗಾಗಲೇ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ನ್ಯಾಯಾಲಯದಿಂದ ಜಾಮೀನಿನ ಮೇಲೆ ಹೊರಗಿದ್ದಾನೆ.
ಇದನ್ನೂಓದಿ:ಅಪ್ಪ ಬಿಟ್ಟೋದ, ಅಮ್ಮ ಅಸುನೀಗಿದಳು.. ಬಾಲಮಂದಿರದಲ್ಲಿದ್ದು ಎಸ್ಎಸ್ಎಲ್ಸಿಯಲ್ಲಿ ಸಾಧನೆಗೈದ ಅನಾಥೆಯ ಕಥೆ