ETV Bharat / bharat

ಫೋರ್ಬ್ಸ್​ ಶ್ರೀಮಂತರ ಪಟ್ಟಿ ರಿಲೀಸ್​: ದೇಶದ ನಂ.1 'ಸಿರಿವಂತ' ಮುಕೇಶ್​ ಅಂಬಾನಿ - ಫೋರ್ಬ್ಸ್​ ಶ್ರೀಮಂತರ ಪಟ್ಟಿ ರಿಲೀಸ್,

ಫೋರ್ಬ್ಸ್​ ಪತ್ರಿಕೆ 2021ರ 10 ಜನ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 84.5 ಬಿಲಿಯನ್ ಡಾಲರ್​ ಮೌಲ್ಯದ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅದಾನಿ ಗ್ರೂಪ್​​ನ ಚೇರ್​​ಮ್ಯಾನ್​ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ.

mukesh-ambani
ಮುಕೇಶ್​ ಅಂಬಾನಿ ಗೌತಮ್ ಅದಾನಿ
author img

By

Published : Apr 7, 2021, 2:24 PM IST

Updated : Apr 7, 2021, 3:56 PM IST

ನವದೆಹಲಿ: ಫೋರ್ಬ್ಸ್​ ನಿಯತಕಾಲಿಕ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಕೇಶ್​ ಅಂಬಾನಿ ಮೊದಲ ಸ್ಥಾನ ಪಡೆದಿದ್ದು, ಈ ಮೂಲಕ ಏಷ್ಯಾದಲ್ಲೇ ನಂ.1 ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅದಾನಿ ಗ್ರೂಪ್​​ನ ಚೇರ್​​ಮ್ಯಾನ್​ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ.

ಫೋರ್ಬ್ಸ್​ ಪತ್ರಿಕೆ 2021ರ 10 ಜನ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 84.5 ಬಿಲಿಯನ್ ಡಾಲರ್​ ಮೌಲ್ಯದ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅದಾನಿಯವರ ಆಸ್ತಿ ಮೌಲ್ಯ 50.5 ಬಿಲಿಯನ್ ಡಾಲರ್​. ಅದಾನಿಯವರ ಆಸ್ತಿ ಮೌಲ್ಯ ಒಂದೇ ವರ್ಷದಲ್ಲಿ 5 ಪಟ್ಟು ಹೆಚ್ಚಾಗಿದೆ ಎಂದು ಫೋರ್ಬ್ಸ್​ ತಿಳಿಸಿದೆ. ಮೂರನೇ ಸ್ಥಾನದಲ್ಲಿ ಎಚ್​ಸಿಎಲ್​ ಸಂಸ್ಥಾಪಕ ಶಿವ ನಾಡರ್ ಇದ್ದು, ನಾಲ್ಕನೇ ಸ್ಥಾನದಲ್ಲಿ ಡಿ-ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣನ್​ ದಮಾನಿ ಇದ್ದಾರೆ. ಈ ಹಿಂದೆ ದಮಾನಿ ಅವರು 2ನೇ ಸ್ಥಾನದಲ್ಲಿದ್ದರು.

ಕಳೆದ ವರ್ಷ 102 ಬಿಲಿಯನೇರ್​ಗಳ ಸಂಖ್ಯೆ ಇತ್ತು. ಆದರೆ ಈ ಬಾರಿ 140ಕ್ಕೆ ಏರಿದೆ ಎಂದು ಫೋರ್ಬ್ಸ್​ ತಿಳಿಸಿದೆ. ಮುಕೇಶ್ ಅಂಬಾನಿ ಇಡೀ ಏಷ್ಯಾದಲ್ಲೇ ನಂ.1 ಶ್ರೀಮಂತ. ತೈಲೋದ್ಯಮದಿಂದ-ಟೆಲಿಕಾಂ ಕ್ಷೇತ್ರದವರೆಗೆ ಅವರ ಗಳಿಕೆ ಇದ್ದು, ಈ ಹಿನ್ನೆಲೆಯಲ್ಲಿ ಅವರು ಅನೇಕ ವರ್ಷಗಳಿಂದಲೂ ಶ್ರೀಮಂತರ ಪಟ್ಟಿಯಲ್ಲಿ ನಂಬರ್​ 1ರ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ.

ಫೋರ್ಬ್ಸ್ ಪಟ್ಟಿ ಮಾಡಿದ ಭಾರತದ 10 ಜನ ಶ್ರೀಮಂತರ ಹೆಸರು ಮತ್ತು ಆಸ್ತಿ ಮೌಲ್ಯ:

  • ಮುಕೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ): 84.5 ಬಿಲಿಯನ್ ಡಾಲರ್​
  • ಗೌತಮ್ ಅದಾನಿ (ಅದಾನಿ ಗ್ರೂಪ್ ಚೇರ್​ಮ್ಯಾನ್​): 50.5 ಬಿಲಿಯನ್ ಡಾಲರ್​
  • ಶಿವ ನಾಡರ್ (ಎಚ್​ಸಿಎಲ್​ ಟೆಕ್ನಾಲಜೀಸ್​​ ಸಂಸ್ಥಾಪಕ​): 23.5 ಬಿಲಿಯನ್ ಡಾಲರ್​
  • ರಾಧಾಕೃಷ್ಣನ್​ ದಮಾನಿ (ಡಿ-ಮಾರ್ಟ್ ಸಂಸ್ಥಾಪಕ): 16.5 ಬಿಲಿಯನ್ ಡಾಲರ್​​
  • ಉದಯ್​ ಕೋಟಾಕ್​ (ಕೋಟಾಕ್ ಮಹೀಂದ್ರಾ ಕಾರ್ಯನಿರ್ವಾಹಕ ಉಪಾಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ): 15.9 ಬಿಲಿಯನ್ ಡಾಲರ್​
  • ಲಕ್ಷ್ಮೀ ಮಿತ್ತಲ್ ​(ಆರ್ಸೆಲರ್​ ಮಿತ್ತಲ್​ ಅಧ್ಯಕ್ಷ, ಸಿಇಒ): 14.9 ಬಿಲಿಯನ್ ಡಾಲರ್​
  • ಕುಮಾರ್ ಬಿರ್ಲಾ (ಆದಿತ್ಯ ಬಿರ್ಲಾ ಚೇರ್​ಮೆನ್​): 12.8 ಬಿಲಿಯನ್ ಡಾಲರ್​
  • ಸೈರಸ್ ಪೂನವಾಲಾ (ಪೂನಾವಾಲಾ ಗ್ರೂಪ್​ ಅಧ್ಯಕ್ಷ): 12.7 ಬಿಲಿಯನ್ ಡಾಲರ್​
  • ದಿಲೀಪ್​ ಸಾಂಘ್ವಿ (ಸನ್ ಫಾರ್ಮಾಸ್ಯುಟಿಕಲ್ಸ್ ಸ್ಥಾಪಕ) :10.9 ಬಿಲಿಯನ್ ಡಾಲರ್​
  • ಸುನಿಲ್​ ಮಿತ್ತಲ್​ ಮತ್ತು ಕುಟುಂಬ (ಭಾರತಿ ಎಂಟರ್​ಪ್ರೈಸಸ್​ ಸ್ಥಾಪಕ-ಚೇರ್​ಮ್ಯಾನ್​​): 10.5 ಬಿಲಿಯನ್ ಡಾಲರ್

Last Updated : Apr 7, 2021, 3:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.