ETV Bharat / bharat

'ಮುಕ್ತವಾಗಿ ರಾಷ್ಟ್ರಧ್ವಜ ಹಾರಿಸುವ ಅವಕಾಶ ನೀಡಿ': ಲೋಕಸಭೆಯಲ್ಲಿ ಸಂಸದೆ ಸುಮಲತಾ ಕಿಡಿ - ಲೋಕಸಭೆಯಲ್ಲಿ ಸುಮಲತಾ ಅಂಬರೀಶ್

ಲೋಕಸಭೆಯಲ್ಲಿ ಮಾತನಾಡಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ದೇಶದ ಪ್ರತಿಯೊಬ್ಬರು ಯಾವುದೇ ರೀತಿಯ ಭಯವಿಲ್ಲದೇ ರಾಷ್ಟ್ರಧ್ವಜವನ್ನ ಹಾರಿಸುವ ಅವಕಾಶ ಸಿಗುವಂತಾಗಬೇಕು ಎಂದು ಕಿಡಿ ಕಾರಿದರು.

MP Sumalatha Ambareesh talk in Lok sabha

author img

By

Published : Feb 12, 2022, 5:30 AM IST

ನವದೆಹಲಿ: ಬಜೆಟ್​ ಅಧಿವೇಶನದ ಕೊನೆಯ ದಿನವಾದ ನಿನ್ನೆ ಅನೇಕ ವಿಚಾರಗಳ ಕುರಿತು ಸಂಸದರು ಮಾತನಾಡಿದರು. ಈ ಸಂದರ್ಭದಲ್ಲಿ ಮಂಡ್ಯ ಲೋಕಸಭೆ ಸಂಸದೆ ಸುಮಲತಾ ಅಂಬರೀಶ್ ಕೂಡ ತ್ರಿವರ್ಣ ಧ್ವಜ ಹಾರಾಟಕ್ಕೆ ಅಡ್ಡಿ ಪಡಿಸಿರುವ ವಿಚಾರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಸಂಸದೆ ಸುಮಲತಾ ಮಾತು

ಜನವರಿ 26ರಂದು ಗಣರಾಜ್ಯೋತ್ಸದ ಅಂಗವಾಗಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ತ್ರಿವರ್ಣ ಧ್ವಜ ಹಾರಾಟ ಮಾಡಲು ಅಡ್ಡಿಪಡಿಸಿರುವ ಘಟನೆ ಬಗ್ಗೆ ಮಂಡ್ಯದ ಸಂದೆ ಸುಮಲತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿರುವ ಸಂಸದೆ, ಆಂಧ್ರಪ್ರದೇಶದ ಗಂಟೂರು ಜಿಲ್ಲೆಯಲ್ಲಿರುವ ಜನ್ನಾ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಮುಂದಾದ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದರು. ಇಂತಹ ಘಟನೆ ಕರ್ನಾಟಕದಲ್ಲೂ ನಡೆದಿವೆ ಎಂದು ವಿಷಾದ ವ್ಯಕ್ತಪಡಿಸಿದರು. ದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಬಾರದು ಎಂಬ ನಿಯಮ ಇದೆಯೇ? ಎಂದು ಪ್ರಶ್ನೆ ಮಾಡಿರುವ ಅವರು, ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿರಿ: Watch: ಉತ್ತರಾಖಂಡದಲ್ಲಿ 'ಬಿಜೆಪಿ' ಅಧಿಕಾರಕ್ಕೆ ಬರಲ್ಲ ಎಂದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​

ಇದೇ ವೇಳೆ ಜಮ್ಮು-ಕಾಶ್ಮೀರದ ಲಾಲ್​ ಚೌಕ್​ನಲ್ಲಿ ತ್ರಿವರ್ಣ ಧ್ವಜ ಹಾರಿಸುವ ವಿಚಾರವನ್ನ ಪ್ರಸ್ತಾಪಿಸಿ, ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.