ಶಿಯೋಪುರ್(ಮಧ್ಯಪ್ರದೇಶ): ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಜನ-ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಕೆಲವರು ತೊಂದರೆಗೊಳಗಾಗಿದ್ದು, ಪ್ರಾಣ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ.
ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವಿಜಯಪುರದಲ್ಲಿ ಮಹಾಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ, ಬಿಲ್ಡಿಂಗ್ವೊಂದರಲ್ಲಿ 60 ಜನರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
-
#WATCH | Madhya Pradesh: Sheopur district's Vijaypur area flooded due to overflowing Parvati river and heavy rain. pic.twitter.com/cMpXfv33Pz
— ANI (@ANI) August 2, 2021 " class="align-text-top noRightClick twitterSection" data="
">#WATCH | Madhya Pradesh: Sheopur district's Vijaypur area flooded due to overflowing Parvati river and heavy rain. pic.twitter.com/cMpXfv33Pz
— ANI (@ANI) August 2, 2021#WATCH | Madhya Pradesh: Sheopur district's Vijaypur area flooded due to overflowing Parvati river and heavy rain. pic.twitter.com/cMpXfv33Pz
— ANI (@ANI) August 2, 2021
ಲಭ್ಯವಾಗಿರುವ ಮಾಹಿತಿ ಪ್ರಕಾರ, ಇವರೆಲ್ಲರೂ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಉದ್ದೇಶದಿಂದ ತೆರಳಿದ್ದರು. ರಾತ್ರಿ ವೇಳೆ ದೊಡ್ಡ ಪ್ರಮಾಣದ ಮಳೆ ಸುರಿದ ಕಾರಣ ಎಲ್ಲರೂ ಬಿಲ್ಡಿಂಗ್ನೊಳಗೆ ಸಿಲುಕಿದ್ದಾರೆ. ಪ್ರವಾಹದಿಂದಾಗಿ ಈಗಾಗಲೇ ನೆಲಮಹಡಿ ಸಂಪೂರ್ಣ ಜಲಾವೃತಗೊಂಡಿದ್ದು, ಎಲ್ಲರನ್ನು ಮೊದಲನೇ ಮಹಡಿಗೆ ಶಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿ ನೀರಜ್ ಶರ್ಮಾ ತಿಳಿಸಿದ್ದಾರೆ.
ಕಳೆದ 24 ಗಂಟೆಯಲ್ಲಿ ವಿಜಯಪುರದಲ್ಲಿ 160.5 mm ಮಳೆಯಾಗಿದೆ. ಹೀಗಾಗಿ, ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೇ ಕಾರಣಕ್ಕಾಗಿ ಮಧ್ಯಪ್ರದೇಶದ ಗ್ವಾಲಿಯರ್ ಶಿವಪುರಿ, ಗುನ್ನಾ, ಅಶೋಕನಗರ, ಶಿಯೋಪುರ್, ಬಿಂದ್, ನಿಮಚ್, ಪನ್ನಾ ಹಾಗೂ ಮಂದಸೌರ್ನಲ್ಲಿ ಮುನ್ಸೂಚನೆ ನೀಡಲಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿರಿ: ದೆಹಲಿಯಲ್ಲಿ ನಿಲ್ಲದ ದುಷ್ಕೃತ್ಯ: ಗಾಜಿಯಾಬಾದ್ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳ ಬಂಧನ
ಮಧ್ಯಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಭಿಂಡ್ ಜಿಲ್ಲೆಯಲ್ಲಿರುವ ಕಾರಾಗೃಹದ ಗೋಡೆ ಕುಸಿದು 22 ಕೈದಿಗಳು ಗಾಯಗೊಂಡಿರುವ ಘಟನೆ ಸಹ ನಡೆದಿದೆ. ಕಳೆದ 24 ಗಂಟೆಯಲ್ಲಿ 8ಕ್ಕೂ ಹೆಚ್ಚಿನ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.