ETV Bharat / bharat

ಸಂಸತ್ ಭದ್ರತಾ ಲೋಪ: ಪ್ರತಾಪ್​ ಸಿಂಹ ಹೇಳಿಕೆ ದಾಖಲಿಸಲಾಗಿದೆ- ಸಚಿವ ಪ್ರಹ್ಲಾದ್ ಜೋಶಿ

ಸಂಸತ್ ಭದ್ರತಾ ಲೋಪದ ಘಟನೆಯ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

mp-pratap-simhas-statement-recorded-minister-pralhad-joshi

author img

By PTI

Published : Dec 22, 2023, 6:23 PM IST

ನವದೆಹಲಿ: ಸಂಸತ್ ಭದ್ರತಾ ಲೋಪದ ಘಟನೆಯ ತನಿಖೆಯ ಭಾಗವಾಗಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೋಶಿ, ಡಿಸೆಂಬರ್ 13ರ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ವರದಿ ಬಂದ ನಂತರ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಡಿಸೆಂಬರ್ 13ರಂದು ಲೋಕಸಭೆಯೊಳಗೆ ಪ್ರವೇಶಿಸಿದ್ದ ಪ್ರತಿಭಟನಾಕಾರನೋರ್ವ ಸ್ಮೋಕ್ ಶೆಲ್ ಎಸೆದು ಆತಂಕ ಸೃಷ್ಟಿಸಿದ್ದ. ಈತ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದು ಸಂಸತ್ತಿಗೆ ಪ್ರವೇಶಿಸಿದ್ದ. ಹೀಗಾಗಿ ಈಗ ತನಿಖೆಯ ಭಾಗವಾಗಿ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ಕೂಡ ಅಧಿಕೃತವಾಗಿ ದಾಖಲಿಸಲಾಗಿದೆ. ಸಿಂಹ ಅವರು ಮೈಸೂರಿನಿಂದ ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಲೋಕಸಭೆಯಿಂದ ಸಂಸದರನ್ನು ಅಮಾನತುಗೊಳಿಸಲು ಸರ್ಕಾರ ಉತ್ಸುಕವಾಗಿರಲಿಲ್ಲ. ಆದರೆ ವಿರೋಧ ಪಕ್ಷದ ಸದಸ್ಯರು ತಮ್ಮನ್ನು ಅಮಾನತುಗೊಳಿಸುವಂತೆ ಅವರಾಗಿಯೇ ಮನವಿ ಮಾಡಿದರು ಎಂದು ಹೇಳಿದರು.

ಸಂಸತ್ತಿನ ಉಭಯ ಸದನಗಳು ಅನುಮೋದಿಸಿದ ಕರಡು ಶಾಸನಗಳಲ್ಲಿ ಏನೋ ತಪ್ಪಾಗಿದೆ ಎಂದು ಭಾವಿಸಿದರೆ ಪ್ರತಿಪಕ್ಷಗಳು ಮೂರು ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಮುಕ್ತವಾಗಿವೆ ಎಂದರು.

ಗುರುವಾರ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನವು 17 ನೇ ಲೋಕಸಭೆಯ ಕೊನೆಯ ಅಧಿವೇಶನವಾಗಿದೆ. ಏಕೆಂದರೆ ಬಜೆಟ್ ಅಧಿವೇಶನವು ವೋಟ್ ಆನ್ ಅಕೌಂಟ್ ಅನ್ನು ಮಾತ್ರ ಅನುಮೋದಿಸುತ್ತದೆ ಮತ್ತು ಯಾವುದೇ ಶಾಸಕಾಂಗ ವ್ಯವಹಾರ ನಡೆಸುವ ಸಾಧ್ಯತೆಯಿಲ್ಲ ಎಂದು ಜೋಶಿ ಆರಂಭದಲ್ಲಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ 370 ನೇ ವಿಧಿಯನ್ನು ರದ್ದುಪಡಿಸಿದ್ದರಿಂದ 17 ನೇ ಲೋಕಸಭೆಯ ಮೊದಲ ಅಧಿವೇಶನವು ಐತಿಹಾಸಿಕವಾಗಿದೆ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನವು ಕ್ರಿಮಿನಲ್ ನ್ಯಾಯ ಕಾನೂನುಗಳಿಂದ ಬ್ರಿಟಿಷ್ ರಾಜ್ ಯುಗದ ಕಾನೂನು ಸಿದ್ಧಾಂತಗಳ ಅವಶೇಷಗಳನ್ನು ತೆಗೆದುಹಾಕಿದ್ದಕ್ಕೆ ಸಾಕ್ಷಿಯಾಗಿದೆ ಎಂದರು. ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೋಶಿ, ಕಾಂಗ್ರೆಸ್ ಮಾಜಿ ಅಧ್ಯಕ್ಷರು ಸಾಂವಿಧಾನಿಕ ಪ್ರಾಧಿಕಾರವನ್ನು ಅಣಕಿಸುವ ಲೋಕಸಭಾ ಸದಸ್ಯರ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಾ ಆನಂದಿಸುತ್ತಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ: 2047ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತ; ಸವಾಲುಗಳು ಮತ್ತು ಅವಕಾಶಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.