ETV Bharat / bharat

ಅನುಮಾನಾಸ್ಪದ ಸಾವು: ಸ್ಮಶಾನದಲ್ಲಿ ಗರ್ಭಿಣಿಯ ಮರಣೋತ್ತರ ಪರೀಕ್ಷೆ ನಡೆಸಿದ ಡ್ರಮ್ಮರ್‌ಗಳು - ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆ

ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ಮಹಿಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಡ್ರಮ್ಮರ್‌ಗಳು ನಡೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಬಹಿರಂಗವಾಗಿದೆ.

mp-postmortem-of-pregnant-woman-conducted-by-drummers-at-crematorium-video-surfaces
ಅನುಮಾನಾಸ್ಪದ ಸಾವು: ಗರ್ಭಿಣಿಯ ಮರಣೋತ್ತರ ಪರೀಕ್ಷೆ ನಡೆಸಿದ ಡ್ರಮ್ಮರ್‌ಗಳು
author img

By

Published : Oct 12, 2022, 5:18 PM IST

ಜಬಲ್‌ಪುರ (ಮಧ್ಯಪ್ರದೇಶ): ಅನುಮಾನಾಸ್ಪದವಾಗಿ ಮೃತಪಟ್ಟ ಗರ್ಭಿಣಿಯ ಮರಣೋತ್ತರ ಪರೀಕ್ಷೆಯನ್ನು ಸ್ಮಶಾನದಲ್ಲಿ ಡ್ರಮ್ಮರ್‌ಗಳ ಮೂಲಕ ಮಾಡಿಸಿರುವ ಗಂಭೀರ ಆರೋಪ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ಕೇಳಿ ಬಂದಿದೆ.

ಪನಾಗರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 17ರಂದು ರಾಧಾ ಲೋಧಿ ಎಂಬ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಗಂಡನ ಮನೆಯವರ ಕಿರುಕುಳ ಹಾಗೂ ನಿರ್ಲಕ್ಷ್ಯದಿಂದ ರಾಧಾ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪ ಮಾಡಿದ್ದರು.

ಇದೀಗ ರಾಧಾ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಡ್ರಮ್ಮರ್‌ಗಳು ನಡೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಬಹಿರಂಗವಾಗಿದೆ. ರಾಧಾ ಸಾವಿನ ಸತ್ಯಾಂಶವನ್ನು ಮುಚ್ಚಿಡಲು ಗಂಡನ ಮನೆಯವರೇ ಈ ರೀತಿ ಮಾಡಿಸಿದ್ದಾರೆ. ಅಲ್ಲದೇ, ಮರಣೋತ್ತರ ಪರೀಕ್ಷೆ ನಡೆಸುವ ಬಗ್ಗೆ ಪೊಲೀಸರು ಹಾಗೂ ವೈದ್ಯರಿಗೂ ತಿಳಿಸಿಲ್ಲ ಎಂದು ರಾಧಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಾವಿಗೆ ಮುನ್ನವೂ ಜಗಳವಾಗಿತ್ತು: 2021ರ ಏಪ್ರಿಲ್​ 24ರಂದು ಗೋಪಿ ಪಟೇಲ್ ಎಂಬುವವರಿಗೆ ರಾಧಾ ಲೋಧಿ ಅವರನ್ನು ಮದುವೆ ಮಾಡಿ ಕೊಡಲಾಗಿತ್ತು. ಆದರೆ, ಮದುವೆಯಾದಾಗಿನಿಂದ ವರದಕ್ಷಿಣೆಗಾಗಿ ರಾಧಾ ಅವರಿಗೆ ಅತ್ತೆ ಮಾವಂದಿರು ಕಿರುಕುಳ ನೀಡುತ್ತಿದ್ದರು. ಅಲ್ಲದೇ, ಸಾವಿಗೂ ಒಂದು ದಿನ ಮೊದಲು ಸಹ ರಾಧಾ ಜೊತೆಗೆ ಅತ್ತೆ ಜಗಳವಾಡಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಆದ್ದರಿಂದ ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸದ್ಯ ಪ್ರಕರಣದ ಗಂಭೀರತೆ ಅರಿತ ಎಸ್ಪಿ ಸಿದ್ಧಾರ್ಥ ಬಹುಗುಣ ತನಿಖೆಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ: ದಲಿತ ಯುವತಿಯೊಂದಿಗೆ ಅನುಚಿತ ವರ್ತನೆ: ಪ್ರಶ್ನಿಸಿದ ಮತ್ತೊಬ್ಬ ದಲಿತನ ಕೊಲೆ ಮಾಡಿದ ಆರೋಪಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.